ಸ್ನೇಹಕ್ಕೆ ಸೈ:ಅಗಲಿದ ಗೆಳೆಯನ ಕುಟುಂಬಕ್ಕೆ ಲಕ್ಷಾಂತರ ರೂ.ನೆರವು ನೀಡಿದ ದೋಸ್ತರು


Team Udayavani, Sep 25, 2021, 2:49 PM IST

vijayapura news

ನಾಲತವಾಡ:‘ಉಪ್ಪಿಗಿಂತ ರುಚಿ ಇಲ್ಲ, ಸ್ನೇಹಕ್ಕಿಂತ ಬಂಧುವಿಲ್ಲ’ ಎನ್ನುತ್ತಾರೆ. ಹೌದು, ರಕ್ತ ಸಂಬಂಧಗಳನ್ನು ಮೀರಿದ್ದು ಈ ಸ್ನೇಹ ಸಂಬಂಧ. ಕೋಮು ಸೌಹಾರ್ದತೆಗೆ ಸಾಕ್ಷಿಯಂತಿದೆ ಈ ಒಂದು ಕೆಲಸ. ಮುಸ್ಲಿಂ ಸ್ನೇಹಿತನ ಅಕಾಲಿಕ ಮರಣದಿಂದ ದಿಕ್ಕಿಲ್ಲದಂತಾಗಿದ್ದ ಆತನ ಕುಟುಂಬಕ್ಕೆ ಹಿಂದು ಸ್ನೇಹಿತರು,ಮೃತ ಸ್ನೇಹಿತನ ಕನಸಾದ ಮಕ್ಕಳ ಶಿಕ್ಷಣದ ಸಲುವಾಗಿ ಬ್ಯಾಂಕ್ ನಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ರೂಪಾಯಿಗಳ ಎಫ್ ಡಿ  ಮಾಡುವ ಮೂಲಕ ಸ್ನೇಹಕ್ಕೆ ಸಾವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ನಾಲತವಾಡದ ಯುವಕರು ತಮ್ಮ ಬಾಲ್ಯದ ಗೆಳೆಯ ಖಾಸೀಮಸಾಹೇಬ್ ಸಿಕ್ಕಲಗಾರ(36)ನ ಅಕಾಲಿಕ ಮರಣದಿಂದ ಅನಾಥವಾಗಿದ್ದ ಆತನ ಮಕ್ಕಳು,ಪತ್ನಿ,ತಂದೆ ತಾಯಿಗೆ ಆಸರೆಯಾಗಲು  ಹತ್ತೇ ದಿನದಲ್ಲಿ ಲಕ್ಷಕ್ಕೂ ಅಧಿಕ ಹಣ ಹೊಂದಿಸಿ ಕೊಟ್ಟು  ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಹಿಂದೂ -ಮುಸ್ಲಿಂ ಬಾಯ್ ಬಾಯ್ ಎಂದು ಕೋಮು ಸೌಹಾರ್ದತೆ ಮರೆದಿದ್ದಾರೆ.

ಪಟ್ಟಣದ ವೃದ್ಧ ದಂಪತಿಗಳಾದ ಅಮೀನವ್ವ ಮತ್ತು  ರಾಜೇಸಾಹೇಬ ದಂಪತಿಗೆ ಆಸರೆಯಾಗಿದ್ದ ಒಬ್ಬನೇ ಮಗ ಖಾಸೀಮಸಾಹೇಬ (36) ಕಿಡ್ನಿ ವೈಫಲ್ಯದಿಂದ ಅಕಾಲಿಕ ಮರಣಹೊಂದಿದ್ದರು. ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ ರೇಶ್ಮಾಳು ತನ್ನ ಮೂವರು ಪುಟ್ಟ ಮಕ್ಕಳಿಗೆ ಊಟ ಹಾಕುವುದೇ ಸವಾಲಾಗಿತ್ತು,ಮಕ್ಕಳ ಶಿಕ್ಷಣದ ಕನಸು ಕಂಡಿದ್ದ ಪತಿಯ ಆಸೆ ಈಡೇರಿಸುವುದಂತೂ ಕನಸಿನ ಮಾತೆಂದು ಕಂಗಾಲಾದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಲಿಂಗಾಯತ,ಹಿಂದೂ ಸ್ನೇಹಿತರ ಸಹಾಯ ಹರಿದುಬಂತು.

