ಆರೋಗ್ಯಯುತ ಸಮಾಜ ನಿರ್ಮಿಸೋಣ
Team Udayavani, Jun 22, 2022, 7:04 PM IST
ಬಳ್ಳಾರಿ: ಯೋಗ ಒಂದು ಜ್ಞಾನ, ಯೋಗ ಒಂದುಸಾಧನೆ, ಯೋಗ ಬದುಕಿನ ಕಲೆ, ಯೋಗವೇಒಂದು ಜೀವನ, ಬದುಕು ಹಸನಾಗಬೇಕೆಂದರೆಯೋಗದ ಕೃಷಿ ಮಾಡಬೇಕು. ಯೋಗದಿಂದಆರೋಗ್ಯ ಸಮಾಜವನ್ನು ನಿರ್ಮಾಣ ಮಾಡಬೇಕುಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೇಂದ್ರ ಆಯುಷ್ ಮಂತ್ರಾಲಯ, ಆಯುಷ್‌ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆಯುಷ್ ಇಲಾಖೆ ಹಾಗೂ ಸಮಸ್ತಯೋಗ ಸಂಸ್ಥೆಗಳ ಸಹಯೋಗದೊಂದಿಗೆ”ಮಾನವತೆಗಾಗಿ ಯೋಗ’ ಎಂಬ ಘೋಷವಾಕ್ಯದಡಿ ಮಂಗಳವಾರದಂದು ನಗರದ ಶ್ರೀಕೋಟೆ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿಹಮ್ಮಿಕೊಂಡಿದ್ದ 8ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು.ಯೋಗ ಎಂದರೆ ಮನಸ್ಸು ಮತ್ತು ದೇಹವನ್ನುಸಾಧನೆಯ ಮೂಲಕ ಒಗ್ಗೂಡಿಸುವ ಪ್ರಕ್ರಿಯೆಯೇಯೋಗ.
ಇದರ ವೈಶಿಷ್ಟ Âತೆ ಮತ್ತು ಶ್ರೇಷ್ಠತೆಯಪ್ರಭಾವದಿಂದ ಜಗತ್ತಿನಾದ್ಯಂತ ಇಂದು ಯೋಗದಿನವನ್ನು ಆಚರಿಸಲಾಗುತ್ತಿದೆ. ಇಂಥ ಶ್ರೇಷ್ಠಸಾಧನವನ್ನು ಎಲ್ಲರೂ ನಮ್ಮ ಜೀವನ ಶೈಲಿಯನ್ನಾಗಿರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಯೋಗದಿಂದ ವ್ಯಕ್ತಿ ವಿಕಸನ ಹಾಗೂ ಜಾಗತಿಕಸಾಮರಸ್ಯವನ್ನು ಸಾ ಧಿಸಬಹುದು. ಆರೋಗ್ಯಕರಮನಸ್ಸು ಆರೋಗ್ಯವಂತನ ದೇಹದಲ್ಲಿ ನೆಲೆಸುತ್ತದೆಎನ್ನುವ ಹಾಗೆ, ಯೋಗದ ಮೂಲಕ ಆಯುಷ್ಮಾನ್‌ಭಾರತ, ಶ್ರೇಷ್ಠ ಭಾರತ ಹಾಗೂ ಆರೋಗ್ಯಶಾಲಿಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು