ವಿವಿಧ ಸಂಘಟನೆಗಳಿಂದ ಕೋಮು ಸೌಹಾರ್ದ ಭಾಷ್ಯ

Team Udayavani, May 31, 2018, 12:15 PM IST

communal.jpg

ಮಂಗಳೂರು: ಸಣ್ಣ ಸಣ್ಣ ಕಾರಣಗಳಿಗೆ ಗುಂಪುಗಳ ಮಧ್ಯೆ, ಕೋಮುಗಳ ಮಧ್ಯೆ ಮನಸ್ತಾಪ ವಿದ್ದರೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅವುಗಳಾವುವೂ ಮುಖ್ಯವಾಗದು. ಎಲ್ಲರ ಬದುಕೂ ಒಂದೇ ಎಂಬುದೇ ದೊಡ್ಡ ದಾಗಿ ಮಾನವೀಯತೆ ಮೆರೆಯುತ್ತದೆ.

ಮಂಗಳವಾರ ಭಾರೀ ಮಳೆಯಿಂದ ನಗರ ತತ್ತರಿಸಿದಾಗಲೂ ಇಂಥದ್ದೇ ವಾತಾವರಣ ಕಂಡು ಬಂದಿತು. ಜಾತಿ, ಮತ ಭೇದ ನೋಡದೆ ಸಂಘಟನೆಗಳ ಯುವಜನರು ನೆರೆ ಪೀಡಿತರ ಸಹಾಯಕ್ಕೆ ಧಾವಿಸಿದ್ದು ವಿಶೇಷ. 

ಭೀಕರ ಮಳೆಯಿಂದಾಗಿ ಮನೆಗಳಿಗೆ ಅಥವಾ ಊರಿಗೆ ತೆರಳಲಾರದೆ ಬಾಕಿಯಾದವರಿಗೆ ಮಣ್ಣಗುಡ್ಡದಲ್ಲಿರುವ ಸಂಘ ನಿಕೇತನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಉಚಿತ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿತ್ತು. ಬಜರಂಗದಳ, ವಿಹಿಂಪ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೆರವು ನೀಡಿದರು. ಶಾಸಕ ವೇದವ್ಯಾಸ್‌ ಕಾಮತ್‌ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೊರಗಜ್ಜನ ಗುಡಿ ಶುಚಿ ಮಾಡಿದ ಮುಸ್ಲಿಂ ಯುವಕರು
ಪಾಂಡೇಶ್ವರದಲ್ಲಿರುವ ಕೊರಗಜ್ಜನ ಗುಡಿಗೆ ನುಗ್ಗಿದ ನೀರನ್ನು ಹೊರಚೆಲ್ಲಿ ಶುಚಿ ಮಾಡುವ ಮೂಲಕ ಆ ಪ್ರದೇಶದ ಮುಸ್ಲಿಂ ಯುವಕರ ತಂಡವೊಂದು ಕೋಮು ಸೌಹಾರ್ದಕ್ಕೆ ಮಾದರಿಯಾಯಿತು. ಪಾಂಡೇಶ್ವರ ರೈಲ್ವೇಗೇಟ್‌ ಬಳಿ ಇರುವ ಕೊರಗಜ್ಜನ ಗುಡಿಗೆ ಮಳೆ ನೀರು ನುಗ್ಗಿ ಗುಡಿಯ ಸುತ್ತಮುತ್ತಲೂ ನೀರು ನಿಂತಿತ್ತು. ಇದನ್ನು ಗಮನಿಸಿದ ಈ ಯುವಕರು ಗುಡಿಯಲ್ಲಿದ್ದ ನೀರನ್ನೆಲ್ಲ ಹೊರಚೆಲ್ಲಿ ಸ್ವತ್ಛಗೊಳಿಸಿ ಸೌಹಾರ್ದ ಮೆರೆದರು.

ಮಾನವೀಯತೆ ಮೆರೆದ ಪಾಪ್ಯುಲರ್‌ ಫ್ರಂಟ್‌
ಪಾಂಡೇಶ್ವರ ಸುಭಾಶ್‌ನಗರದ ಎರಡನೇ ತಿರುವಿನಲ್ಲಿ ನೆರೆ ಹಾನಿ ಗೊಳಗಾದ ಸುಮಾರು 20 ಮನೆಗಳಿಗೆ ಕುಡಿಯುವ ನೀರು ಒದಗಿಸಿ ಪಾಪ್ಯುಲರ್‌ ಫ್ರಂಟ್‌ ಯುವಕರ ತಂಡ ಮಾನವೀಯತೆ ಮೆರೆದಿದೆ. ಈ ಪ್ರದೇಶ ದಲ್ಲಿ ಹಿಂದೂ, ಮುಸ್ಲಿಂ ಸಹಿತ ವಿವಿಧ ಮತಗಳ ಜನರಿದ್ದಾರೆ. ಮಳೆ ಹಾನಿಯಿಂದ ಕುಡಿಯಲು ನೀರೂ ಇಲ್ಲದೆ ಜನರು ಸಮಸ್ಯೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ಯುವಕರು ಎಲ್ಲರಿಗೂ ಕುಡಿಯುವ ನೀರಿನ ಕ್ಯಾನ್‌ಗಳನ್ನು ಒದಗಿಸಿದರು.

ಉಚಿತ ಸೇವೆಗೆ ಸದಾ ಸಿದ್ಧ
ಮಂಗಳೂರಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ, ನೆರವಿಗೆ ವಿವಿಧ ತಂಡಗಳು ಸಿದ್ಧವಾಗಿದ್ದವು. ಉಚಿತ ಆಶ್ರಯ, ಆಹಾರ, ನೆರೆ ನೀರಿನಲ್ಲಿ ನಡೆದಾಡಲು ಸಾಧ್ಯವಾಗದೇ ಇರುವವರಿಗೆ ದೋಣಿಗಳ ಉಚಿತ ಸೇವೆ… ಹೀಗೆ ಹಲವರು ತಮ್ಮ ವೈಯಕ್ತಿಕ ಮೊಬೈಲ್‌ ನಂಬರ್‌ ಅಥವಾ ಸಂಘಟನೆಗಳ ಸದಸ್ಯರ ನಂಬರ್‌ಗಳನ್ನು ಸಾಮಾಜಿಕ ತಾಣಗಳಾದ ಫೇಸುºಕ್‌, ವಾಟ್ಸಪ್‌ಗ್ಳಲ್ಲಿ ಹರಿಯಬಿಟ್ಟು ನೆರವು ಬೇಕಿದ್ದರೆ ತತ್‌ಕ್ಷಣ ಕರೆ ಮಾಡಿ ಎಂದು ಕೋರುತ್ತಿದ್ದರು. ಇದನ್ನು ಇತರರೂ ಶೇರ್‌ ಮಾಡಿಕೊಂಡು ನೆರವು ಕೋರಲು ಜನರಲ್ಲಿ ವಿನಂತಿಸುತ್ತಿದ್ದುದು ಕಂಡು ಬಂದಿತ್ತು. 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.