ದಲಿತ ಸಂಘಟನೆಗಳಿಂದ¨ ‌ರಾಜೇಶ್ವರ ಗ್ರಾಮ ಬಂದ್‌

Team Udayavani, Jan 9, 2018, 12:15 PM IST

ಬಸವಕಲ್ಯಾಣ: ವಿಜಯಪೂರದಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಬೇಕು. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳಿಂದ ಸೋಮವಾರ ಕರೆ ನೀಲಾಗಿದ್ದ ರಾಜೇಶ್ವರ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ದಲಿತ ಸಂಘರ್ಷ ಸಮಿತಿ ರಾಜೇಶ್ವರ ಗ್ರಾಮ ಶಾಖೆ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಘಟಕ, ಭೀಮನ ಹುಲಿಗಳ ಸಂಘ, ರಾಜೇಶ್ವರನ ಬೌದ್ಧ ವಿಹಾರ ಸಮಿತಿ, ದಲಿತ ನೌಕರರ ಸಂಘದ ಆಶ್ರಯದಲ್ಲಿ ಕರೆ ನೀಡಿದ್ದ ಬಂದ್‌ಗೆ ಓಗೊಟ್ಟು ಗ್ರಾಮದಲ್ಲಿ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಸಂಜೆ ವರೆಗೆ ಬಂದ್‌ ಆಗಿದ್ದವು. ಬಂದ್‌ ನಿಮಿತ್ತ ಗ್ರಾಮದ ಭೀಮನಗರ ಓಣಿಯಿಂದ ಪ್ರಮುಖ ರಸ್ತೆಗಳ ಮೂಲಕ ಬಸ್‌ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ ಅಶೋಕ ಕುಲ್ಕರ್ಣಿ ಅವರಿಗೆ ಸಲ್ಲಿಸಲಾಯಿತು.

ರಾಜೇಶ್ವರನ ಬೌದ್ಧ ವಿಹಾರ ಸಮಿತಿ ಅಧ್ಯಕ್ಷ ಧೂಳಪ್ಪ ಪೋಸ್ತಾರ ಹಾಗೂ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಅಂಕುಶ ಗೋಖಲೆ ಅವರು, ದಲಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಸಚಿವ ಕುಮಾರ ಹೆಗಡೆ ಅವರಿಂದಾದ ಸಂವಿಧಾನದ ಅವಹೇಳನ ಖಂಡಿಸಿದರು.

ಎಸ್‌ಸಿ-ಎಟಿ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಮುಖಂಡರಾದ ದಯಾನಂದ ಕಟ್ಟಿಮನಿ, ಪರಮೇಶ್ವರ ಬುಡಕೆ, ಅಶೋಕ ಅಂತಪ್ಪನಳ್ಳಿ, ಧನರಾಜ ರಂಜೇರಿ, ಗ್ರಾಪಂ ಮಾಜಿ ಅಧ್ಯಕ್ಷ ವಿಕ್ರಮ ಪೊಸ್ತಾರ, ಎಂ.ಡಿ, ಹನೀಪ್‌ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಾಲೆ, ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಅಧ್ಯಕ್ಷ ನಾಗಣ್ಣಾ ಘಾಂಗ್ರೆ, ಭೀಮನ ಹುಲಿಗಳ ಸಂಘದ ಅಧ್ಯಕ್ಷ ಸಂತೋಷ ಮುಲಗೆ, ತಾಪಂ ಸದಸ್ಯೆ ಜ್ಯೋತಿ ಸುಭಾಷ, ಗ್ರಾಪಂ ಉಪಾಧ್ಯಕ್ಷ ದೀಪಕ ಪೋಸ್ತಾರ, ಮುಖಂಡರಾದ ಸಂಗ್ರಾಮ ಮೂಲಗೆ, ಸುಭಾಷ ಅಂತಪನಳ್ಳಿ, ವಿಕ್ರಮ ಪೋಸ್ತಾರ, ಮಾಣಿಕ ಘಾಂಗ್ರೆ, ವೀರಣ್ಣ ಮೂಲಗೆ, ಅಯುಬಖಾನ, ಅಜೀಮೋದ್ದಿನ್‌ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