ದೇಶದ ಅತ್ಯುತ್ತಮ ಗ್ರಾ.ಪಂ.: ನೆಲ್ಯಾಡಿಗೆ 9ನೇ ಸ್ಥಾನ  


Team Udayavani, Aug 12, 2018, 1:35 PM IST

12-agust-12.jpg

ನೆಲ್ಯಾಡಿ : ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ದೇಶದ ಅತ್ಯುತ್ತಮ ಗ್ರಾ.ಪಂ.ಗಳ ಪಟ್ಟಿಯಲ್ಲಿ ನೆಲ್ಯಾಡಿ ಗ್ರಾ.ಪಂ.ಗೆ 9ನೇ ಸ್ಥಾನ ದೊರೆತಿದೆ. ಇದರ ಪರಿಶೀಲನೆಗೆ ಆ. 10ರಂದು ಹೈದರಾಬಾದ್‌ನ ಎನ್‌ಐಆರ್‌ಡಿ ತಂಡದ ಪ್ರತಿನಿಧಿ ಗ್ರಾ.ಪಂ.ಗೆ ಭೇಟಿ ನೀಡಿ ಜನಪ್ರತಿನಿಧಿ, ಇಲಾಖಾ ಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳ ಮೂಲಕ ದೇಶದ 41,617 ಗ್ರಾಮ ಪಂಚಾಯಿತ್‌ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಗ್ರಾ.ಪಂ.ನ ಪ್ರಾಥಮಿಕ ಅಂಶ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಆರೋಗ್ಯ, ಮಹಿಳಾ ಸಬಲೀಕರಣ, ಆರ್ಥಿಕ ಒಳಗೊಳ್ಳುವಿಕೆ ಆಧರಿಸಿ ಗ್ರಾ.ಪಂ.ಗಳಿಗೆ ಅಂಕ ನೀಡಲಾಗಿದ್ದು, ಇದರಲ್ಲಿ 83 ಅಂಕ ಪಡೆದುಕೊಂಡ ನೆಲ್ಯಾಡಿ ಗ್ರಾ.ಪಂ. ದೇಶದಲ್ಲಿ 9ನೇ, ರಾಜ್ಯದಲ್ಲಿ 5ನೇ ಹಾಗೂ ದ.ಕ.ಜಿಲ್ಲೆಯಲ್ಲಿ 1ನೇ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇದರ ಪರಿಶೀಲನೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರತಿನಿಧಿಯಾಗಿ ಹೈದರಾಬಾದ್‌ನ ಎನ್‌ಐಆರ್‌ಡಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಾಯಕ ಪ್ರೊಫೆಸರ್‌ ಡಾ| ರಾಜ್‌ಕುಮಾರ್‌ ಪಮ್ಮಿ ಅವರು ಜಿ.ಪಂ. ಹಾಗೂ ತಾ.ಪಂ.ನ ಪ್ರತಿನಿ ಧಿಗಳ ಜತೆಗೆ ನೆಲ್ಯಾಡಿ ಗ್ರಾ.ಪಂ.ಗೆ ಭೇಟಿ ನೀಡಿ ಸಂವಾದ ನಡೆಸಿದರು.

ಡಾ| ರಾಜ್‌ಕುಮಾರ್‌ ಪಮ್ಮಿ ಮಾತನಾಡಿ, ದೇಶದಲ್ಲಿ 2.50 ಲಕ್ಷ ಗ್ರಾ.ಪಂಗಳಿದ್ದು, 50 ಸಾವಿರ ಗ್ರಾ.ಪಂ.ಗಳಲ್ಲಿ ಮಿಷನ್‌ ಅಂತ್ಯೋದಯ ಯೋಜನೆ ಜಾರಿಯಲ್ಲಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ಮಿಷನ್‌ ಅಂತ್ಯೋದಯ ಯೋಜನೆ ಜಾರಿಯಲ್ಲಿದೆ. ಈ ಯೋಜನೆಗೆ ಶೇ. 80ಕ್ಕಿಂತ ಹೆಚ್ಚು ಸಾಧನೆ ಮಾಡಿದ ಗ್ರಾ.ಪಂ. ಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಮಾಹಿತಿ ಕ್ರೋಢೀಕರಣ
ಸಂವಾದದಲ್ಲಿ ಅವರು ಕೃಷಿ, ಜಿಪಿಡಿಪಿ, ಉದ್ಯೋಗ ಖಾತರಿ, ಗ್ರಾ.ಪಂ.ಸದಸ್ಯರಿಗೆ ನೀಡಿದ ತರಬೇತಿ, ಉದ್ಯೋಗ ಖಾತರಿ ಯೋಜನೆಯ ರೋಜ್‌ಗಾರ್‌ ದಿವಸ್‌, ಸ್ತ್ರೀಶಕ್ತಿ ಯೋಜನೆ, ಆರೋಗ್ಯ ಇಲಾಖೆ, ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಆಹಾರ, ಶಿಕ್ಷಣ ಇಲಾಖೆ, ಗ್ರಾಮದ ಘನ ದ್ರವ ತ್ಯಾಜ್ಯ ವಿಲೇವಾರಿ, ಕೃಷಿ ಚಟುವಟಿಕೆ, ಸ್ವಂತ ಸಂಪನ್ಮೂಲ, ಅನುದಾನ, ದಾನಿಗಳ ಸಹಕಾರ, ಇಂಟರ್‌ನೆಟ್‌ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ದ.ಕ. ಜಿ.ಪಂ. ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಆದಿತ್ಯ ಆಯ್ಯರ್‌, ತಾಲೂಕು ಎಂಐಎಸ್‌ ಸಂಯೋಜಕ ನಿಶ್ಚಿತ್‌ಕುಮಾರ್‌, ಬಜತ್ತೂರು ಪಿಡಿಒ ಪ್ರವೀಣ್‌ಕುಮಾರ್‌ ಜತೆಗಿದ್ದರು. 

