ಘನತ್ಯಾಜ್ಯ ವಿಂಗಡಣೆ ಪ್ರತಿಯೊಬ್ಬರ ಜವಾಬ್ದಾರಿ


Team Udayavani, Apr 17, 2017, 12:36 PM IST

padma-mayor.jpg

ಬೆಂಗಳೂರು: ಘನತ್ಯಾಜ್ಯ ವಿಚಾರದಲ್ಲಿ ಬಿಬಿಎಂಪಿಯನ್ನು ದೂರುವ ಬದಲು ನಾಗರಿಕರು ತ್ಯಾಜ್ಯ ವಿಂಗಡಿಸಲು ಮುಂದಾಗಬೇಕು ಎಂದು ಮೇಯರ್‌ ಜಿ.ಪದ್ಮಾವತಿ ಕರೆ ನೀಡಿದ್ದಾರೆ. ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ವಿಜಿನಾಪುರ ವಾರ್ಡ್‌ನಲ್ಲಿ ಬಿಬಿಎಂಪಿ ಹಾಗೂ ಕೆ.ಆರ್‌.ಪುರ ಕ್ಷೇಮಾಭಿವೃದ್ಧಿ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾಂಪೋಸ್ಟ್‌ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ತ್ಯಾಜ್ಯ ವಿಂಗಡಿಸಿ ಪಾಲಿಕೆಗೆ ನೀಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದರು.

ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು. ಜತೆಗೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ ಸುತ್ತಮುತ್ತಲಿನ ವಾತಾವರಣ ಸ್ವತ್ಛವಾಗಿಟ್ಟುಕೊಳ್ಳುವ ಮೂಲಕ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. 

ತ್ಯಾಜ್ಯ ಸ್ವೀಕರಿಸಲು ಪೌರಕಾರ್ಮಿಕರು ತಡವಾಗಿ ಬರುತ್ತಾರೆ ಎಂದು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವುದು ಸರಿಯಲ್ಲ. ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಸಾರ್ವಜನಿಕರು ಪಾಲಿಕೆಗೆ ಸಹಕಾರ ನೀಡಬೇಕು. ದೇಶದಲ್ಲಿಯೇ ಬೆಂಗಳೂರು ತ್ಯಾಜ್ಯ ವಿಂಗಡಣೆಯಲ್ಲಿ ಶೇ.50ರಷ್ಟು ಸಾಧನೆ ಮಾಡಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಾಗರಿಕರು ತ್ಯಾಜ್ಯ ವಿಂಗಡಿಸಿ ನೀಡುವುದರಿಂದ ಅದನ್ನು ಗೊಬ್ಬರವಾಗಿ ಪರಿವರ್ತಿಬಹುದು ಎಂದರು.

ಶಾಸಕ ಬಿ.ಎ.ಬಸವರಾಜ್‌, ಭೂಮಿಯಲ್ಲಿ ಕರಗದ ಮತ್ತು ಮಣ್ಣಿನ ಫ‌ಲವತ್ತತೆಗೆ ಮಾರಕವಾಗಬಲ್ಲ ವಸ್ತುಗಳನ್ನು ಮನೆಗಳಲ್ಲಿಯೇ ವಿಂಗಡಿಸಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ನಾಗರಿಕರು ಮುಂದಾಗಬೇಕು. ತ್ಯಾಜ್ಯ ವಿಲೇವಾರಿ ಕುರಿತು ಪಾಲಿಕೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. 

ಕಾಂಪೋಸ್ಟ್‌ ಸಂತೆಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ರಾಜಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗೊಬ್ಬರ ತಯಾರಿಕೆ, ಮರುಬಳಕೆ, ಬಯೋಗ್ಯಾಸ್‌, ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಯಿತು.

ಟಾಪ್ ನ್ಯೂಸ್

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.