ಕರಾವಳಿ ಭಾಗದ ಅಪರಾಧ ಸುದ್ದಿಗಳು


Team Udayavani, May 25, 2019, 6:02 AM IST

Crime-545

ಅಕ್ರಮ ಚಿನ್ನ ಸಾಗಾಟ: ಬಂಧನ
ಮಂಗಳೂರು: ದುಬಾಯಿನಿಂದ ಮಂಗಳೂರಿಗೆ ಬಂದ ವಿಮಾನ ಪ್ರಯಾಣಿಕನೋರ್ವ ಅಕ್ರಮವಾಗಿ ಸಾಗಾಟ ಮಾಡ‌ಲೆತ್ನಿಸಿದ 2,96,823 ರೂ. ಮೌಲ್ಯದ 91.050 ಗ್ರಾಂ ತೂಕದ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಗುರುವಾರ ದುಬಾಯಿನಿಂದ ಮಂಗಳೂರಿಗೆ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿ ಈ ಚಿನ್ನವನ್ನು ಸಾಗಿಸಿದ್ದನು. 24 ಕ್ಯಾರೆಟ್‌ ಪರಿಶುದ್ಧತೆಯ ಚಿನ್ನದ ಗಟ್ಟಿಗಳನ್ನು ಪೇಸ್ಟ್‌ನಲ್ಲಿ ಅಡಗಿಸಿಟ್ಟು ಅದನ್ನು ಲಕ್ಸ್‌ ಬ್ರಾಂಡ್‌ನ‌ ಸಾಬೂನಿನ 4 ಲಕೋಟೆಗಳಲ್ಲಿರಿಸಿ ಪ್ಯಾಕ್‌ ಮಾಡಿದ್ದು, ಮೇಲ್ನೋಟಕ್ಕೆ ಸೋಪ್‌ನಂತೆ ಕಾಣುತ್ತಿತ್ತು.
ಕಸ್ಟಮ್ಸ್‌ ಅಧಿಕಾರಿಗಳು ಸಂಶಯದ ಮೇಲೆ ಪ್ರಯಾಣಿಕರ ಲಗ್ಗೇಜ್‌ ತಪಾಸಣೆ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆ ಆರೋಪ: ವ್ಯಕ್ತಿಗೆ ತರಾಟೆ
ಕಬಕ: ಕಬಕ ಪೇಟೆಯಲ್ಲಿ 6 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದ ಪೆನ್ಸಿಲ್‌ಗೆ ಬಣ್ಣ ಬಳಿಯುವ ಘಟಕ ವ್ಯವಹಾರ ಸ್ಥಗಿತಗೊಳಿಸಿ ಹಣ ವಂಚಿಸುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಘಟಕಕ್ಕೆ ಮುತ್ತಿಗೆ ಹಾಕಿ ಉದ್ಯಮಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡೆದಿದೆ.

ಕೇರಳ ಮೂಲದ ವ್ಯಕ್ತಿ ಸುಮಾರು 6 ತಿಂಗಳ ಹಿಂದೆ ಕಬಕದಲ್ಲಿ ಈ ಉದ್ಯಮವನ್ನು ಆರಂಭಿಸಿದ್ದಾರೆ.ಇದರಲ್ಲಿ ದುಡಿಯಲು ಆಸಕ್ತಿಯುಳ್ಳವವರು 80 ಸಾ.ರೂ.ಬೆಲೆಯ ಯಂತ್ರವನ್ನು ಪಡೆಯಬೇಕು. ಆದರೆ ಈ ಯಂತ್ರವು ಆನ್‌ ಲೈನ್‌ನಲ್ಲಿ 15 ಸಾ.ರೂ.ಗಳಿಗೆ ಲಭ್ಯ ವಿದೆ ಎಂದು ಕಾರ್ಮಿ ಕರು ಆರೋಪಿಸುತ್ತಿದ್ದಾರೆ. ಯಂತ್ರ ಪಡೆದ ಬಳಿ ಕ ಕಚ್ಚಾ ಪೆನ್ಸಿಲ್‌ಗ‌ಳನ್ನು ಘಟಕದಿಂದ ಪಡೆದು ಮನೆಯಲ್ಲಿ ಯಂತ್ರದ ಮೂಲಕ ಬಣ್ಣ ಬಳಿದು ತರಬೇಕು ಮತ್ತು ಪ್ರತಿ ಪೆನ್ಸಿಲಿಗೆ 75 ಪೈಸೆಯಂತೆ ತಿಂಗಳಿಗೆ 40-50 ಸಾ. ರೂ. ದುಡಿಯುವ ಅವಕಾಶ ಇದೆ ಎಂದು ಜನರನ್ನು ನಂಬಿಸಲಾಗಿತ್ತು.
ಈ ವ್ಯವಹಾರಕ್ಕೆ ದಲ್ಲಾಳಿಗಳನ್ನು ಸಂಸ್ಥೆ ನೇಮಿಸಿಕೊಂಡಿದ್ದು, ಸುಮಾರು 135 ಜನರು ಈ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಆರಂಭದಲ್ಲಿ ಸ್ವಲ್ಪ ಕೆಲಸ ಕೊಟ್ಟಿದ್ದ ಸಂಸ್ಥೆ, ಬಳಿಕ ಸಂಬಳವನ್ನೂ ನೀಡದೆ ಸುಮಾರು ಒಂದು ತಿಂಗಳಿನಿಂದ ಕಚೇರಿಯನ್ನು ಮುಚ್ಚಿದೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಮಿಕರು, ಶುಕ್ರವಾರ ಸಂಸ್ಥೆಯ ಮಾಲಕ ಮನುಚಂದ್ರನ್‌ ಕಬಕಕ್ಕೆ ಬಂದಿರುವುದನ್ನು ಅರಿತು ಅವರು ವಾಸ ವಿದ್ದ ರೂಮಿಗೆ ತೆರಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅನಂತರ ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದರು.

ಆರೋಪಿಯು ವಕೀಲರ ಜತೆ ಠಾಣೆಗೆ ಆಗಮಿಸಿ ಕೆಲವು ತಿಂಗಳಲ್ಲಿ ಕಾರ್ಮಿಕರಿಗೆ ಹಣ ಹಿಂದಿರುಗಿಸುವುದಾಗಿ ಕರಾರು ಪತ್ರ ನೀಡಿದ್ದು, ಕಾರ್ಮಿಕರು ಇದಕ್ಕೆ ಒಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಡಬ: ಒಲ್ಲದ ಗಂಡನಿಗೆ ಇರಿದ ನವವಿವಾಹಿತೆ ಬಂಧನ
ಕಡಬ: ನವ ವಿವಾಹಿತ ಯುವತಿಯೊಬ್ಬಳು ಪತಿಗೆ ಚೂರಿಯಿಂದ ಇರಿದು ಕೊಲೆಗೆತ್ನಿಸಿದ ಘಟನೆ ಗುರುವಾರ ರಾತ್ರಿ ಕಡಬ ತಾಲೂಕಿನ ಕೊçಲ ಗ್ರಾಮದ ಏಣಿತಡ್ಕದಲ್ಲಿ ನಡೆದಿದೆ. ಪೋಲೀಸರ ಅತಿಥಿಯಾದ ಕೊಲೆಯತ್ನ ಆರೋ ಪ ದಲ್ಲಿ ಏಣಿತಡ್ಕ ಅತ್ರೇಲು ನಿವಾಸಿ ಗೋಪಾಲಕೃಷ್ಣ ನಾಯ್ಕ ಅವರ ಪತ್ನಿ ಸುಪ್ರಿಯಾ(30)ಳನ್ನು ಬಂಧಿಸಲಾಗಿದೆ.

