Udayavni Special

ಅಧಿಕಾರಕ್ಕಾಗಿ ಯಾವ ಪಕ್ಷಕ್ಕಾದರೂ ಜೆಡಿಎಸ್ ‌ಬೆಂಬಲ


Team Udayavani, Dec 12, 2020, 2:05 PM IST

ಅಧಿಕಾರಕ್ಕಾಗಿ ಯಾವ ಪಕ್ಷಕ್ಕಾದರೂ ಜೆಡಿಎಸ್ ‌ಬೆಂಬಲ

ದೇವನಹಳ್ಳಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರಾದ್ಯಂತ ರೈತರುಪ್ರತಿಭಟಿಸುತ್ತಿದ್ದಾರೆ. ರೈತರ ಪಕ್ಷ ಎಂದು ಹೇಳುವ ಜೆಡಿಎಸ್‌ನವರು ಇದೀಗ ಬಿಜೆಪಿಗೆ ಬೆಂಬಲ ನೀಡಿರುವುದು ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುವುದು ತಿಳಿಯುತ್ತದೆ. ಅಧಿಕಾರದ ಆಸೆಗಾಗಿ ಯಾವ ಪಕ್ಷಕ್ಕಾದರೂ ಬೆಂಬಲಿಸುತ್ತಾರೆ ಎಂದು ಮಾಜಿ ಸಚಿವಕೃಷ್ಣಬೈರೇಗೌಡ ಆರೋಪಿಸಿದರು.

ತಾಲೂಕಿನ ಚಿಕ್ಕಸಣ್ಣೆ ಬಳಿ ಇರುವ ಎಸ್‌ಎಸ್‌ಬಿ ಕನ್‌ವೆನ್ಷನ್‌ ಹಾಲ್‌ನಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಎಪಿಎಂಸಿಕಾಯ್ದೆಯನ್ನು ತಿದ್ದುಪಡಿ ತಂದು, ರೈತರ ಮೇಲೆದುಷ್ಪರಿಣಾಮ ಬೀರಲಿದೆ. ಈ ಕಾಯ್ದೆಯಿಂದ ಅಂಬಾನಿ, ಅದಾನಿಯಂತಹವರು ಅನುಕೂಲ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರ ಭವಿಷ್ಯವನ್ನೇ ಕಿತ್ತುಕೊಳ್ಳುವ ಉನ್ನಾರ ನಡೆಯುತ್ತಿದೆ ಎಂದರು.

ಬಯಲು ಸೀಮೆಯ ಜನರಿಗೆ ಶಾಶ್ವತ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಬ್ಟಾಳ ಮತ್ತು ನಾಗವಾರ ಕೆರೆಯ ನೀರನ್ನುಶುದ್ಧಿಕರಿಸಿ, ಈ ಭಾಗದ ಕೆರೆಗಳಿಗೆ ಹರಿಸಲಾಯಿತು. ಇನ್ನೂ ಅತೀ ಹೆಚ್ಚು ಕೆರೆಗಳನ್ನು ಸೇರಿಸಲು ಸರ್ಕಾರದಮೇಲೆ ಒತ್ತಡ ತರಲಾಗುವುದು. ಅಧಿಕಾರ ಇದ್ದರೂಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಅಧಿಕಾರ ಇಲ್ಲದಿದ್ದರೂ ಹೋರಾಟದ ಮೂಲಕ ಜನರಿಗೆ ಕೆಲಸ ಮಾಡುತ್ತೇವೆ. ಎತ್ತಿನ ಹೊಳೆ ಯೋಜನೆ ಸ್ಥಗಿತಗೊಂಡಿದೆ. ದೊಡ್ಡಬಳ್ಳಾಪುರ ಹತ್ತಿರ ಭೂ ಸ್ವಾಧೀನ ಪ್ರಕ್ರಿಯೆಯಾಗಿದ್ದರೂ ಈಗಿನ ಬಿಜೆಪಿ ಸರ್ಕಾರಕ್ಕೆ ಜಮೀನಿನ ದರ ನಿಗದಿಗೊಳಿಸಲು ಇವರ ಕೈಯಲ್ಲಿ ಆಗುತ್ತಿಲ್ಲ. ನಮ್ಮ ಕಾಂಗ್ರೆಸ್‌ ಸರ್ಕಾರ ಬಂದರೆ, ಎತ್ತಿನ ಹೊಳೆ ಯೋಜನೆ ಕಾಮಗಾರಿಯ ವೇಗ ಹೆಚ್ಚಿಸಲಾಗುತ್ತದೆ ಎಂದರು.

ಗ್ರಾಪಂ ಚುನಾವಣೆಯಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕು. ಪ್ರತಿ ಮನೆ ಮನೆಗೆ ಹೋಗಿ ಕಾರ್ಯಕರ್ತರು ಮುಖಂಡರು ಕಾಂಗ್ರೆಸ್‌ ಸರ್ಕಾರವಿದ್ದಾಗ ಜನಪರ ಆಡಳಿತ ನೀಡಿರುವ ಬಗ್ಗೆಮನವರಿಕೆ ಮಾಡಿಕೊಡಬೇಕು. ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಸರ್ಕಾರ ಕೃಷಿ ನೂತನ ಮಸೂದೆಗಳನ್ನು ಜಾರಿತಂದು ರೈತರಿಗೆ ಅನ್ಯಾಯ ಎಸಗುತ್ತಿದೆ. ರೈತರು ಇದೀಗ ಬೀದಿಗೆ ಬರಲುಬಿಜೆಪಿಸರ್ಕಾರದದುರಾಡಳಿತಸಾಕ್ಷಿಯಾಗಿದೆ ಎಂದರು.

