Udayavni Special

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ


Team Udayavani, Apr 19, 2021, 2:45 PM IST

covid: Flight passenger numbers dwindle

ದೇವನಹಳ್ಳಿ: ಕೋವಿಡ್ 2ನೇ ಅಲೆಯ ಪರಿಣಾಮವಿಮಾನ ಯಾನದ ಮೇಲೂ ಬೀರಿದೆ. ಶೇ.70ಪ್ರಯಾಣಿಕರು ತಮ್ಮ ವಿಮಾನ ಯಾನವನ್ನುನಿಲ್ಲಿಸಿದ್ದು, ಇದನ್ನೇ ನಂಬಿಕೊಂಡಿದ್ದ ಟ್ಯಾಕ್ಸಿ,ನಿಲ್ದಾಣದಲ್ಲಿನ ಅಂಗಡಿಯವರು, ಫ್ಲೈಟ್‌ ಬುಕಿಂಗ್‌ಏಜೆನ್ಸಿಯವರು ತೀವ್ರ ನಷ್ಟ ಅನುಭವಿಸುವಂತಾಗಿದೆ.ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಿರುವ ಕಾರಣ ತಾಲೂಕಿನಲ್ಲಿರುವ ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿಇಳಿಮುಖ ಕಂಡುಬಂದಿದೆ.

ಕೋವಿಡ್‌-19 2ನೇ ಅಲೆಯಿಂದಾಗಿದೇಶ-ವಿದೇಶ, ಹೊರ ರಾಜ್ಯಗಳಿಂದ ಬರುವ ಮತ್ತುಹೋಗುವ ಪ್ರಯಾಣಿಕರು ವಿಮಾನ ಯಾನಮಾಡುವ ಹಿಂದೇಟು ಹಾಕುತ್ತಿರುವುದುಮೇಲ್ನೋಟಕ್ಕೆ ಕಂಡುಬಂದಿದೆ.ಪ್ರತ್ಯೇಕ ಕೌಂಟರ್‌: ಮಹಾರಾಷ್ಟ್ರ ಮತ್ತು ಕೇರಳರಾಜ್ಯಗಳಲ್ಲಿ ಕೊರೊನಾ ಮಿತಿ ಮೀರಿರುವುದರಿಂದಈ ರಾಜ್ಯದಿಂದ ಬರುವವರಿಗೆ ಪ್ರತ್ಯೇಕ ಕೌಂಟರ್‌ನಲ್ಲಿಬರುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಆರೋಗ್ಯಇಲಾಖೆಯಿಂದ ಸ್ಥಳದಲ್ಲಿಯೇ ಸ್ಕ್ರೀನಿಂಗ್‌, ಆರೋಗ್ಯತಪಾಸಣೆ ಸೇರಿ ಹೆಚ್ಚುವರಿ ಸೌಲಭ್ಯಒದಗಿಸಲಾಗುತ್ತಿದೆ.

ಅಲ್ಲಿಯೇ ಲಸಿಕೆ ಹಾಕುವಕಾರ್ಯವೂ ಮಾಡಲಾಗುತ್ತಿದೆ.ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 50 ಸಾವಿರದಿಂದ1ಲಕ್ಷ ಜನ ಬರುತ್ತಿದ್ದರು. ಆದರೆ, ಕೊರೊನಾ ಎರಡನೇಅಲೆ ಪ್ರಾರಂಭವಾಗಿರುವುದರಿಂದ ಪ್ರತಿನಿತ್ಯ 10ಸಾವಿರದಿಂದ 12 ಸಾವಿರ ಪ್ರಯಾಣಿಕರು ಮಾತ್ರಬರುವಂತೆ ಆಗಿದೆ. ಶೇ.30 ಪ್ರಯಾಣಿಕರು ಮಾತ್ರವಿಮಾನದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದಓಡಾಟ ನಡೆಸುತ್ತಿದ್ದಾರೆ.