ಮೂಲತಃ ಬಂಟ್ವಾಳ ತಾಲೂಕಿನ ಅತ್ರೇಲು ನಿವಾಸಿ ಯಾಗಿರುವ ಈಕೆಯನ್ನು 25 ದಿನಗಳ ಹಿಂದೆಯಷ್ಟೆ ಗೋಪಾಲಕೃಷ್ಣ ನಾಯ್ಕ ಮದುವೆಯಾಗಿದ್ದರು. ಈಕೆಗೆ ಈ ಮದುವೆ ಇಷ್ಟವಿರಲಿಲ್ಲ ಹಾಗೂ ಗಂಡನನ್ನು ಹತ್ತಿರಕ್ಕೆ ಸೇರಿ ಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ಬೆಳ್ತಂಗಡಿಯಲ್ಲಿ ಶಿಕ್ಷಕಿಯಾಗಿದ್ದ ಈಕೆ, ಗುರುವಾರ ರಾತ್ರಿ ಗಂಡ ಕೋಣೆಗೆ ಬಂದಾಗ ಬ್ಯಾಗಿ ನಲ್ಲಿ ಅವಿತಿರಿಸಿದ್ದ ಚೂರಿಯಿಂದ ಆತನಿಗೆ ಎರಡು ಬಾರಿ ಇರಿದಿದ್ದಾಳೆ ಎಂದು ಆರೋಪಿಸಲಾಗಿದೆ. ಕುತ್ತಿಗೆಗೆ ಗಂಭೀರ ಗಾಯವಾಗಿದ್ದ ಆತ ನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗೆ ಗಂಡ ಯಾಕೆ ಇಷ್ಟವಿರಲಿಲ್ಲ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕಾರ್ಕಳ: ಕಾವಲುಗಾರ ಕುಸಿದು ಬಿದ್ದು ಸಾವು
ಕಾರ್ಕಳ: ಕಾರ್ಕಳ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಶಿಕ್ಷಣ ಇಲಾಖೆಯ ಕಟ್ಟಡದ ಕಾವಲುಗಾರ, ಬೆಳಗಾವಿ ರಾಮದುರ್ಗ ನಿವಾಸಿ ಬಸಪ್ಪ ಭೀಮಪ್ಪ ಗಟ್ಟಿ (43) ಅವರು ಮೇ 24ರಂದು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸುಮಾರು 6 ತಿಂಗಳಿನಿಂದ ಕಾವಲುಗಾರನಾಗಿದ್ದ ಈತ ವಿಪರೀತ ಮದ್ಯವ್ಯಸನಿಯಾಗಿದ್ದು, ಇದೇ ಕಾರಣದಿಂದ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಕೆರೆಕಾಡು ಮನೆ ಮುಕೇಶ್‌ ದೇವಾಡಿಗ ಅವರು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರು ಢಿಕ್ಕಿ: ಗಾಯ
ಉಡುಪಿ: ಕಾರು ಢಿಕ್ಕಿ ಹೊಡದು ದ್ವಿತಿ ಕೃಷ್ಣಾ ಮಿಶ್ರಾ ಎಂಬವರು ಗಾಯಗೊಂಡ ಘಟನೆ ಮೇ 22ರಂದು ಪೆರಂಪಳ್ಳಿ -ಮಣಿಪಾಲ ರಸ್ತೆಯಲ್ಲಿ ಸಂಭವಿಸಿದೆ.

ಅವರು ಸಮೀರ್‌ ಅವರ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಕಾರು ಢಿಕ್ಕಿ ಹೊಡೆಯಿತು. ತಲೆಗೆ ತೀವ್ರ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿ ಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಢಿಕ್ಕಿ: ಪಾದಚಾರಿಗೆ ಗಾಯ
ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದ್ವಾರದ ಬಳಿ ಮೇ 23ರ ಮುಂಜಾನೆ 2 ಗಂಟೆ ವೇಳೆಗೆ ಉಡುಪಿಯಲ್ಲಿ ಹೊಟೇಲು ಕೆಲಸಕ್ಕೆಂದು ಹೊರಟು ನಿಂತಿದ್ದ ಎರ್ಮಾಳು ಬಡಾ ನಿವಾಸಿ ರಾಜು (55) ಅವರಿಗೆ ಉಡುಪಿಯತ್ತ ಹೋಗುತ್ತಿದ್ದ ಕಾರು ಢಿಕ್ಕಿಯಾಗಿ ಗಾಯಗಳಾಗಿವೆ. ಅವ ರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಇಂದು ಪ್ರಕರಣವು ದಾಖಲಾಗಿದೆ.

ಅಂಪಾರು: ಸೇತುವೆಯಿಂದ ಬಿದ್ದ ಕಾರು, ಐವರು ಪಾರು
ಸಿದ್ದಾಪುರ: ಸಿದ್ದಾಪುರ ಕಡೆಯಿಂದ ಕುಂದಾಪುರದ ಮುಳ್ಳಿಕಟ್ಟೆ ಕಡೆಗೆ ಹೋಗುತ್ತಿದ್ದಾಗ ಅಂಪಾರು ಗ್ರಾಮದ ಬಾಳ್ಕಟ್ಟು ತಿರುವಿನ ಬಳಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿದ್ದು, ಅದರಲ್ಲಿದ್ದ ಐವರು ಅಪಾಯದಿಂದ ಪಾರಾದ ಘಟನೆ ಶುಕ್ರ ವಾರ ಸಂಜೆ ಸಂಭವಿಸಿದೆ.

