ಬೀದರ ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಸಿಎಂ ಭೇಟಿ
ಪ್ರಮುಖ ನಾಯಕರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.
Team Udayavani, Jan 22, 2021, 4:45 PM IST
ಬಸವಕಲ್ಯಾಣ: ಈಚೆಗೆ ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪನವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಬೀದರ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಪ್ರಮುಖ ನಾಯಕರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬೀದರ ಜಿಪಂಗೆ ಹೆಚ್ಚಿನ ಅನುದಾನ ನೀಡಬೇಕೆಂದು ಒಮತ್ಮದಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೇಗೋಪಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಪಂ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ಸೋಮನಾಥ ಪಾಟೀಲ, ಡಿ.ಕೆ. ಸಿದ್ರಾಮ, ಬಸವರಾಜ ಆರ್ಯ ಇದ್ದರು.
ಪರತಾಪುರ: ಪಲ್ಲಕ್ಕಿ ಮೆರವಣಿಗೆ
ಬಸವಕಲ್ಯಾಣ: ತಾಲೂಕಿನ ಪರತಾಪುರ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತಾದಿಗಳ ನಡುವೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.ದೇವಸ್ಥಾನದಿಂದ ಅಗ್ನಿಕುಂಡದವರೆಗೆ ನಡೆದ ಪಲ್ಲಕ್ಕಿ ಮೆರವಣಿಗೆ ಉದ್ದಕ್ಕೂ ಭಕ್ತಾದಿಗಳು ಶಲ್ಯ ಹಾಗೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ದಯಾನಂದ ಬೇಲೂರೆ, ರತಿಕಾಂತ ಮುರುಡೆ, ಚಂದ್ರಕಾಂತ ಸ್ವಾಮಿ, ವಿದ್ಯಾಸಾಗರ ಉಡಚಣ, ಮಲ್ಲಿಕಾರ್ಜುನ ಕಾಸ್ತೆ, ಶ್ರೀಮಂತ ಮಹಾಜನ, ಶಿವು ಕುದರೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ದೀಪಕ ಗಾಯಕವಾಡ, ಕಾಳಿದಾಸ ಜಾಧವ, ಸಂಜು ಗಾಯಕವಾಡ,
ಸತೀಶ ಹಿರೇಮಠ ಇದ್ದರು.