ನೀರಿಗಾಗಿ ಅನ್ನದಾತರ ಹೋರಾಟ

Team Udayavani, Mar 17, 2020, 3:17 PM IST

ನೀರಿಗಾಗಿ ಅನ್ನದಾತರ ಹೋರಾಟ

ಸಾಂದರ್ಭಿಕ ಚಿತ್ರ

ಕೊಲ್ಹಾರ: ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ಐದು ದಿನ ಪೂರೈಸಿ ಆರನೇ ದಿನಕ್ಕೆ ಕಾಲಿಟ್ಟಿದೆ.

ತಾಲೂಕಿನ ಕೂಡಗಿ ಗ್ರಾಮದ ರೈಲ್ವೆ ಸ್ಟೇಷನ್‌ ಹತ್ತಿರ ಮುಳವಾಡ ಆಲಮಟ್ಟಿ ರಸ್ತೆ ಪಕ್ಕದಲ್ಲಿನ ರೈತರ ಸತ್ಯಾಗ್ರಹ ಸ್ಥಳಕ್ಕೆ ರೈಲ್ವೆ ಇಲಾಖೆ ಎಡಿಆರ್‌ಎಂ ಅಧಿಕಾರಿಗಳಾದ ಮುರುಳಿಕೃಷ್ಣ ಭೇಟಿ ನೀಡಿದರು. ಈ ವೇಳೆ ರೈತರೊಂದಿಗೆ ಮಾತನಾಡಿದ ಅವರು, ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿಗೆ ಅಡಚಣೆಯಾಗಿರುವ ಒಂದು ರೈಲ್ವೆ ಹಳಿಯನ್ನು ಸಸ್ಪೆಂಡ್‌ ಮಾಡಲು ದೆಹಲಿಯಲ್ಲಿರುವ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ನಾಳೆ ಅಥವಾ ನಾಡಿದ್ದು ಸಂಜೆ ವೇಳೆಗಾಗಿ ಆದೇಶ ಬರುವ ನಿರೀಕ್ಷೆಯಿದೆ. ಮಾ. 31ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವದು. ಆದ್ದರಿಂದ ರೈತರು ಧರಣಿಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡರು.

ಈ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈಲ್ವೆ ಹಳಿ ಕಾಮಗಾರಿ ಸ್ಥಗಿತಗೊಳಿಸುವ ಆದೇಶದ ಪ್ರತಿ ನಮ್ಮ ರೈತರ ಸಮ್ಮುಖದಲ್ಲಿ ಅಧಿಕಾರಿಗಳು ತೋರಿಸಿದ ತಕ್ಷಣ ಧರಣಿ ಹಿಂಪಡೆಯುತ್ತೇವೆ. ತದನಂತರ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸಂಬಂಧಪಟ್ಟ ಅಲ್ಲಿವರೆಗೂ ಯಾವುದೇ ಕಾರಣಕ್ಕೂ ಧರಣಿ ಹಿಂಪಡೆಯುವದಿಲ್ಲ ಎಂದರು.

ರಾಜ್ಯ ಸರಕಾರ ಕೊರೊನಾ ವೈರಸ್‌ ಕುರಿತು ಆರೋಗ್ಯ ಎಮರ್ಜೆನ್ಸಿ ಆದೇಶವಿರುವುದರಿಂದ ಮಂಗಳವಾರ ನಡೆಸಲು ಉದ್ದೇಶಿಸಿದ್ದ ಎತ್ತು ಮತ್ತು ಎತ್ತಿನಗಾಡಿ, ಕುರಿ, ದನಕರುಗಳು, ಇನ್ನಿತರ ಸಾಕು ಪ್ರಾಣಿಗಳ ಜೊತೆಯಲ್ಲಿ ರೈಲ್ವೆ ಹಳಿ ಮೇಲೆ ಕುಳಿತುಕೊಂಡು ಧರಣಿ ಮಾಡುವ ಕುರಿತು ರೈತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದರು. ಕೂಡಗಿ ಪೊಲೀಸ್‌ ಠಾಣಾಧಿಕಾರಿ ರೇಣುಕಾ ಜಕನೂರ ಮಾತನಾಡಿ, ರೈತರು ಧರಣಿ ಹಿಂಪಡೆಯಬೇಕು. ನಾವು ಕೂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಕಾಮಗಾರಿ ಕುರಿತು ಮಾತನಾಡಿದ್ದು ಇದೆ. ತಾವುಗಳು ಈ ಧರಣಿ ಹಿಂಪಡೆದು ಸಹಕಾರ ನೀಡಬೇಕೆಂದು ಕೋರಿದರು. ಆದರೆ ರೈತರು ಒಪ್ಪಲಿಲ್ಲ. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್‌.ಪಾಟೀಲ, ಗೊಳಸಂಗಿಯ ಮುರುಗೇಶ ಹೆಬ್ಟಾಳ ಮಾತನಾಡಿದರು.

