Udayavni Special

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ


Team Udayavani, Feb 27, 2021, 11:41 AM IST

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ದೇವಾಂಗ ಸಮುದಾಯ ಬಹುಸಂಖ್ಯಾತರಾಗಿದ್ದರೂ ರಾಜಕೀಯ ಅಸ್ತಿತ್ವ ಪಡೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಈ ದಿಸೆಯಲ್ಲಿ ದೇವಾಂಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಕಲ್ಪ, ದೇವಾಂಗ ಸಮುದಾಯದ ಸಮಗ್ರ ಪ್ರಗತಿ ಹಾಗೂ ದೇವಾಂಗ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಒತ್ತಾಯಿಸಿ, ಮಾ.1ರಂದು ದೇವಾಂಗ ಸಂಘಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಂಗ ಸಮನ್ವಯ ಸಮಿತಿ ಸಂಚಾಲಕ ಎಂ.ಜಿ.ಶ್ರೀನಿವಾಸ್‌ ತಿಳಿಸಿದರು.

ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಮನ್ವಯ ಸಮಿತಿಯಿಂದ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 52 ಕ್ಷೇತ್ರಗಳಲ್ಲಿ ದೇವಾಂಗ ಸಮುದಾಯದ ಪ್ರಭಾವ ವಿದ್ದು, 13 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದೆ. ಇದರಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರವೂ ಸೇರಿದೆ.ದೊಡ್ಡಬಳ್ಳಾಪುರದಲ್ಲಿ ಈವರೆಗಿನ ಶೇ.75ರಷ್ಟು  ಸಮೀಕ್ಷೆ ನಡೆಸಿರುವ ಪ್ರಕಾರ 35 ಸಾವಿರಕ್ಕೂ ಹೆಚ್ಚು ದೇವಾಂಗ ಸಮುದಾಯದವರಿದ್ದಾರೆ. 1932ರಿಂದ ಕೊಂಗಾಡಿಯಪ್ಪ ಅವರು ಪುರ ಸಭೆಯ ಪ್ರಥಮ ಅಧ್ಯಕ್ಷರಾಗಿದ್ದರಿಂದ ಹಿಡಿದು 50 ವರ್ಷಗಳವರೆಗೆ ರಾಜಕೀಯವ ವಲಯದಲ್ಲಿ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ ದೇವಾಂಗ ಸಮುದಾಯದ ಮುಖಂಡರ ಪಾತ್ರ ಮಹತ್ವದ್ದಾಗಿತ್ತು ಎಂದರು.

ಒಗ್ಗೂಡಿಸುವ ಚಿಂತನೆ: ಇತ್ತೀಚಿನ ವರ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹಿಂದೆ ಸರಿಯುವ ವಾತಾವರಣ ಸೃಷ್ಟಿಯಾಗುತ್ತಿದೆ. ಸಮಾವೇಶ ನಮ್ಮ ಶಕ್ತಿ ಕ್ರೋಢೀಕರಣಗೊಳಿಸಲು ಸಂಘಟಿಸಲಾಗುತ್ತಿದ್ದು, ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರ, ವಿರೋಧವಾಗಿ ಅಲ್ಲ. ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವ ಚಿಂತನೆಯಿದೆ ಎಂದರು.

ದೇವಾಂಗ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಯಾಗಬೇಕು. ಸಮುದಾಯಕ್ಕೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಪೂರಕವಾಗಿ ಮೀಸಲು ವ್ಯವಸ್ಥೆಯಾಗಬೇಕು. ರಾಜಕೀಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಸಮಗ್ರ ಸಂಘಟನೆಗೆ ಎಲ್ಲ ಸಂಘಟನೆಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಸಂಸ್ಥೆ ಸೇರಿ ಆಯಕಟ್ಟಿನ ಹುದ್ದೆ ಪಡೆಯಲು ಸಾಮಾಜಿಕ, ಆರ್ಥಿಕ ಭಾಷೆ ಭಿನ್ನತೆ ಮೀರಿ ಒಗ್ಗೂಡಬೇಕು ಎನ್ನುವ ಧ್ಯೇಯೋದ್ದೇಶ ಸಮಾವೇಶ ಹೊಂದಿದೆ ಎಂದರು.

ಮಾ.1ಕ್ಕೆ ಬೃಹತ್‌ ಸಮಾವೇಶ: ದೇವಾಂಗ ಸಮನ್ವಯ ಸಮಿತಿಯಿಂದ ಮಾ.1ಕ್ಕೆ ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಂಘಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಹಂಪಿ ಹೇಮಕೂಟದ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಆಂಧ್ರದ ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೀರಕ ಸುರೇಂದ್ರ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರಮೇಶ್‌ ಭಾಗವಹಿಸಲಿದ್ದಾರೆ.

ದೇವಾಂಗ ಮಂಡಳಿ ಅಧ್ಯಕ್ಷ ಕೆ.ಜಿ.ದಿನೇಶ್‌, ಗಾಯಿತ್ರಿ ಪೀಠ ಮಿತ್ರಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್‌, ಆಂಧ್ರ ದೇವಾಂಗ ಸಂಕ್ಷೇಮ ಟ್ರಸ್ಟ್‌ ಕಾರ್ಯದರ್ಶಿ ಡಿ.ಎ.ಶ್ರೀನಾಥ್‌, ಟಿ.ಎಂಸಿಬ್ಯಾಂಕ್‌ ಅಧ್ಯಕ್ಷ ಕೆ.ಪಿ.ವಾಸುದೇವ್‌ ,ನಗರಸಭೆ ಮಾಜಿ ಸದಸ್ಯ ಲೋಕೇಶ್‌ಬಾಬು, ಆಂಧ್ರ ದೇವಾಂಗ ಸಂಘದ ನಿರ್ದೇಶಕ ಕೇಶವಮೂರ್ತಿ, ಸಮನ್ವಯ ಸಮಿತಿ ಸದಸ್ಯ ಯೋಗ ನಟರಾಜ್‌, ಅಖೀಲೇಶ್‌, ಕೆರಮುಲು ಬದ್ರಿ, ಶಿವಾನಂದ್‌, ಎನ್‌.ಜಿ.ಕುಮಾರ್‌, ರಮೇಶ್‌ ಇದ್ದರು.

ಟಾಪ್ ನ್ಯೂಸ್

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

520 ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ

520 ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ

ಕುಂದಾಣ ರಾಜಸ್ವ ನಿರೀಕ್ಷಕರ ಅಮಾನತಿಗೆ ಆಗ್ರಹ

ಕುಂದಾಣ ರಾಜಸ್ವ ನಿರೀಕ್ಷಕರ ಅಮಾನತಿಗೆ ಆಗ್ರಹ

ಮತದಾರರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಿಲ್ಲ

ಮತದಾರರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಿಲ್ಲ

ಕೆರೆ ಒತ್ತುವರಿ ಆಗಿದ್ರೆ ಕೂಡಲೇ ತೆರವುಗೊಳಿಸಿ

ಕೆರೆ ಒತ್ತುವರಿ ಆಗಿದ್ರೆ ಕೂಡಲೇ ತೆರವುಗೊಳಿಸಿ

ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ

ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.