ರೌಡಿ ಸ್ಟೀವನ್‌ ರಾಜ್‌ ಕೊಲೆಗೆ ಪತ್ನಿ ಸಂಚು

Team Udayavani, Jun 6, 2019, 3:05 AM IST

ಬೆಂಗಳೂರು: ರೌಡಿಶೀಟರ್‌ ಸ್ಟೀವನ್‌ ರಾಜ್‌ ಕೊಲೆ ಪ್ರಕರಣದ ರಹಸ್ಯ ಭೇದಿಸಿರುವ ಕೆ.ಜಿ ಹಳ್ಳಿ ಠಾಣೆ ಪೊಲೀಸರು, ಸ್ವೀವನ್‌ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಟೀವನ್‌ ಪತ್ನಿ ರಂಜನಿ (24), ಕಿರಣ್‌ಕುಮಾರ್‌, ಮಹೇಂದ್ರನ್‌ ಬಂಧಿತರು. ಕಿರಣ್‌ ಕುಮಾರ್‌ ಹಾಗೂ ಮಹೇಂದ್ರನ್‌ ಒಳಸಂಚು ರೂಪಿಸಿ ಮೇ 30ರಂದು ರಾತ್ರಿ ಸ್ವೀವನ್‌ರಾಜ್‌ನನ್ನು ಕೊಲೆಗೈದಿದ್ದರು. ಪತಿ ಸ್ಟೀವನ್‌ ರಾಜ್‌ ಕೊಲೆ ಮಾಡಲು ಆರೋಪಿಗಳಿಬ್ಬರಿಗೂ ರಂಜಿತಾ ಕುಮ್ಮಕ್ಕು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಶೀಟರ್‌ ಆಗಿದ್ದ ಪತಿ ಸ್ವೀವನ್‌ ಗಾಂಜಾ ಸೇವಿಸುತ್ತಿದ್ದ ವಿನಾಕಾರಣ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. ಜತೆಗೆ, ಸಹೋದರನ ಜತೆ ಹಲವು ಬಾರಿ ಜಗಳ ಮಾಡಿ ಕೊಲೆಮಾಡಲು ಯತ್ನಿಸಿದ್ದ. ಹೀಗಾಗಿ ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಆರೋಪಿ ರಂಜಿನಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೆಲ ವರ್ಷಗಳಿಂದ ಸ್ವೀವನ್‌ ರಾಜ್‌ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಚೆನೈನಲ್ಲಿ ನೆಲೆಸಿದ್ದ. ಒಂದು ತಿಂಗಳ ಹಿಂದೆ ಹಿದಾಯತ್‌ ನಗರದಲ್ಲಿರುವ ಪೋಷಕರ ಮನೆಗೆ ರಂಜಿತಾ ಆಗಮಿಸಿದ್ದಳು. ಈ ವೇಳೆ ಒಮ್ಮೆ ಆಗಮಿಸಿದ್ದ ಸ್ವೀವನ್‌ ರಂಜಿತಾ ಮತ್ತೂಬ್ಬ ಯುವಕನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ಕುರಿತು ಜಗಳವಾಡಿದ್ದ ಎನ್ನಲಾಗಿದೆ.

ಹಳೇ ವೈಷಮ್ಯ: ಸ್ವೀವನ್‌ ಕೊಲೆ ಮಾಡಲು ನಿರ್ಧರಿಸಿದ್ದ ರಂಜಿತಾ ಸ್ಟೀವನ್‌ ಸ್ನೇಹಿತರಾದ ಕಿರಣ್‌ಕುಮಾರ್‌, ಸ್ವೀವನ್‌ ಮೇಲೆ ಹಳೆಯ ವೈಷಮ್ಯ ಹೊಂದಿದ್ದ ಮಹೇಂದ್ರನ್‌ ಸಹಾಯ ಕೇಳಿದ್ದು, ಅವರೂ ಒಪ್ಪಿಕೊಂಡಿದ್ದರು.ಅದರಂತೆ ಮೇ 30ರಂದು ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಸ್ವೀವನ್‌ನನ್ನು ಪುಸಲಾಯಿಸಿದ್ದ ಮಹೇಂದ್ರನ್‌ ಹಾಗೂ ಕಿರಣ್‌ಕುಮಾರ್‌ ಜತೆಗೆ ಕರೆದುಕೊಂಡಿದ್ದರು.

ರಾತ್ರಿ ಮದ್ಯ ಸೇವಿಸಲು ಕರೆದೊಯ್ದಿದ್ದ ಆರೋಪಿಗಳಿಬ್ಬರೂ ಕಂಠಪೂರ್ತಿ ಮದ್ಯ ಕುಡಿಸಿದ್ದರು. ಬಳಿಕ ಮಧ್ಯರಾತ್ರಿ ಸುಮಾರಿಗೆ ಬಾಣಸವಾಡಿಯ 80 ಅಡಿ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆಗೈದು ಮೃತದೇಹವನ್ನು ಆಟೋದಲ್ಲಿ ಸಾಗಿಸಿ ಹಿದಾಯತ್‌ ನಗರದ ನಾಲ್ಕನೇ ಕ್ರಾಸ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು.

ಬುಧವಾರ ತಡರಾತ್ರಿ 4 ಗಂಟೆ ಸುಮಾರಿಗೆ ಅಪರಿಚಿತರು ಪತ್ನಿ ರಂಜಿತಾ ಮನೆಯ ಬಾಗಿಲು ಬಡಿದಿದ್ದಾರೆ. ಕೂಡಲೇ ಅವರು ತೆರೆದಿಲ್ಲ. ಇದಾದ ಕೆಲ ಸಮಯದ ಬಳಿಕ ರಂಜಿತಾ ಹಾಗೂ ಆಕೆಯ ಸಂಬಂಧಿಕರು ಮನೆಯ ಬಾಗಿಲು ತೆರೆದು ಮನೆಯ ಮುಂಭಾಗದ ಕ್ರಾಸ್‌ನಲ್ಲಿದ್ದ ಆಟೋ ಗಮನಿಸಿದಾಗ ಆಟೋದಲ್ಲಿ ಕೊಲೆಯಾಗಿರುವ ಸ್ಟೀವನ್‌ ರಾಜ್‌ ಮೃತದೇಹ ಕಂಡು ಬಂದಿದೆ ಎಂದು ಪೊಲೀಸರಿಗೆ ತಿಳಿಸಿದರು. ಆದರೆ, ಪತಿಯ ಕೊಲೆಯ ಬಗ್ಗೆ ರಂಜಿತಾಳಿಗೆ ಮೊದಲೇ ಗೊತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

“ಠಾಣೆಯಲ್ಲಿ ಹೈಡ್ರಾಮ ಬಂಧನ’: ಸ್ವೀವನ್‌ ರಾಜ್‌ ಕೊಲೆಯಾದ ಬಳಿಕ ತನಗೆ ಏನೂ ಗೊತ್ತಿಲ್ಲ ಎಂಬಂತೆ ರಂಜಿತಾ ನಟಿಸುತ್ತಿದ್ದಳು. ಪತಿಯ ಮೃತದೇಹ ಕಂಡ ಕೂಡಲೇ ತಲೆಸುತ್ತಿ ಬಿದ್ದಿದ್ದಳು. ಪತಿಯ ಕೊಲೆಯ ಬಗ್ಗೆ ಆಕೆಯೇ ದೂರು ನೀಡಲು ಮುಂದಾಗಿದ್ದಳು. ಆದರೆ, ಆಕೆಯ ಬಗ್ಗೆಯೂ ಅನುಮಾನವಿದ್ದದ್ದರಿಂದ ಸ್ವೀವನ್‌ ಸಹೋದರನಿಂದ ದೂರು ತೆಗೆದುಕೊಂಡು ತನಿಖೆ ಚುರುಕುಗೊಳಿಸಿದಾಗ ಆರೋಪಿಗಳಾದ ಕಿರಣ್‌ ಜತೆ ರಂಜಿತಾ ಹಲವು ಬಾರಿ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆ ಸುಳಿವು ಸಿಕ್ಕಿತ್ತು.

ಮತ್ತೂಂದೆಡೆ ಕೊಲೆ ನಡೆದ ಮಾರನೇ ದಿನದಿಂದಲೇ ಠಾಣೆಗೆ ಬರಲು ಆರಂಭಿಸಿದ ರಂಜಿತಾ ಆರೋಪಿಗಳು ಯಾರು? ಯಾವಗ ಬಂಧಿಸುತ್ತೀರಿ ಎಂದು ಪದೇ ಪದೆ ಕೇಳಲಾರಂಭಿಸಿದಳು. ಅವಳ ಸ್ವಭಾವದಲ್ಲಿಯೂ ಸಾಕಷ್ಟು ಬದಲಾವಣೆ ಆಗಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತಿ ಸ್ಟೀವನ್‌ ಕೊಲೆ ರಹಸ್ಯ ಬಾಯ್ಬಿಟ್ಟಳು ಎಂದು ಅಧಿಕಾರಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

  • ಬೆಂಗಳೂರು: ಆಸ್ಪತ್ರೆ ಪಕ್ಕದಲ್ಲಿಯೇ ನಡೆಯುವ ಸಂತೆಗೆ ನಿತ್ಯ ಸಹಸ್ರಾರು ಜನ ಬರುತ್ತಾರೆ. ಆ ಪೈಕಿ ಬಹುತೇಕರು ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಸಂತೆಗೆ...

  • ಬೆಂಗಳೂರು: ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ಲಕ್ಷ್ಮಣ್‌ಕುಮಾರ್‌ (33) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು,...

ಹೊಸ ಸೇರ್ಪಡೆ