ಇದನ್ನೂ ಓದಿ:ಚಿಕ್ಕಮಗಳೂರು: ಬಾಲಕಿಯ ಮೇಲೆ ಅತ್ಯಾಚಾರ; ಯುವಕನ ಬಂಧನ

ಸಹೃದಯಿ ಈ ಯುವಕರು ತಮ್ಮ ಗೆಳೆಯನ ಪತ್ನಿ,ಮಕ್ಕಳು ಹಾಗೂ ತಂದೆ ತಾಯಿಯ  ಪೋಷಣೆಗಾಗಿ ಸಂಸಾರದ ಬಂಡಿ ಸಾಗಲು ಕುಟುಂಬದ ಖರ್ಚಿಗೆ ವಯಕ್ತಿಕ ನಿಧಿಯನ್ನೂ ಸಹ ನೀಡಿದ್ದು, ಮಾನವೀಯ ಮೌಲ್ಯದ ನಿದರ್ಶನ ಎನ್ನಬಹುದು.ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಖಾಸೀಮಸಾಹೇಬ ಒಬ್ಬನೇ ಆಧಾರವಾಗಿದ್ದ. ಆತನೇ ದುಡಿದು ಕುಟುಂಬವನ್ನು ಸಲಹುತ್ತಿದ್ದ. ಬಡತನದಿಂದ ತಾನು ಇತರರಂತೆ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದ ಖಾಸೀಮ್ ತನ್ನ ಮಕ್ಕಳಿಗಾದರೂ ಗುಣಮಟ್ಟದ ಶಿಕ್ಷಣ ಕೊಡಿಸುವ  ಕನಸು ಕಂಡಿದ್ದ. ಅದಕ್ಕಾಗಿ ಖಾಸಗಿ ಖಾರ್ಕಾನೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ, ಅದರೆ ವಿಧಿಯಾಟ ಕಳೆದ ಏಳು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಡಯಾಲಿಸೀಸ್ ಮಾಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ದುರ್ಬಲನಾದ,ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಆಸೆಯು ವಿಧಿಯಾಟದ ಮುಂದೆ ಸೋತು ಬಾಳ ಪಯಣ ಮುಗಿಸಿದ್ದ.

ಖಾಸೀಮ್ನ ಕನಸು ನನಸು ಮಾಡುವ ಪಣ ತೊಟ್ಟ ಆತನ ಸ್ಥಳೀಯ ಸ್ನೇಹಿತರು ಪರ ಊರಲ್ಲಿರುವ ಇತರೆ ಸ್ನೇಹಿತರನ್ನು ಸಂಪರ್ಕಿಸಿ  ನೆರವು ಪಡೆದು ತಮ್ಮ ಹಣವನ್ನೂ ಹಾಕಿ ಬ್ಯಾಂಕಿನಲ್ಲಿ ಪಿಕ್ಸ್ ಡಿಪಾಸಿಟ್ ಇಡುವ ಮೂಲಕ  ಮೃತನ ಕುಟುಂಬಕ್ಕೆ1. 50 ಲಕ್ಷ ದೇಣಿಗೆ ನೀಡುವ ಮೂಲಕ ಸ್ನೇಹ ಅಮರ ಎಂದಿದ್ದಾರೆ.

ಇತರರಿಗೂ ಮಾದರಿಯಾದ ಕಾರ್ಯ:ಖಾಸೀಮ್ ನ ಗೆಳೆಯರು ಹಿತೈಷಿಗಳ  ಕಾರ್ಯಕ್ಕೆ ಪಟ್ಟಣದ ಜನರು  ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಖಾಸೀಮ್ ನ ಪತ್ನಿ, ತಂದೆ ತಾಯಿಯ ಜೀವನಾಧಾರಕ್ಕೆ ಏನಾದರೂ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

‘ಕಷ್ಟಕ್ಕೆ ಬಂಧುಗಳೇ ಆಗದ ಈ ಕಾಲದಲ್ಲಿ ಸ್ನೇಹಕ್ಕಾಗಿ, ವೃದ್ಧ ದಂಪತಿ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಲು,ಪುಟ್ಟ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡಿದ ಪಟ್ಟಣದ ಯುವಕರ ಕಾಳಜಿ ಇತರರಿಗೆ ಮಾದರಿಯಾಗಿದೆ’

ಶಶಿಕಲಾ ಗೊಳಸಂಗಿ ಮುಖ್ಯಶಿಕ್ಷಕಿ ಸರ್ಕಾರಿ ವಿನಾಯಕ ನಗರ ಶಾಲೆ ನಾಲತವಾಡ

ಕಾಶಿನಾಥ ಬಿರಾದಾರ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.