ಮುರಿದ ಜಿಮ್‌ ಉಪಕರಣ; ಮೊಬೈಲ್ ಬೆಳಕಲ್ಲೇ ವರ್ಕೌಟ್

Team Udayavani, Jul 9, 2019, 5:27 AM IST

ಮಂಗಳೂರು: ಕದ್ರಿ ಪಾರ್ಕ್‌ಗೆ ಆಗಮಿಸುವ ಎಲ್ಲರಿಗು ಜಿಮ್‌ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮಂಗಳೂರು ಪಾಲಿಕೆ ಆರಂಭಿಸಿದ ಉಚಿತ ಜಿಮ್‌ ಸೌಲಭ್ಯದ ಕೆಲವು ಉಪಕರಣಗಳು ಮುರಿದು ಹೋಗಿವೆ. ಜಿಮ್‌ನಲ್ಲಿ ಬೆಳಕಿನ ಸೌಲಭ್ಯವೂ ಇಲ್ಲದಿರುವುದರಿಂದ ರಾತ್ರಿ ಹೊತ್ತಿನಲ್ಲಿ ಆಗಮಿಸುವ ಮಂದಿ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲೇ ವರ್ಕೌಟ್ ಮಾಡುವಂತಾಗಿದೆ.

ಉಚಿತವಾಗಿಯೇ ಸಾರ್ವಜನಿಕರಿಗೆ ಜಿಮ್‌ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಪಾಲಿಕೆಯು ಕದ್ರಿ ಪಾರ್ಕ್‌ನಲ್ಲಿ ಜಿಮ್‌ ಸೌಲಭ್ಯವನ್ನು ಕಳೆದ ಮಾರ್ಚ್‌ ತಿಂಗ ಳಿನಿಂದ ಆರಂಭಿಸಿತು. ಆ ಮೂಲಕ, ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಕದ್ರಿ ಪಾರ್ಕ್‌ಗೆ ವಾಕಿಂಗ್‌ಗಾಗಿ ಆಗಮಿಸುವ ಸಾರ್ವಜನಿಕರಿಗೆ ವಾಕಿಂಗ್‌ನೊಂದಿಗೆ ಜಿಮ್‌ ಸೌಲಭ್ಯವನ್ನೂ ಪಡೆಯುವುದು ಸಾಧ್ಯವಾಯಿತು.

ಆದರೆ ಸೌಲಭ್ಯ ಆರಂಭವಾದ ಐದೇ ತಿಂಗಳುಗಳಲ್ಲಿ ಜಿಮ್‌ ಸಲಕರಣೆಗಳು ತುಂಡಾಗಿವೆ. ಸೈಕ್ಲಿಂಗ್‌ ಸಲಕರಣೆಯ ಒಂದು ಭಾಗದ ಪೆಡಲ್ನ ಮೆಟ್ಟು ಕಿತ್ತು ಹೋಗಿದ್ದು, ಕಬ್ಬಿಣದ ಸರಳು ಉಳಿದುಕೊಂಡಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