ಹಿಂಡಲಗಾ ಕೈದಿಗಳಿಂದ ನಿತ್ಯ 1500 ಮಾಸ್ಕ್ ತಯಾರಿಕೆ

Team Udayavani, Mar 31, 2020, 5:28 PM IST

bg-tdy-1

ಬೆಳಗಾವಿ: ಕೋವಿಡ್ 19 ಭೀತಿ ಹೊಡೆತದಿಂದ ತತ್ತರಿಸಿರುವ ಸಮಾಜಕ್ಕೆ ಕೈದಿಗಳು ಕೈಜೋಡಿಸಿದ್ದು, ನಿತ್ಯ 1500ಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸುವ ಮೂಲಕ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ಕೋವಿಡ್ 19  ವಿರುದ್ಧ ಹೋರಾಡಲು ನಿತ್ಯ 15 ಗಂಟೆ ಕಾಲ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಈ ಹಿಂದೆ ದಿನಾಲು ಬಟ್ಟೆಯ 250ರಿಂದ 300 ಮಾಸ್ಕ್ಗಳು ತಯಾರಾಗುತ್ತಿದ್ದವು. ಈಗ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಾಗೂ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ದಿನಾಲು 1500 ಮಾಸ್ಕ್ಗಳು ತಯಾರಾಗುತ್ತಿದ್ದು, ಇನ್ನೆರಡು ದಿನಗಳ ನಂತರ ಪ್ರಮಾಣ 2000ಕ್ಕೆ ಏರಲಿದೆ. ಜೈಲಿನಲ್ಲಿರುವ 25 ಪುರುಷರು ಹಾಗೂ 5 ಜನ ಮಹಿಳಾ ಜೈಲು ನಿವಾಸಿಗಳು ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ದುಡಿಯುತ್ತಿದ್ದಾರೆ.

ಪೊಲೀಸ್‌ ಇಲಾಖೆ, ಬಿಎಸ್‌ಎನ್‌ಎಲ್‌, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಬೇಡಿಕೆ ಬರುತ್ತಿದೆ. ಕೆಎಸ್‌ಆರ್‌ಪಿ, ಕಂಟ್ರೋಲ್‌ ರೂಂ, ಟ್ರಾಫಿಕ್‌ ಪೊಲೀಸರಿಗೆ ಮಾಸ್ಕ್ ಗಳನ್ನು ನೀಡಲಾಗಿದೆ. ಜತೆಗೆ ಪ್ರತಿ ಪೊಲೀಸ್‌ ಠಾಣೆಗೆ 150 ಬಟ್ಟೆಯ ಮಾಸ್ಕ್ಗಳನ್ನು ನೀಡಲಾಗಿದೆ. ಬೇರೆ ಬೇರೆ ಕಡೆಯಿಂದ ಬೇಡಿಕೆ ಬರುತ್ತಿದೆ. ಮೊದಲು ಸರ್ಕಾರಿ ಇಲಾಖೆಯವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹಿಂಡಲಗಾ ಕಾರಾಗೃಹದ ಜೈಲರ್‌ ಲೋಕೇಶಕುಮಾರ್‌ ತಿಳಿಸಿದರು.

ರೆಡ್‌ಕ್ರಾಸ್‌ ಸಂಸ್ಥೆಯವರು ಒಟ್ಟು 50 ಸಾವಿರ ಮಾಸ್ಕ್ ಕೇಳಿದ್ದಾರೆ. ರೆಡ್‌ಕ್ರಾಸ್‌ಗೆ ಈಗ ದಿನಾಲು 500 ಮಾಸ್ಕ್ ಗಳನ್ನು ಕೊಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಂತರದಲ್ಲಿ ಇದರ ಪ್ರಮಾಣ ಹೆಚ್ಚಿಸಲಾಗುವುದು. ಪ್ರತಿ ಮಾಸ್ಕ್ ದರ 6 ರೂ. ಇದ್ದು, ಕಚ್ಚಾ ವಸ್ತುವಿನ ವೆಚ್ಚವೇ 5 ರೂ. ಆಗುತ್ತದೆ. ಇನ್ನುಳಿದಂತೆ 50 ಪೈಸೆ ಖರ್ಚಾಗುತ್ತಿದೆ. ಶೇ. 15ರಷ್ಟು ಲಾಭ ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಬೇಡಿಕೆ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಹೆಚ್ಚಿನ ದರ ವಸೂಲಿ ಮಾಡುತ್ತಿಲ್ಲ. ಒಂದೇ ದರವನ್ನೇ ಆಕರಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್ 19  ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ನಮ್ಮ ಹಿಂಡಲಗಾ ಜೈಲಿನಿಂದಲೂ ಸೇವೆ ಸಲ್ಲಿಸುವ ಉದ್ದೇಶದಿಂದ ನಿತ್ಯ 1500ಕ್ಕೂ ಹೆಚ್ಚು ಬಟ್ಟೆಯ ಮಾಸ್ಕ್ ತಯಾರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದೆ. ಮೊದಲು ಸರ್ಕಾರಿ ಇಲಾಖೆಯವರಿಗೆ ಆದ್ಯತೆ ನೀಡಿ ವಿತರಿಸಲಾಗುತ್ತಿದೆ. – ಕೃಷ್ಣಕುಮಾರ, ಮುಖ್ಯ ಅಧೀಕ್ಷಕರು, ಹಿಂಡಲಗಾ ಕಾರಾಗೃಹ

ಕೋವಿಡ್ 19 ಸೋಂಕು ನಿಯಂತ್ರಣಕ್ಕೆ 10 ದಿನಗಳ ಅವ ಧಿಯಲ್ಲಿ 8 ಸಾವಿರ ಬಟ್ಟೆಯ ಮಾಸ್ಕ್ ಗಳನ್ನು ಹಿಂಡಲಗಾ ಕಾರಾಗೃಹದಲ್ಲಿ ತಯಾರಿಸಲಾಗಿದೆ. ಒಬ್ಬ ವ್ಯಕ್ತಿ 200ಕ್ಕಿಂತ ಹೆಚ್ಚು ಮಾಸ್ಕ್ ತಯಾರಿಸಿದರೆ ಒಂದು ಮಾಸ್ಕ್ಗೆ 2 ರೂ. ಹೆಚ್ಚಿಗೆ ನೀಡುವುದಾಗಿ ಹೇಳಲಾಗಿದೆ. ಮಾಸ್ಕ್ ಹೊಲೆಯುವ ಸ್ಥಳದಲ್ಲಿಯೇ ಉಪಹಾರ, ಊಟ, ಬಿಸ್ಕೀಟ್‌, ಚಹಾ ನಿಡಲಾಗುತ್ತಿದೆ. -ಲೋಕೇಶಕುಮಾರ, ಜೈಲರ್‌, ಹಿಂಡಲಗಾ ಕಾರಾಗೃಹ

­-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಶೆಟ್ಟರ್

Belagavi; ದ್ವೇಷದ ರಾಜಕಾರಣಕ್ಕೆ ಬೆಲೆ ತೆರಬೇಕಾಗುತ್ತದೆ..: ಜಗದೀಶ್ ಶೆಟ್ಟರ್

Jagadish Shettar: ಅಗತ್ಯವಿದ್ದರೆ ಗೋವಾ ಸಿಎಂ ಜತೆ “ಕಳಸಾ ಬಂಡೂರಿ’ ಚರ್ಚೆ: ಶೆಟ್ಟರ್‌

Jagadish Shettar: ಅಗತ್ಯವಿದ್ದರೆ ಗೋವಾ ಸಿಎಂ ಜತೆ “ಕಳಸಾ ಬಂಡೂರಿ’ ಚರ್ಚೆ: ಶೆಟ್ಟರ್‌

Hostel

Hirebagewadi ಅನೈತಿಕ ಚಟುವಟಿಕೆಗಳಿಗೆ ತಾಣವಾದ ಪಾಳು ಬಿದ್ದ ವಿದ್ಯಾರ್ಥಿ ವಸತಿ ನಿಲಯ!

1-wewwqe

Belagavi; ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.