ಇದೇವೇಳೆಮಾಜಿಸಂಸದಸಿ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಪ್ರಸನ್ನಕುಮಾರ್‌, ಉಪಾಧ್ಯಕ್ಷ ವಿ.ಶಾಂತಕುಮಾರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜು, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್‌, ಕಾರ್ಯದರ್ಶಿ ಎಸ್‌.ಆರ್‌. ರವಿಕುಮಾರ್‌, ಜಿಪಂ ಸದಸ್ಯರಾದ ಲಕ್ಷ್ಮೀ ನಾರಾಯಣ್‌, ಕೆ.ಸಿ.ಮಂಜುನಾಥ್‌, ಅನಂತ ಕುಮಾರಿ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ತಾಪಂ ಅಧ್ಯಕ್ಷೆ ಶಶಿಕಲಾಆನಂದ್‌, ಮಾಜಿ ಅಧ್ಯಕ್ಷೆ ಚೈತ್ರಾವೀರೇಗೌಡ, ಕೆಪಿಸಿಸಿ ಸದಸ್ಯರಾದ ಚೇತನ್‌ ಗೌಡ, ಚಿನ್ನಪ್ಪ, ತಾಪಂ ಮಾಜಿ ಸದಸ್ಯ ಲಕ್ಷ್ಮಣ್‌ ಗೌಡ, ಯುವ ಮುಖಂಡರಾದ ಕೆ.ಆರ್‌.ನಾಗೇಶ್‌ ಇತರರು ಹಾಜರಿದ್ದರು.

ಚರ್ಮೋದ್ಯಮದ ಮೇಲೆ ದುಷ್ಪರಿಣಾಮ :

ವಿರೋಧ ಪಕ್ಷಗಳ ಒಪ್ಪಿಗೆ ಪಡೆಯದೆ ವಿಧಾನ ಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನುಅಂಗೀಕರಿಸಿ, ರೈತರು ಹಾಗೂ ಚರ್ಮೋದ್ಯಮದಮೇಲೆ ತೀವ್ರ ಪರಿಣಾಮ ಬೀರಲಿದೆ. ವಯಸ್ಸಾದ ಜಾನುವಾರುಗಳನ್ನು ರೈತರು ಇಟ್ಟುಕೊಂಡು ಏನು ಮಾಡುತ್ತಾರೆ. ಅದನ್ನು ನೇರ ವಾಗಿ ಸರ್ಕಾರವೇ ಖರಿಧಿಸುವಂತಾಗಲಿ ಬಿಜೆಪಿ ಮುಖಂಡರ ಮನೆಯಲ್ಲೂ, ಜಮೀನಿನಲ್ಲೂ ಸಾಕಲಿ ಎಂದು ಲೇವಡಿ ಮಾಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

sudhakar

ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

vijaya-final

2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆ: ಬಿ.ವೈ. ವಿಜಯೇಂದ್ರ

ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ

ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ

Poco C3: One million units sale

ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

Big update: No extra attempt for UPSC preliminary examination, Centre tells SC

‘ಯುಪಿಎಸ್‌ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fire to a solid waste disposal unit

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

NAGARAJ

ಅಬಕಾರಿ ಇಲಾಖೆಯಲ್ಲಿ ಮಾಡುವುದೇನಿದೆ?

Attempts to get students back to school

ವಿದ್ಯಾರ್ಥಿಗಳನ್ನು ಮರಳಿಶಾಲೆಗೆ ಕರೆತರಲು ಪ್ರಯತ್ನ

Tong given to BC Patil

ಬಿ.ಸಿ.ಪಾಟೀಲ್‌ಗೆ ಟಾಂಗ್‌ ಕೊಟ್ಟ ಎಚ್ಡಿಕೆ

ಕ್ರೀಡಾಂಗಣ ಅಭಿವೃದ್ಧಿ: ಶಾಸಕರೆದುರೆ ಸಮಸ್ಯೆಗಳ ಸುರಿಮಳೆ

ಕ್ರೀಡಾಂಗಣ ಅಭಿವೃದ್ಧಿ: ಶಾಸಕರೆದುರೆ ಸಮಸ್ಯೆಗಳ ಸುರಿಮಳೆ

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

ನಿಜಶರಣ ಅಂಬಿಗರ ಚೌಡಯ್ಯ ಸ್ಮರಣೆ

ನಿಜಶರಣ ಅಂಬಿಗರ ಚೌಡಯ್ಯ ಸ್ಮರಣೆ

ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಿ; ಮಹ್ಮದ್‌ ಇಸ್ಮಾಯಿಲ್

ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಿ; ಮಹ್ಮದ್‌ ಇಸ್ಮಾಯಿಲ್

SANDOOR WATER ISSSUE

ನೀರಿನ ಘಟಕಕ್ಕೆ ವಿದ್ಯುತ್‌ ಕಡಿತ -ಎಚ್ಚರಿಕೆ

Hosapete Ballary

ಬಿಎಸ್‌ವೈ ಕೊಟ್ಟ ಮಾತು ಹುಸಿಯಾಗದಿರಲಿ

ಜನರ ನಿರೀಕ್ಷೆ ಹುಸಿ ಮಾಡಿದ ಡಿಸಿಎಂ: ಶಾಸಕ ಡಾ| ಚವ್ಹಾಣ

ಜನರ ನಿರೀಕ್ಷೆ ಹುಸಿ ಮಾಡಿದ ಡಿಸಿಎಂ: ಶಾಸಕ ಡಾ| ಚವ್ಹಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.