ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು


Team Udayavani, Oct 24, 2020, 2:30 PM IST

br-tdy-1

ಹೊಸಕೋಟೆ: ವಿಜಯದಶಮಿ ಆಚರಣೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೌರಿ ಗಣೇಶ ಹಬ್ಬಕ್ಕೆ ಹೋಲಿಸಿದಲ್ಲಿ ಕೆಲವು ಹೂಗಳ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲ ಏರಿಕೆಯಾಗಿರುವ ಕಾರಣ ವಹಿವಾಟು ಕುಂಠಿತ ಗೊಂಡಿದ್ದು, ವ್ಯಾಪಾರಿಗಳಿಗೂ ನಿರಾಸೆಯಾಗಿದೆ.

ನಿರಂತರವಾಗಿ ಮಳೆಯಾಗುತ್ತಿರುವ ಕಾರಣಹೂಗಳನ್ನು ಹೆಚ್ಚು ಕಾಲ ಶೇಖರಣೆ ಮಾಡಿದಲ್ಲಿ ಹಾಳಾಗುವ ಸಾಧ್ಯತೆಯಿಂದ ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಿ ನಷ್ಟ ನಿವಾರಿಸಿಕೊಳ್ಳಬೇಕಿದೆ.

ಆದಾಯ ಕುಂಠಿತಗೊಂಡಿರುವ ಕಾರಣ ಗ್ರಾಹಕರು ಸಹ ಹಬ್ಬದ ಆಚರಣೆಗೆನಿರ್ಬಂಧಗಳನ್ನು ವಿಧಿಸಿಕೊಂಡು ಸರಳವಾಗಿ ಆಚರಿಸಲು ನಿರ್ಧರಿಸಿರುವುದು ವ್ಯಾಪಾರದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ. ಸಿಹಿ ತಿನಿಸುಗಳ ಮಾರಾಟಗಾರರುಆಯುಧಪೂಜೆಗಾಗಿ ರಿಯಾಯಿತಿ ದರ ಪ್ರಕಟಿಸಿದರೂ ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.

ಹೂ (ದರ ಪ್ರತಿ ಕೆಜಿಗೆ): ಕನಕಾಂಬರ 1,000 ರೂ., ಮಲ್ಲಿಗೆ, ಕಾಕಡ 1,200 ರೂ., ಮೇರಿಗೋಲ್ಡ್‌ 240 ರೂ., ಬಿಳಿ, ಹಳದಿ ಶ್ಯಾಮಂತಿಗೆ 160 ರೂ., ರೋಸ್‌ 260 ರೂ., ಚೆಂಡು, 80 ರೂ.ಗಳಂತೆ ಮಾರಾಟವಾಗುತ್ತಿದೆ.

ಹಣ್ಣುಗಳು: ದಾಳಿಂಬೆ, ಸೀತಾಫ‌ಲ, ಸೇಬು 100 ರೂ., ಏಲಕ್ಕಿ ಬಾಳೆಹಣ್ಣು 80 ರೂ., ಫೈನಾಪಲ್‌ 2ಕ್ಕೆ 50 ರೂ., ಸಾಮಾನ್ಯ ಗಾತ್ರದ ಬಾಳೆ ಕಂದು 50 ರೂ.ಗಳಾಗಿತ್ತು.

ದಸರಾ: ಬೆಲೆ ಏರಿಕೆ ಬಿಸಿ :

ದೊಡ್ಡಬಳ್ಳಾಪುರ: ಈ ಬಾರಿ ಹಬ್ಬ ಉತ್ಸವಗಳಿಗೆ ಕೋವಿಡ್ ಕಂಕಟವಿದ್ದರೂ, ಹೂ, ಹಣ್ಣು, ಬಾಳೆಕಂದು, ಬೂದು ಕುಂಬಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿವೆ.

ತಾಲೂಕಿನಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಸ್ವಾಗತ ನಡೆದಿದ್ದು,ನಗರದ ಮಾರುಕಟ್ಟೆ ಪ್ರದೇಶದಲ್ಲಿಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ,ಹೂ, ಬೂದು ಕುಂಬಳದ ಬೆಲೆ ಗಗನಕ್ಕೇರಿವೆ. ಬೂದು ಕುಂಬಳಕಾಯಿಕೆಜಿಗೆ 30ರಿಂದ 40ರೂ ಇದೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 700ರಿಂದ 800 ರೂ. ವರೆಗಿದ್ದರೆ, ಕನಕಾಂಬರ 1,400ರೂ. ಶಾಮಂತಿಗೆ, ಬಟನ್ಸ್‌ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 200 ದಾಟಿವೆ. ಬಾಳೆ ಹಣ್ಣು ಕೆಜಿಗೆ 30 ರಿಂದ 80ರೂ, ಸೇರಿದಂತೆ ಇತರಹಣ್ಣುಗಳ ಬೆಲೆಗಳೂ ಕೆಜಿಗೆ ಶೇ.20 ರಿಂದ 30 ರಷ್ಟು ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳು ಯಂತ್ರಗಳು, ವಾಹನಗಳುಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಬೀಳುತ್ತಿದ್ದು, ಹೂವುಗಳ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಕೊರೊನಾದಿಂದ ನೇಕಾರಿಕೆ ಉದ್ಯಮ ಕುಸಿದಿದ್ದು, ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕಿದೆ.

ಈ ನಡುವೆ ಈ ವರ್ಷ ಕೋವಿಡ್ ಕಂಟಕ ಎದುರಾಗಿದೆ. ಎಲ್ಲದಕ್ಕೂ ಬೆಲೆದುಬಾರಿಯಾಗಿವೆ. ಬೆಲೆ ಏರಿಕೆನೋಡಿದರೆ, ಹಬ್ಬ ಮಾಡಲು ಉತ್ಸಾಹ ಇಲ್ಲದಿದ್ದರೂ, ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

driving practice

ಆದಿವಾಸಿ ನಿರುದ್ಯೋಗಿಗಳಿಗೆ ವಾಹನ ಚಾಲನಾ ತರಬೇತಿ

ಕರೆ ಅಭಿವೃದ್ಧಿ

ಕೆರೆ ಅಭಿವೃದ್ಧಿಗೆ ಒಂದಾದ ಅಧಿಕಾರಿಗಳು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ಕುಟುಂಬಗಳ ನಡುವೆ ಮಾರಾಮಾರಿ

ಕುಟುಂಬಗಳ ನಡುವೆ ಮಾರಾಮಾರಿ

ನವಜಾತ ಶಿಶು ಪತ್ತೆ

ದೇಗುಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ..!

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.