ರಾಘ ಶೆಟ್ಟಿ ಮುಳ್ಳಿಕಟ್ಟೆ ಅವರು ತಮ್ಮ ಕುಟುಂಬ ಸಮೇತರಾಗಿ ಕಮಲಶಿಲೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೋಗುತ್ತಿದ್ದಾಗ ಬಾಳ್ಕಟ್ಟು ತಿರುವಿನಲ್ಲಿ ಕಾರು ಸೇತುವೆಗೆ ಗುದ್ದಿ, ಸುಮಾರು 20ಕ್ಕೂ ಹೆಚ್ಚು ಆಳಕ್ಕೆ ಬಿದ್ದಿದೆ.ಕಾರಿನಲ್ಲಿ ನವ ದಂಪತಿ ಹಾಗೂ ಸಣ್ಣ ಮಗು ಸೇರಿ ಐವರಿದ್ದರು.ಕಾರು ಸಂಪೂರ್ಣ ಜಖಂಗೊಂಡಿದ್ದು,ಸೇತುವೆಯ ಒಂದು ಭಾಗಕ್ಕೂ ಹಾನಿ ಯಾಗಿದೆ.

ಅಪಾಯಕಾರಿ ತಿರುವು
ಈ ತಿರುವು ಅಪಾಯದಿಂದ ಕೂಡಿದ್ದು, ಅಲ್ಲಿಯೇ ಸೇತುವೆಯೂ ಇರುವುದರಿಂದ ಅಪಘಾತದ ಅಪಾಯ ಹೆಚ್ಚಾ ಗಿದೆ.ಹೆದ್ದಾರಿ ನೇರವಾಗಿದ್ದು, ಸೇತುವೆ ಬಳಿ ಏಕಾಏಕಿಯು ಆಕಾರದ ತಿರುವು ಸಿಗುತ್ತಿದೆ. ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಎಚ್ಚರಿಕೆಯ ಫ‌ಲಕವೂ ಇಲ್ಲದಿರುವುದ ರಿಂದ ಹೊಸ ಬರಿಗೆ ತಿರುವಿನ ಬಗ್ಗೆ ಗೊತ್ತಾಗುವುದೇ ಇಲ್ಲ.

ಶಿರಾಡಿ: ಪಿಕಪ್‌ ಪಲ್ಟಿ; ಇಬ್ಬರಿಗೆ ಗಾಯ
ನೆಲ್ಯಾಡಿ: ಶಿರಾಡಿಯಲ್ಲಿ ಶುಕ್ರ ವಾರ ಸಂಜೆ ಪಿಕಪ್‌ ವಾಹನ ಪಲ್ಟಿಯಾಗಿ ಕೊಂಬಾರು ಮಣಿಬಾಂಡ ನಿವಾಸಿ, ಚಾಲಕ ಬಾಲಕೃಷ್ಣ (60) ಹಾಗೂ ಅವರ ಸಹೋದರಿ ದೇವಕಿ (46 ) ಗಾಯಗೊಂಡಿದ್ದಾರೆ.ಇವರು ಮಣಿಬಾಂಡದಿಂದ ಕೊಕ್ಕಡಕ್ಕೆ ತೆರಳುತ್ತಿದ್ದರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಳು ಸಾಗಾಟ: ಲಾರಿ ವಶಕ್ಕೆ
ಮಲ್ಪೆ: ಪಡುತೋನ್ಸೆ ಗ್ರಾಮ ಕಂಬಳತೋಟದ ಬಳಿ ಸ್ವರ್ಣಾ ನದಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದಲ್ಲಿಗೆ ಗುರುವಾರ ದಾಳಿ ನಡೆಸಿದ ಮಲ್ಪೆ ಪೊಲೀಸರು, ಲಾರಿ ಮತ್ತು ಚಾಲಕ ಹೂಡೆಯ ಹಿದಾಯತುಲ್ಲಾನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ: ಯುವಕ ಗಂಭೀರ
ಉಡುಪಿ: ಇಲ್ಲಿನ ಕೆಎಂ ಮಾರ್ಗದಲ್ಲಿ ಶುಕ್ರವಾರ ಗಂಭೀರ ಸ್ಥಿತಿ ಯಲ್ಲಿದ್ದ ಸುಮಾರು 30 ವರ್ಷದ ಅಪರಿಚಿತನನ್ನು ನಿತ್ಯಾನಂದ ಒಳ ಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಮಾತನಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ವಿಳಾಸ ತಿಳಿದು ಬಂದಿಲ್ಲ. ಜೇಬಿನಲ್ಲಿ ಮೇ 24 ರಂದು ಕೊಕ್ಕರ್ಣೆಯಿಂದ ಬ್ರಹ್ಮಾವರಕ್ಕೆ ಬಸ್ಸಿನಲ್ಲಿ ಬೆಳಗ್ಗಿನ ಸಮಯ ಪ್ರಯಾಣ ಮಾಡಿದ ಟಿಕೆಟ್‌ ಇತ್ತು. ವಾರಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಕಡಬ: ಮಹಿಳೆ ಆತ್ಮಹತ್ಯೆ
ಕಡಬ: ರಾಮಕುಂಜ ಗ್ರಾಮದ ಅರ್ಬಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಬಿ ಸುರೇಶ ಅವರ ಪತ್ನಿ ನೇತ್ರಾವತಿ (32) ಆತ್ಮ ಹತ್ಯೆ ಮಾಡಿ ಕೊಂಡವರು. ಹತ್ತು ತಿಂಗಳ ಹಿಂದೆ ಇವರ ಮದುವೆಯಾಗಿತ್ತು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಶೋಕನಗರ: ತಾಯಿ, ಮಕ್ಕಳು ನಾಪತ್ತೆ
ಮಂಗಳೂರು: ಉರ್ವಸ್ಟೋರ್‌ ಅಶೋಕನಗರದ ಸೈಂಟ್‌ ಡೊಮಿನಿಕ್‌ ಚರ್ಚ್‌ ಬಳಿ ಆರಾಧನಾ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಕೊಠಡಿಯಲ್ಲಿ ವಾಸಿಸುತ್ತಿದ್ದ ಫಕೀರಪ್ಪ ಅವರ ಪತ್ನಿ ರೇಣುಕಾ (24) ಮತ್ತು ಮಕ್ಕಳಾದ ಮೇಘನಾ (5) ಹಾಗೂ ಮನೋಜ್‌ (4) ಮೇ 21ರಿಂದ ನಾಪತ್ತೆಯಾಗಿದ್ದಾರೆ.

