ಈಶ್ವರಪ್ಪ, ಸಿಎಂ ಕೂತು ಗೊಂದಲ ಬಗೆಹರಿಸಿಕೊಳ್ಳಲಿ: ಸಂಸದ ಬಚ್ಚೇಗೌಡ ಸಲಹೆ
Team Udayavani, Apr 4, 2021, 3:39 PM IST
ವಿಜಯಪುರ: ಮುಖ್ಯಮಂತ್ರಿಗಳಿಗೆ ಅವರದೇ ಆದ ಅಧಿಕಾರವಿದೆ. ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ರಾಜಕೀಯದಲ್ಲಿರುವ ಗೊಂದಲ ಬಗೆಹರಿಯಲಿ. ವಿರೋಧ ಪಕ್ಷಗಳು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಅವಕಾಶ ನೀಡದಿರಿ ಎಂದು ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಸಲಹೆ ನೀಡಿದರು.
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಸಂಸದ ಬಚ್ಚೇಗೌಡ, ಬೆಂಡಿಗಾನಹಳ್ಳಿ ಕುಟುಂಬದವರಿಂದ ನಡೆದ ಸ್ವಾಮಿಯವರ ಪುಷ್ಪ ಪಲ್ಲಕ್ಕಿ ಉತ್ಸವ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಹಣಕಾಸು ಖರ್ಚು ವೆಚ್ಚದ ಬಗ್ಗೆ ಮಾರ್ಚ್ ಅಂತ್ಯದೊಳಗೆ ತಿಳಿದರೆ ಮುಂದಿನ ಬಜೆಟ್ ಮಂಡನೆಗೆ ಅನುಕೂಲ ಎಂದು ಮುಖ್ಯಮಂತ್ರಿಗಳು ಮಾಡಿರುವ ಕರ್ತವ್ಯ, ಲೋಪದೋಷವಲ್ಲ ಎಂದು ಹೇಳಿದರು
ವಿರೋಧ ಪಕ್ಷಗಳಿಗೆ ಆಸ್ಪದ ಕೊಡಬೇಡಿ: ಈ ವಿಚಾರವಾಗಿ ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಗೊಂದಲ ಉಂಟಾಗಿದೆ. ಇದು ಇಬ್ಬರೂ ಕೂತು ಮಾತಾಡಿ ಬಗೆಹರಿಸಿಕೊಳ್ಳುವ ವಿಚಾರ. ಹೀಗಿರುವಾಗ ಹಿರಿಯ ಸಚಿವ ರೆನಿಸಿಕೊಂಡ ಈಶ್ವರಪ್ಪನವರು ದೂರು ಕೊಡುವ ಹಂತಕ್ಕೆ ಹೋಗಿರುವುದು ಆಶ್ಚರ್ಯಕರ. ಹೈಕಮಾಂಡ್ ಏನು ತೀರ್ಮಾನ ಮಾಡುವುದೋ ತಿಳಿದಿಲ್ಲ. ವಿರೋಧ ಪಕ್ಷಗಳು ಲಾಭ ಪಡೆಯಲು ಆಸ್ಪದ ಕೊಡಬಾರದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಕೆಲಸಕ್ಕೆಂದು ಬಂದು ವೃದ್ಧೆಯ ಕೈ,ಕಾಲು ಕಟ್ಟಿ ಹಾಕಿ ದರೋಡೆ: ನೇಪಾಳಿ ದಂಪತಿಗಾಗಿ ಶೋಧ
ಕಂಪ್ಲಿಯಲ್ಲಿ ಎಸಿಬಿ ದಾಳಿ: ಪಿಡಿಒ, ಗ್ರಾ.ಪಂ.ಸದಸ್ಯ ಸೇರಿ ಮೂವರ ಬಂಧನ
ಉದ್ಯಾವರ: ಬಸ್ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್ ಸಿಬಂದಿ ಸಾವು
ಮಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ಕೆರಾಡಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು