ಶತಮಾನೋತ್ತರ ಸುವರ್ಣ ಮಹೋತ್ಸವ ಸಂಭ್ರಮ


Team Udayavani, Jul 16, 2018, 12:19 PM IST

16-july-8.jpg

ಮಹಾನಗರ : ಜಗತ್ತಿನ ವಿವಿಧ ದೇಶಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ವಿಶೇಷವಾಗಿ ಹೆಮ್ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಿರುವ ‘ಅಪೋಸ್ತಲಿಕ್‌ ಕಾರ್ಮೆಲ್‌’ ಕ್ರೈಸ್ತ ಧರ್ಮ ಭಗಿನಿಯರ ಸಂಸ್ಥೆಯ ಆರಂಭ ಗೊಂಡು 150 ವರ್ಷಗಳಾಗಿದ್ದು, ಶತಮಾನೋತ್ತರ ಸುವರ್ಣ ಮಹೋತ್ಸವದ
ಸಂಭ್ರಮದಲ್ಲಿದೆ. ಟರ್ಕಿ ದೇಶದ ಕನ್ಯಾ ಸ್ತ್ರೀ ಮಾತೆ ವೆರೋನಿಕಾ ಅವರು ಈ ಸಂಸ್ಥೆಯ ಸ್ಥಾಪಕಿ. ಮಂಗಳೂರಿಗೂ ಭೇಟಿ ನೀಡಿದ್ದ ಅವರು ಇಲ್ಲಿ ಕೆಲವು ದಿನಗಳ ಕಾಲ ಇದ್ದು, ಹೆಮ್ಮಕ್ಕಳ ಶಿಕ್ಷಣಕ್ಕೆ ಮೀಸಲಾದ ಸೈಂಟ್‌ ಆ್ಯಗ್ನೆಸ್‌ ಮತ್ತು ಸೈಂಟ್‌ ಆ್ಯನ್ಸ್‌ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಕಾರಣರಾಗಿದ್ದರು.

ಹುಟ್ಟು, ಹಿನ್ನೆಲೆ
ಟರ್ಕಿ ದೇಶದ ಕಾನ್ಸ್‌ಟೆಂಟಿನೋಪಲ್‌ ನಲ್ಲಿ 1823ರ ಅಕ್ಟೋಬರ್‌ 1ರಂದು ಜನಿಸಿದ ವೆರೋನಿಕಾ ಅವರ ಮೂಲ ಹೆಸರು ಸೋಫಿ ಲೀವ್ಸ್‌. ಅವ ರು 1851 ರಲ್ಲಿ ‘ಸಂತ ಜೋಸೆಫರ ದರ್ಶನ’ ಎಂಬ ಧಾರ್ಮಿಕ ಸಂಸ್ಥೆಗೆ ಸೇರಿ ‘ಭಗಿನಿ ವೆರೋನಿಕಾ’ ಎಂಬ ಹೆಸರನ್ನು ಪಡೆದರು. ಈ ಸಂಸ್ಥೆಯಲ್ಲಿ ಸೇವಾನಿರತರಾದ ಅವರು ಹೊಸ ಕನ್ಯಾಮಠ ಸ್ಥಾಪಿಸಲು ಕೇರಳದ ಕಲ್ಲಿಕೋಟೆ ತಲುಪಿದ್ದರು. ಈ ಸಂದರ್ಭ ಅವರು ಮಂಗಳೂರಿನ ಸೈಂಟ್‌ಆ್ಯನ್ಸ್‌ ಕನ್ಯಾಮಠಕ್ಕೆ ಭೇಟಿ ನೀಡಿ ಇಲ್ಲಿ ಧ್ಯಾನ, ಸೇವಾ ಕಾರ್ಯದಲ್ಲಿ ಕೆಲವು ದಿನಗಳನ್ನು ಕಳೆದಿದ್ದರು. ಮುಂದೆ ಕಲ್ಲಿಕೋಟೆಯಲ್ಲಿ ಸೇವಾ ನಿರತರಾದ ಅವರು ವಿದ್ಯೆಯಿಂದ ವಂಚಿತರಾದ ಅದೆಷ್ಟೋ ಹೆಮ್ಮಕ್ಕಳಿಗಾಗಿ ಒಂದು ಪುಟ್ಟ ಶಾಲೆಯನ್ನು ತೆರೆದಿದ್ದರು. ಫಾನ್ಸ್‌ ದೇಶದ ಬಯೋನ್‌ನಲ್ಲಿ ಕಾರ್ಮೆಲ್‌ ಮಾತೆಯ ಹಬ್ಬದ ದಿನವಾದ ಜು. 16, 1868 ರಲ್ಲಿ ‘ಅಪೋಸ್ತಲಿಕ್‌ ಕಾರ್ಮೆಲ್‌’ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಅವರಿಂದ ತರಬೇತಿ ಪಡೆದ ಮೂವರು ಭಗಿನಿಯರನ್ನು 1870 ನವೆಂಬರ್‌ 19ರಂದು ಮಂಗಳೂರಿಗೆ ಕಳುಹಿಸಿ ಹೆಮ್ಮಕ್ಕಳಿಗೆ ಶಿಕ್ಷಣ ನೀಡುವ ಕೈಂಕರ್ಯವನ್ನು ಆರಂಭಿಸುವಂತೆ ಸೂಚಿಸಿದ್ದರು. ನಗರಕ್ಕೆ ಆಗಮಿಸಿದ ಈ ಭಗಿನಿಯರು ಸೈಂಟ್‌ ಆ್ಯನ್ಸ್‌ ಕನ್ಯಾಮಠದಲ್ಲಿ ವಾಸ್ತವ್ಯ ಮಾಡಿದ್ದು, ಹಾಗೆ ಇದು ಅಪೋಸ್ತಲಿಕ್‌ ಕಾರ್ಮೆಲ್‌ ಸಂಸ್ಥೆಯ ಪ್ರಥಮ ಕನ್ಯಾ ಮಠವಾಯಿತು. ಮಾತೆವೆರೋನಿಕಾ (83) 1906ರಲ್ಲಿ ಫ್ರಾನ್ಸಿನ ‘ಪೋ’ ಎಂಬಲ್ಲಿರುವ ಕನ್ಯಾಮಠದಲ್ಲಿ ನಿಧನ ಹೊಂದಿದ್ದರು. ಮಾತೆ ವೆರೋನಿಕಾ ಅವರನ್ನು 1999 ಜುಲೈ 16ರಂದು ‘ದೇವರ ಸೇವಕಿ’, 2014 ಜುಲೈ 9ರಂದು ‘ಪೂಜ್ಯ ಮಾತೆ ವೆರೋನಿಕಾ’ ಎಂದು ಪೋಪ್‌ ಫ್ರಾನ್ಸಿಸ್‌ ಅವರು ಬಿರುದು ನೀಡಿ ಗೌರವಿಸಿದ್ದಾರೆ.

ಇದೀಗ ಅಪೊಸ್ತಲಿಕ್‌ ಕಾರ್ಮೆಲ್‌ ಸಂಸ್ಥೆಯು 2018 ಜು. 16ರಂದು 150 ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಭಾರತ ಮಾತ್ರವಲ್ಲದೆ ಪಾಕಿಸ್ಥಾನ, ಕುವೈಟ್‌, ಬಹ್ರೈನ್‌, ಫ್ರಾನ್ಸ್‌, ಆಫ್ರಿಕಾದ ಕೆನ್ಯಾ, ಶ್ರೀಲಂಕಾ, ತಾನಾjನಿಯಾ ಹಾಗೂ ಇಟೆಲಿಯಲ್ಲೂ ಈ ಸಂಸ್ಥೆಯ ಭಗಿನಿಯರು ಕನ್ಯಾಮಠವನ್ನು ಹೊಂದಿದ್ದಾರೆ. ಈಗ 6 ಪ್ರಾಂತಗಳ 200 ಮಠಗಳಲ್ಲಿ ಸುಮಾರು 1,600ರಷ್ಟು ಕನ್ಯಾಸ್ತ್ರೀಯರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ಪ್ರಾಂತದಲ್ಲಿ ಈಗ 2 ಪದವಿ ಕಾಲೇಜು, 2 ಸ್ನಾತಕೋತ್ತರ ಪದವಿ ಕೇಂದ್ರ, ಪಿಎಚ್‌.ಡಿ. ಸೆಂಟರ್‌, ಬಿಇಡಿ ಹಾಗೂ ಎಂಇಡಿ, ಮೂರು ಡಿಎಡ್‌, 7 ಪ.ಪೂ. ಕಾಲೇಜುಗಳು, 19 ಪ್ರೌಢಶಾಲೆ, 23 ಪ್ರಾಥಮಿಕ ಶಾಲೆ, 23 ಶಿಶುನಿಲಯ, 4 ವಿದ್ಯಾರ್ಥಿನಿಲಯ ಹಾಗೂ ವಸತಿ ನಿಲಯ, 7 ಅನಾಥಾಲಯಗಳು ಅಪೊಸ್ತಲಿಕ್‌ ಕಾರ್ಮೆಲ್‌ಎಜುಕೇಶನಲ್‌ ಸೊಸಾೖಟಿಯ ಅಧೀನದಲ್ಲಿವೆ. ಶಿಕ್ಷಣದ ಜತೆ ಸಮಾಜ ಸೇವೆ, ವೈದ್ಯಕೀಯ ಸೇವೆ, ಹಿರಿಯ ನಾಗರಿ ಕರ ಸೇವೆ, ಬಂಧೀಖಾನೆ ಸೇವೆ, ಅಂಗವಿಕಲ ಮಕ್ಕಳ ಆರೈಕೆ, ದೀನದಲಿತರ ಸೇವೆ, ಮಹಿಳೆಯರ ಅಭಿವೃದ್ಧಿ-ಹೀಗೆ ಹತ್ತು ಹಲವು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಡಿದ್ದಾರೆ.

150ನೇ ವರ್ಷದ ಸಂಸ್ಮರಣಾ ಯೋಜನೆಗಳು
 .ಆಶ್ರಯ ಯೋಜನೆಯಡಿ ಬಡವರಿಗೆ 150 ಮನೆಗಳ ನಿರ್ಮಾಣ.

.ಕರ್ನಾಟಕ ಪ್ರಾಂತದಲ್ಲಿ 500ಕ್ಕೂ ಮಿಕ್ಕಿ ಮರಗಿಡಗಳನ್ನು ನೆಟ್ಟು ಪ್ರಕೃತಿಯ ಸಂರಕ್ಷಣೆ.

.ಪ್ರತಿ ಕನ್ಯಾಮಠದಿಂದ 5 ಬಡ ಕುಟುಂಬಗಳನ್ನು ಆರಿಸಿ ಅವರ ಬೇಡಿಕೆಗಳಿಗೆ ಸ್ಪಂದನೆ.

.ಕರ್ನಾಟಕದಲ್ಲಿ ಓರ್ವ ಹಿರಿಯ ಅಂಗವಿಕಲ, ಓರ್ವ ಹಿರಿಯ ನಾಗರಿಕರಿಗೆ ನಿವಾಸ ಯೋಜನೆ ಪ್ರಗತಿಯಲ್ಲಿದೆ.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.