ಐದನೇ ದಿನದ ಅಹೋರಾತ್ರಿ ಧರಣಿಯಲ್ಲಿ ಸಿದ್ರಾಮ ಅಂಗಡಗೇರಿ, ಸದಾಶಿವ ಬರಟಗಿ, ವಿಠಲ ಬಿರಾದಾರ, ಕಲ್ಲಪ್ಪ ಮಟ್ಯಾಳ, ಶಿವಪ್ಪ ಮುರನಾಳ, ಪಾಂಡು ಹ್ಯಾಟಿ, ಸೋಮನಿಂಗ ಹಡಪದ, ಗುರಪ್ಪ ನಾಗೋಡ, ಸಾಹೇಬಗೌಡ ಬಿರಾದಾರ, ಹೊನ್ನಪ್ಪ ತೋಟದ, ಗಣೇಶ ರಾಠೊಡ, ಎಚ್‌.ಜಿ. ಮಕಾನದಾರ, ಖಾಜೇಸಾಬ ಕೊಲ್ಹಾರ, ವಿಠೊಬಾ ಸಾಳುಂಕೆ ಇದ್ದರು.

ಟಾಪ್ ನ್ಯೂಸ್

ಖಲಿಸ್ತಾನ ಉಗ್ರ  ನಿಜ್ಜರ್‌ಗೆ ಕೆನಡಾ ಸಂಸತ್‌ ಶ್ರದ್ಧಾಂಜಲಿ!

ಖಲಿಸ್ತಾನ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್‌ ಶ್ರದ್ಧಾಂಜಲಿ!

Tamil Nadu BJP; Two leaders sacked for criticizing Annamalai and Tamilisai

Tamil Nadu BJP; ಅಣ್ಣಾಮಲೈ, ತಮಿಳಿಸೈ ವಿರುದ್ದ ಟೀಕೆ ಮಾಡಿದ್ದಕ್ಕೆ ಇಬ್ಬರು ನಾಯಕರ ವಜಾ

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Rahul Dravid Loses Cool At Reporter Over 97 Test Question

Barbados; 27 ವರ್ಷಗಳ ಹಿಂದಿನ ಪಂದ್ಯ ನೆನಪಿಸಿದ ರಿಪೋರ್ಟರ್; ತಾಳ್ಮೆ ಕಳೆದುಕೊಂಡ ದ್ರಾವಿಡ್

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಳಗಾನೂರು: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

Balaganur: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

ವರ್ತುಲ ಕಾಮನಬಿಲ್ಲಿನಲ್ಲಿ ಸೆರೆಯಾದ ಆದಿತ್ಯ… ವಿಜಯಪುರದಲ್ಲಿ ಖಗೋಳ ಅಚ್ಚರಿ

Miracle: ವರ್ತುಲ ಕಾಮನಬಿಲ್ಲಿನಲ್ಲಿ ಸೆರೆಯಾದ ಆದಿತ್ಯ… ವಿಜಯಪುರದಲ್ಲಿ ಖಗೋಳ ಅಚ್ಚರಿ

12-

Muddebihal: ಮದ್ಯ ಮಾರಾಟ ತಡೆಯಲು ಜನಜಾಗೃತಿ: ಗ್ರಾಮಸ್ಥರಿಂದ ಸಾಮೂಹಿಕ ಪ್ರತಿಭಟನೆ

Tragedy; ಎಮ್ಮೆಗೆ ನೀರು ಕುಡಿಸಲು ಹೋದಾಗ ಹೊಂಡದಲ್ಲಿ ಬಿದ್ದು ಮೂವರ ಸಾವು

Tragedy; ಎಮ್ಮೆಗೆ ನೀರು ಕುಡಿಸಲು ಹೋದಾಗ ಹೊಂಡದಲ್ಲಿ ಬಿದ್ದು ಮೂವರ ಸಾವು

ಬಸನಗೌಡ ಪಾಟೀಲ ಯತ್ನಾಳ

Vijayapura; ತಿಂಗಳೊಳಗೆ ಕಾಂಗ್ರೆಸ್ ಶಾಸಕರಿಂದ ಬಂಡಾಯ: ಶಾಸಕ ಯತ್ನಾಳ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ಖಲಿಸ್ತಾನ ಉಗ್ರ  ನಿಜ್ಜರ್‌ಗೆ ಕೆನಡಾ ಸಂಸತ್‌ ಶ್ರದ್ಧಾಂಜಲಿ!

ಖಲಿಸ್ತಾನ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್‌ ಶ್ರದ್ಧಾಂಜಲಿ!

ತಮಿಳುನಾಡು, ಗುಜರಾತ್‌ ಸಮುದ್ರದಲ್ಲಿ ಗಾಳಿ ವಿದ್ಯುತ್‌ ಕೇಂದ್ರ: ಸಚಿವ ವೈಷವ್‌

ತಮಿಳುನಾಡು, ಗುಜರಾತ್‌ ಸಮುದ್ರದಲ್ಲಿ ಗಾಳಿ ವಿದ್ಯುತ್‌ ಕೇಂದ್ರ: ಸಚಿವ ವೈಷ್ಣವ್‌

Tamil Nadu BJP; Two leaders sacked for criticizing Annamalai and Tamilisai

Tamil Nadu BJP; ಅಣ್ಣಾಮಲೈ, ತಮಿಳಿಸೈ ವಿರುದ್ದ ಟೀಕೆ ಮಾಡಿದ್ದಕ್ಕೆ ಇಬ್ಬರು ನಾಯಕರ ವಜಾ

ಬಳಗಾನೂರು: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

Balaganur: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.