ನೆಲ್ಯಾಡಿ ಸಂತ ಜಾರ್ಜ್‌ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ಅವರು ಕೇಂದ್ರ ತಂಡಕ್ಕೆ ಸಮನ್ವಯಕಾರರಾಗಿದ್ದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆ ಉಷಾ ಅಂಚನ್‌, ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಸದಸ್ಯರಾದ ಗಂಗಾಧರ ಶೆಟ್ಟಿ ಹೊಸಮನೆ, ಅಬ್ದುಲ್‌ ಹಮೀದ್‌, ಶಬ್ಬೀರ್‌ ಸಾಹೇಬ್‌, ಮೋಹಿನಿ, ಉಷಾ ಜೋಯಿ ಒ.ಕೆ., ಲೈಲಾ ಥಾಮಸ್‌, ಅಬ್ರಹಾಂ ಕೆ.ಪಿ., ಪ್ರೋರಿನಾ ಡಿ’ಸೋಜಾ, ಉಮಾವತಿ ದರ್ಖಾಸು, ತೀರ್ಥೇಶ್ವರ ಉರ್ಮಾನು, ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಪ್ರಾಂಶುಪಾಲ ಡಾ| ಯತೀಶ್‌ ಕುಮಾರ್‌, ನೆಲ್ಯಾಡಿ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕೃಷ್ಣಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಉಮಾವತಿ, ನೆಲ್ಯಾಡಿ ಸಂತಜಾರ್ಜ್‌ ಪ.ಪೂ. ಕಾಲೇಜಿನ ಉಪನ್ಯಾಸಕ, ನೆಲ್ಯಾಡಿ ಜೇಸಿಐ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ, ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಪದ್ಮನಾಭ ಪಿ., ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ಎಂ., ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸು ಧೀರ್‌ ಕುಮಾರ್‌, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಿಡಿಒ ದೇವರಾಜ್‌ ಸ್ವಾಗತಿಸಿದರು. ಸಿಬಂದಿ ಶಿವಪ್ರಸಾದ್‌ ವಂದಿಸಿದರು. ಸಿಬಂದಿಗಳಾದ ಸೋಮಶೇಖರ, ಗಿರೀಶ್‌, ಲಲಿತಾ, ಭವ್ಯಾ, ಅಬ್ದುಲ್‌ ರಹಿಮಾನ್‌ ಅವರು ಸಹಕರಿಸಿದರು. ಸಭೆ ಬಳಿಕ ತಂಡವು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿತು.

ವರದಿ ಸಲ್ಲಿಸುತ್ತೇವೆ
ಕೇಂದ್ರಕ್ಕೆ ವರದಿ ಸಲ್ಲಿಕೆ ನೆಲ್ಯಾಡಿ ಗ್ರಾ.ಪಂ. ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಹಾಗೂ ಪಿಡಿಒ ದೇವರಾಜ್‌ ಅವರನ್ನು ವಿಶೇಷವಾಗಿ ಅಭಿನಂದಿಸಿದರು. ಇಲ್ಲಿನ ಅಭಿವೃದ್ಧಿ ಕೆಲಸಗಳ ಕುರಿತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ಎನ್‌ಐಆರ್‌ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.