ಸಹಕಾರ ಕ್ಷೇತ್ರದಲ್ಲಿ ಜಾತಿ ರಾಜಕೀಯ ಬೇಡ

Team Udayavani, Nov 15, 2019, 2:53 PM IST

15-November-29

ಚಿತ್ರದುರ್ಗ: ಸಹಕಾರ ಕ್ಷೇತ್ರದಲ್ಲಿ ಜಾತಿ ಮತ್ತು ರಾಜಕೀಯವನ್ನು ಬೆರಸದೆ ಸೇವಾ ಮನೋಭಾವದಿಂದ ಕೆಲಸವನ್ನು ಮಾಡಬೇಕು. ಆಗ ಮಾತ್ರ ಪ್ರಗತಿ ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಿಂಕಲ್‌ ಬಸವರಾಜ್‌ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ ಸಹಯೋಗದಲ್ಲಿ ಗುರುವಾರ ಸಹಕಾರ ಭವನದಲ್ಲಿ ಆಯೋಜಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ ಹಾಗೂ ಪಕ್ಷಗಳು ಅನಿವಾರ್ಯವಾದರೆ ಚುನಾವಣೆಗೆ ಸೀಮಿತವಾಗಲಿ. ಆಯ್ಕೆಯಾದ ನಂತರ ಸೇವಾ ಮನೋಭಾವ ಮಾತ್ರ ಮುಖ್ಯವಾಗಬೇಕು. ಆಗ ಮಾತ್ರ ಸಹಕಾರ ಕ್ಷೇತ್ರ ಬಲಗೊಳ್ಳುತ್ತದೆ ಎಂದರು.

ದೇಶದ ಪ್ರಥಮ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ದೇಶಕ್ಕೆ ಸ್ವಾತಂತ್ರ್ಯಾ ನಂತರ ನಂತರ ಸಹಕಾರದಿಂದ ದೇಶದ ಪ್ರಗತಿ ಕಾರಣ ಎಂಬುದನ್ನು ಅರಿತು ಸಹಕಾರ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ಒತ್ತು ನೀಡಿದರು. ಅವರ ಜನ್ಮದಿನದಂದೇ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು. ಸಹಕಾರ ಸಂಘಗಳು ಆರಂಭವಾಗದಿದ್ದರೆ ನಾವು ಉತ್ಪಾದಿಸಿದ ವಸ್ತುಗಳ ಮಾರಾಟ ಕಷ್ಟವಾಗುತ್ತಿತ್ತು. ಈಗ ವಿವಿಧ ರೀತಿಯ ಸಹಕಾರ ಸಂಘಗಳು ಸ್ಥಾಪನೆಯಾಗಿ ಜನರಿಗೆ ಸಾಕಷ್ಟು ನೆರವಾಗುತ್ತಿವೆ ಎಂದರು.

ಡಿಸಿಸಿ ಬ್ಯಾಂಕ್‌ ನಿದೇಶಕ ದ್ಯಾಮಣ್ಣ ಮಾತನಾಡಿ, ಸಹಕಾರ ಸಂಘಗಳನ್ನು ಆದಷ್ಟು ಬೇಗ ಗಣಕೀಕರಣ ಮಾಡಬೇಕಿದೆ. ಇದರಿಂದ ಸಾಕಷ್ಟು ಸಮಯ ಉಳಿಯುತ್ತದೆ. ಕೆಲಸದ ವೇಗ ಹೆಚ್ಚಾಗುತ್ತದೆ. ಎಲ್ಲ ಸಹಕಾರಿಗಳು ಇದಕ್ಕೆ ಸಹಕಾರ ನೀಡಬೇಕು. ನ. 15 ರಂದು ಹೊಸದುರ್ಗದಲ್ಲಿ, 16ರಂದು ಚಳ್ಳಕೆರೆಯಲ್ಲಿ 17 ರಂದು ಹಿರಿಯೂರಿನಲ್ಲಿ, 18 ರಂದು ಮೊಳಕಾಲ್ಮೂರಿನಲ್ಲಿ ಸಹಕಾರ ಸಪ್ತಾಹ ನಡೆಯಲಿದೆ. 19 ರಂದು ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಯುವಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಎಂಬ ಘೋಷಣೆಯಡಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ. ವೀರಭದ್ರಬಾಬು ಮಾತನಾಡಿ, ಈ ಬಾರಿ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಸಹಕಾರ ಸಪ್ತಾಹವನ್ನು ಜಿಲ್ಲೆಯ ಎಲ್ಲಾ ಸಹಕಾರಿಗಳು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ರಾಮ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ರೀತಿಯ 900 ಸಹಕಾರ ಸಂಘಗಳಿವೆ. ಅದರಲ್ಲಿ 753 ಸಹಕಾರ ಸಂಘಗಳು ಬ್ಯಾಂಕಿಂಗ್‌, ಹಾಲು ಉತ್ಪಾದನೆ, ಕೃಷಿಯೇತರ ಸಹಕಾರ ಸಂಘಗಳು ಮತ್ತು ಮಹಿಳಾ ಸಹಕಾರ ಸಂಘಗಳು ಕೃಷಿಯ ಪರವಾಗಿ ಕೆಲಸ ಮಾಡುತ್ತಿವೆ ಎಮದು ತಿಳಿಸಿದರು.

ಜಿಲ್ಲಾ ಸಹಕಾರ ಯೂನಿಯನ್‌ ಉಪಾಧ್ಯಕ್ಷ ಕರಿಯಪ್ಪ, ನಿರ್ದೇಶಕರಾದ ಪರಮೇಶ್ವರಪ್ಪ, ಕೆ.ಎ. ಸಿದ್ದಪ್ಪ, ಶ್ರೀಧರ್‌, ಎಚ್‌. ಆಂಜನೇಯ, ಟಿಎಪಿಸಿಎಂಎಸ್‌ ಅಧ್ಯಕ್ಷ ಮಂಜುನಾಥಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಘುರಾಮ ರೆಡ್ಡಿ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ ಉಲ್ಲಾ ಷರೀಫ್‌, ಸಹಕಾರ ಸಂಘಗಳ ಉಪ ನಿಬಂಧಕ ಗೋಪಾಲ ರೆಡ್ಡಿ, ಸಹಾಯಕ ನಿಬಂಧಕ ತಿಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಬಷೀರ್‌ ಖಾನ್‌ ಇತರರು ಇದ್ದರು.

ಟಾಪ್ ನ್ಯೂಸ್

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Minchu

Chincholi: ಸಿಡಿಲು ಬಡಿದು ಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

1–wwqaeeq

Mangaluru; ಮಂಗಳಾ ಕಪ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟಕ್ಕೆ ಚಾಲನೆ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

1-weewewq

Punjab ಅಭಿಮಾನಿಗಳ ಕ್ಷಮೆ ಕೋರಿದ ನಾಯಕ ಸ್ಯಾಮ್‌ ಕರನ್‌

1-wqeqewqewq

Tennis; ಇದೇ ಕೊನೆಯ ಸೀಸನ್‌:ಡೊಮಿನಿಕ್‌ ಥೀಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.