Udayavni Special

ಯುಪಿಒಆರ್‌ ಯೋಜನೆ ಶೀಘ್ರ ಜಾರಿ: ಆರ್‌.ವಿ.ದೇಶಪಾಂಡೆ 


Team Udayavani, Aug 5, 2018, 6:00 AM IST

rv-deshpande-2626.jpg

ಬೆಂಗಳೂರು: ನಗರಗಳಲ್ಲಿನ ಆಸ್ತಿಗಳ ಮಾಲೀಕತ್ವದ ಹಕ್ಕಿಗೆ ಸಂಬಂಧಪಟ್ಟಂತೆ ದಾಖಲೆ ಸಿದ್ಧಪಡಿಸುವ ಮಹತ್ವಾಕಾಂಕ್ಷಿ “ನಗರ ಆಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆ’ಯನ್ನು (ಯುಪಿಒಆರ್‌- ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್ಸ್‌ ಪ್ರಾಜೆಕ್ಟ್) ರಾಜ್ಯಾದ್ಯಂತ ಕ್ಷಿಪ್ರವಾಗಿ ಜಾರಿಗೊಳಿಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

1964ರ ಕರ್ನಾಟಕ ಭೂಕಂದಾಯ ಕಾಯ್ದೆ ಮತ್ತು ನಿಯಮಾವಳಿ 1966ರನ್ವಯ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನವಾಗುತ್ತಿದೆ. ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಜಾರಿಗೊಳಿಸುತ್ತಿರುವ ಯೋಜನೆಗೆ ಮೊದಲ ಸುತ್ತಿನಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಮಂಗಳೂರು ನಗರ ಆಯ್ಕೆಯಾಗಿವೆ. ಯೋಜನೆಯಡಿ ನಗರ ಪ್ರದೇಶ ವ್ಯಾಪ್ತಿಯ ಪ್ರತಿ ಆಸ್ತಿಯನ್ನು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಲಾಗುತ್ತದೆ. ಅದರಂತೆ ಈ ಮೂರು ನಗರಗಳಲ್ಲಿ ಆಸ್ತಿ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಆಸ್ತಿಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳಿಂದ ದಾಖಲೆ ಸಂಗ್ರಹಿಸಿ ನಂತರ ಪರಿಶೀಲನೆಗೆ ಒಳಪಡಿಸಲಾಗುವುದು. ಬಳಿಕ ಹಕ್ಕು ವಿಚಾರಣೆ ಪ್ರಕ್ರಿಯೆ ಆರಂಭಿಸಿ ಆಸ್ತಿ ದಾಖಲೆ (ಪ್ರಾಪರ್ಟಿ ರೆಕಾರ್ಡ್‌) ಸಿದ್ಧಪಡಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಗುವುದು. ನಗರ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗೆ ಆಸ್ತಿ ದಾಖಲೆ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಶಿವಮೊಗ್ಗದಲ್ಲಿ ಆಸ್ತಿ ದಾಖಲೆ ವಿತರಿಸಲಾಗಿದೆ. ಸದ್ಯ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಮೈಸೂರು ನಗರದಲ್ಲೂ ಆಸ್ತಿ ನೋಂದಣಿಗೆ ಇದೇ ಕ್ರಮ ಜಾರಿಗೊಳಿಸಲಾಗುವುದು. ಹೀಗೆ ರಾಜ್ಯದ ಎಲ್ಲ ನಗರಗಳಲ್ಲೂ ಯುಪಿಒಆರ್‌ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಮೂನೆ- 13ರ ಅನ್ವಯ ಈ ಆಸ್ತಿ ದಾಖಲೆಗಳನ್ನು ಮಾಲೀಕತ್ವದ ದಾಖಲೆಗಳೆಂದು ಪರಿಗಣಿಸಲಾಗುವುದು. ಹೀಗಾಗಿ ನಗರ ಪ್ರದೇಶಗಳಲ್ಲಿ ಆಸ್ತಿ ಹೊಂದಿರುವವರಿಗೆ ಇದು ಅತ್ಯವಶ್ಯಕ ದಾಖಲೆಯಾಗಲಿದೆ ಎಂದು ಹೇಳಿದರು.

ಯೋಜನೆಯ ಪ್ರಯೋಜನ
ಯುಪಿಒಆರ್‌ ಯೋಜನೆಯಿಂದಾಗಿ ಸರ್ಕಾರಿ ಆಸ್ತಿಗಳನ್ನು ಗುರುತಿಸಲು ಹಾಗೂ ಸಂರಕ್ಷಿಸಲು ನೆರವಾಗಲಿದೆ. ಜತೆಗೆ ಮಹಾನಗರ ಪಾಲಿಕೆಗಳು ಹಾಗೂ ನಗರ ಪಾಲಿಕೆಗಳು ಸೂಕ್ತ ಆಸ್ತಿ ತೆರಿಗೆ ಸಂಗ್ರಹಣೆಗೂ ನಿಖರ ಮಾಹಿತಿ (ಡೇಟಾಬೇಸ್‌) ಸಿದ್ಧವಾಗಲಿದೆ. ನಗರ ಪ್ರದೇಶಗಳಲ್ಲಿನ ಆಸ್ತಿಗಳ ಸ್ವರೂಪ, ಭೌಗೋಳಿಕ ಸ್ಥಿತಿ, ಪ್ರತಿ ಆಸ್ತಿಯ ನಿಖರ ವಿಸ್ತೀರ್ಣದ ಮಾಹಿತಿಯೂ ಸಿಗುತ್ತದೆ. ಜತೆಗೆ ಆಸ್ತಿಗಳಿಗೆ ಸಂಬಂಧಪಟ್ಟ ಅನಗತ್ಯ ವ್ಯಾಜ್ಯಗಳು ಕ್ರಮೇಣ ಕಡಿಮೆಯಾಗಲಿವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲೂ ಅನುಷ್ಠಾನ: ಬೆಂಗಳೂರಿನ 198 ವಾರ್ಡ್‌ಗಳ ಪೈಕಿ ಆಯ್ದ 50 ವಾರ್ಡ್‌ಗಳಲ್ಲಿ ಯುಪಿಒಆರ್‌ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಮೊದಲಿಗೆ ನಗರದ ಒಂದು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

dkಕ್ರಿಕೆಟ್‌ ಬೆಟ್ಟಿಂಗ್‌: 18 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; 18 ಮಂದಿ ಬಂಧನ

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

LIC

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

ಮಾಲ್ಡವ್ಸ್ ಗೆ ಡೋರ್ನಿಯರ್ ವಿಮಾನ ನೀಡಿದ ಭಾರತ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ!

ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಡೆದು ಹೋಗುತಿದ್ದ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದು ಯುವಕ ಸಾವು

ನಡೆದು ಹೋಗುತಿದ್ದ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದು ಯುವಕ ಸಾವು

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಸದನದಲ್ಲಿ ಶಾಸಕ ಯತ್ನಾಳ್ ವೈದ್ಯರ ವಿರುದ್ಧ ಆಧಾರ ರಹಿತ‌ ಆರೋಪ : ಡಾ.ಬಿದರಿ

ಸದನದಲ್ಲಿ ಶಾಸಕ ಯತ್ನಾಳರಿಂದ ವೈದ್ಯರ ವಿರುದ್ಧ ಆಧಾರ ರಹಿತ‌ ಆರೋಪ : ಡಾ.ಬಿದರಿ

ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

4000 ಮೆ.ಟನ್‌ ಕಬ್ಬು ನುರಿಸಲು ಯತ್ನಿಸಿ: ಜೊಲ್ಲೆ

4000 ಮೆ.ಟನ್‌ ಕಬ್ಬು ನುರಿಸಲು ಯತ್ನಿಸಿ: ಜೊಲ್ಲೆ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

dkಕ್ರಿಕೆಟ್‌ ಬೆಟ್ಟಿಂಗ್‌: 18 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; 18 ಮಂದಿ ಬಂಧನ

china

ಚೀನ ಏಕಪಕ್ಷೀಯವಾಗಿ ಎಲ್‌ಎಸಿ ಬದಲಾಯಿಸಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಭಾರತ ಸ್ಪಷ್ಟನೆ

josh-tdy-3

ಮಳೆಗಾಲದ ಸಂಜೆ ಮತ್ತು ಬಿಸಿಬಿಸಿ ಬೋಂಡಾ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.