ಕುಡಿವ ನೀರಿಗಾಗಿ ಹಾಹಾಕಾರ

Team Udayavani, Mar 26, 2019, 3:59 PM IST

ಚಡಚಣ: ಬತ್ತಿದ ಭೀಮಾನದಿ, ನೀರಿಗಾಗಿ ನದಿ ತೀರದ ಗ್ರಾಮಗಳ ಜನರ ಪರದಾಟ. ಇದಕ್ಕೆ ಸಾಕ್ಷಿ ಎಂಬಂತೆ ರೇವತಗಾಂವ ಗ್ರಾಮವು ಕೂಡ ಹೊರತಾಗಿಲ್ಲ, ಈ ವರ್ಷ ಮಳೆಯು ಕೈ ಕೊಟ್ಟ ಹಿನ್ನೆಲೆಯಲ್ಲಿ, ಭೀಕರ ಬರಗಾಲ ಸಂಭವಿಸಿ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನವಿಡಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ರೇವತಗಾಂವ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮೂರು-ನಾಲ್ಕು ಕಿ.ಮೀ ದೂರದಿಂದ ಸೈಕಲ್‌ ಹಾಗೂ ಬೈಕ್‌ ಗಳ ಮೇಲೆ ತಂದು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ಇನ್ನೊಂದಡೆ ಕೆಲವು ಮಹಿಳೆಯರು ಕಿ.ಮೀ. ನಡೆದುಕೊಂಡು ಹೋಗಿ ನೀರನ್ನು ಹೊತ್ತುಕೊಂಡು ಬರುತ್ತಿದ್ದಾರೆ, ಇದರಿಂದ ಮುಕ್ತಿ ಸಿಗುವುದು ಯಾವಾಗ? ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ
ಮನೆ ಮಾಡಿಕೊಂಡಿದೆ.
ಬಹು ಹಳ್ಳಿ ಕುಡಿಯುವ ನೀರಿನ ಘಟಕವು ಸ್ಥಗಿತ-ಭೀಮಾ ನದಿಯು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ನಿವರಗಿ ಕ್ರಾಸ್‌
ಹತ್ತಿರವಿರುವ ಬಹು ಹಳ್ಳಿ ಕುಡಿಯುವ ನೀರಿನ ಘಟಕ್ಕೂ ಈ ಭೀಮಾ ನದಿಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಈಗ
ಈ ನೀರಿನ ಘಟಕವು ಬಂದಾಗಿದ್ದು, ಇದರಿಂದ ಗ್ರಾಮಕ್ಕೆ ಒಂದು ತಿಂಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ.
ನೀರಿನ ಘಟಕಗಳು ಸ್ಥಗಿತ: ಗ್ರಾಮದಲ್ಲಿ ನೀರಿನ ತೊಂದರೆಯನ್ನು ತಪ್ಪಿಸಲು ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಂಚಾ¿ತ್‌ ವತಿಯಿಂದ ಆರಂಭಿಸಲಾಗಿತ್ತು, ಆದರೆ ಒಂದು ವರ್ಷದಿಂದ ಗ್ರಾಪಂ ಮುಂಭಾಗ ಹಾಗೂ ಅಂಬೇಡ್ಕರ್‌ ಕಾಲೋನಿ ಹತ್ತಿರವಿರುವ ಶುದ್ಧ ಕುಡಿಯುವ ನೀರಿನ ಘಟಕಗಳೆರಡು ಬಂದ ಬಿದ್ದು ವರ್ಷ ಕಳೆಯುತ್ತಿದ್ದರು ಅವುಗಳನ್ನು ಪುನಃ  ರಂಭಿಸುವ
ಕಾರ್ಯ ಮಾತ್ರ ಅಧಿಕಾರಿಗಳು ಮಾಡುತ್ತಿಲ್ಲ.
ಕಿ.ಮೀ.ಗಟ್ಟಲೆ ದೂರ ಹೋಗಿ ಕುಡಿಯುವ ನೀರನ್ನು ತರಲು ಹೋದರೆ ನಮಗೂ ಕುಡಿಯಲು ನೀರು ಸಾಕಾಗತಾಯಿಲ್ಲ, ಹಿಂಗಾದ್ರ ನಾವು ಕುಡಿಯಲು ನೀರು ಎಲ್ಲಿಂದ ತರಬೇಕ್ರಿ, ಟ್ಯಾಂಕರ್‌ ಮೂಲಕಾದ್ರು ನಮಗ ನೀರು ಕೊಡ್ರೀ ಇಲ್ಲಂದ್ರ ನಾವು ಹೋಟ್‌ ಹಾಕೋದೇ ಇಲ್ಲ ಎಂದು ಗ್ರಾಮಸ್ಥೆ ನೀಲವ್ವ ಜಕ್ಕಪ್ಪ ಬೀರುಣಗಿ ಹೇಳಿದರು.

ಈ ವಿಭಾಗದಿಂದ ಇನ್ನಷ್ಟು

 • ವಿಜಯಪುರ: ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಗರಡಿಯಲ್ಲಿ ಬೆಳೆದ ನಾನು, ಜಾತಿ ರಹಿತ ರಾಜಕೀಯ ಮಾಡುವುದಕ್ಕೆ ಹಾಕಿಕೊಟ್ಟಿರುವ ಸಭ್ಯ ರಾಜಕೀಯವೇ...

 • ವಿಜಯಪುರ: ಅದೃಷ್ಟವಂತ ರಾಜಕೀಯ ನಾಯಕ ಎಂದೇ ಜಿಲ್ಲೆಯಲ್ಲಿ ಜನಜನಿತವಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿಜಯಪುರ ಕ್ಷೇತ್ರದಲ್ಲಿ ಮೂರನೇ ಬಾರಿಗೆ ವಿಜಯ ಸಾಧಿಸಿದ್ದಾರೆ....

 • ಸೊಲ್ಲಾಪುರ: ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ...

 • ವಿಜಯಪುರ: ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಆ ಯುವಕ ಬೀದಿಗೆ ಇಳಿದಿದ್ದ. ತಮ್ಮ ಬದುಕಿನುದ್ದಕ್ಕೂ...

 • ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾದ ವಿಜಯಪುರ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ವಿಜಯ ಸಾಧಿಸುವ ಮೂಲಕ ಸಂಸತ್‌ ರಾಜಕೀಯ ಜೀವನದಲ್ಲಿ 6ನೇ ಬಾರಿಗೆ ಲೋಕಸಭೆ ಪ್ರವೇಶಿಸಿರುವ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...