ಎಲ್ಲಾ ಖಾಲಿ ಖಾಲಿ: ವಿಮಾನ ನಿಲ್ದಾಣದಟರ್ಮಿನಲ್‌ಗ‌ಳು ಜನರಿಲ್ಲದೆ ಖಾಲಿ-ಖಾಲಿಯಾಗಿವೆ.ವಿಮಾನ ನಿಲ್ದಾಣದ ಅಂಗಡಿ ಮುಗ್ಗಟ್ಟುಗಳು ಸಹಜನರಿಲ್ಲದೆ, ವ್ಯಾಪಾರ ವಹಿವಾಟು ನಡೆಯದೇಮಾಲಿಕರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಪ್ರಯಾಣಿಕರೇ ಸಿಗ್ತಿಲ್ಲ: ವಿಮಾನ ನಿಲ್ದಾಣದಲ್ಲಿ 10ಸಾವಿರದಿಂದ 15 ಸಾವಿರ ಟ್ಯಾಕ್ಸಿಗಳಿವೆ. ಆದರೆ,ಕೊರೊನಾ ಎರಡನೇ ಅಲೆಯಿಂದಾಗಿ ವಿಮಾನಪ್ರಯಾಣಿಕರು ಬಾರದೇ ಟ್ಯಾಕ್ಸಿ ಚಾಲಕರು ತೀವ್ರ ನಷ್ಟಅನುಭವಿಸುವಂತಾಗಿದೆ. ದಿನದ ದುಡಿಮೆಯೂಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆಬೆಳಗ್ಗಿನಿಂದ ಸಂಜೆವರೆಗೂ ಕಾದು ಕೂತರೂಪ್ರಯಾಣಿಕರು ಸಿಗದೆ ಖಾಲಿ ಕೈಯಲ್ಲಿ ವಾಪಸ್‌ಹೋಗುವಂತಾಗಿದೆ ಎಂದು ಕೆಲ ಟ್ಯಾಕ್ಸಿ ಚಾಲಕರುತಮ್ಮ ಅಳಲು ತೋಡಿಕೊಂಡಿದ್ದಾರೆ.ಕೊರೊನಾದಿಂದ ಮತ್ತೂಂದು ಬಾರಿ ಹೊಡೆತಬಿದ್ದಿದ್ದು, ಕುಟುಂಬ ನಿರ್ವಹಣೆಗೆ ಸಾಕಷ್ಟು ತೊಂದರೆಅನುಭವಿಸುವ ಪರಿಸ್ಥಿತಿ ಇದೆ. ಇದೇ ರೀತಿ ಕೊರೊನಾಹೆಚ್ಚಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಸಾಕಷ್ಟುಸಮಸ್ಯೆಗಳನ್ನು ಎದರಿಸುವಂತೆ ಆಗುತ್ತದೆ ಎಂದುಟ್ಯಾಕ್ಸಿ ಚಾಲಕರು ಹೇಳಿದರು.

ಎಸ್‌.ಮಹೇಶ್‌

ಟಾಪ್ ನ್ಯೂಸ್

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

cats

ಕೋವಿಡ್-ಉಪಚುನಾವಣೆ ವೇಳೆ ಮೃತಪಟ್ಟ ಶಿಕ್ಷಕರ ಕುರಿತು ವಿವರ ಕೇಳಿದ ಸಚಿವ ಸುರೇಶ್ ಕುಮಾರ್‌

cats

‘ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

THoukthe Cyclone Effect in Goa, High allert announced by CM

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Awareness jatha in many places

ಕೋವಿಡ್: ಹಲವೆಡೆ ಜಾಗೃತಿ ಜಾಥಾ

Inauguration of covid Care Center

18ರಂದು ಕೋವಿಡ್‌ ಕೇರ್‌ ಸೆಂಟರ್‌ ಉದ್ಘಾಟನೆ

badsavanna

ಸಮಾನತೆಯ ತತ್ವ ಸಾಧಕ ಬಸವಣ್ಣ: ಸ್ವಾಮೀಜಿ

13_5_dbp_1_1305bg_2

ಆಟೋ ಬೇಕಿದ್ದರೆ ಸಹಾಯವಾಣಿ ಸಂಪರ್ಕಿಸಿ: ಡಿವೈಎಸ್ಪಿ ರಂಗಪ್ಪ

vdfdfsd

ವಿಮಾನ ನಿಲಾಣದಲ್ಲಿ 150 ಹಾಸಿಗೆ ಚಿಕಿತ್ಸಾ ಕೇಂದ್ರ ಸ್ಥಾಪನೆ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

15gadag 4

ಔಷಧ-ಹಾಸಿಗೆ-ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಳ್ಳಿ : ಡಿಸಿ ಸುಂದರೇಶ್‌ ಬಾಬು

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

15hvr1

ಧರ್ಮಸ್ಥಳದಿಂದ ಬಂತು ಆಕ್ಸಿಜನ್‌ ಟ್ಯಾಂಕರ್‌

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.