ಇವರು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವ ರು.ಅಂದು ಸಂಜೆ 5 ಗಂಟೆಗೆ ಉರ್ವ ಮಾರಿಯಮ್ಮ ದೇವಸ್ಥಾನಕ್ಕೆಂದು ಹೋದವರು ವಾಪಸ್‌ ಬಂದಿಲ್ಲ. ವಿಧೆಡೆ ಹುಡುಕಾಡಿದರೂ ಪತ್ತೆಯಾ ಗದ ಕಾರಣ ಮೇ 24ರಂದು ಫಕೀರಪ್ಪ ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೇಣುಕಾ 5 ಅಡಿ 2 ಇಂಚು ಎತ್ತರ, ಕಪ್ಪು ಗುಂಗುರು ಕೂದಲು,ಗೋಧಿ ಮೈಬಣ್ಣ,ಸಾಧಾರಣ ಮೈಕಟ್ಟು ಹೊಂದಿದ್ದು, ಕೆಂಪು ಸೀರೆ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ.

ಮೇಘನಾ 2 ಅಡಿ ಎತ್ತರ,ಗುಂಗುರು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು,ಪ್ಯಾಂಟ್‌ ಮತ್ತು ಶರ್ಟ್‌ ಧರಿಸಿದ್ದಾಳೆ. ಮನೋಜ್‌ 1 ಅಡಿ 6 ಇಂಚು ಎತ್ತರ, ಗುಂಗುರು ಕೂದಲು, ಗೋಧಿ ಮೈಬಣ್ಣ, ಉರುಟು ಮುಖ, ಸಾಧಾರಣ ಶರೀರ ಹೊಂದಿದ್ದು, ಪ್ಯಾಂಟ್‌ ಶರ್ಟ್‌ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತೋಡಿಗೆ ಬಿದ್ದ ಕಾರು: ಪ್ರಯಾಣಿಕರು ಪಾರು
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮತ್ತೂಂದು ಕಾರಿಗೆ ಢಿಕ್ಕಿಯಾಗಿ ತೋಡಿಗೆ ಬಿದ್ದ ಘಟನೆ ನಗರದ ಕಾರ್ಯಪ್ಪ ಕಾಲೇಜು ರಸ್ತೆಯಲ್ಲಿ ಸಂಭವಿಸಿದೆ. ಕಾಲೂರು ವಾಸು ಅವರ ಆಲ್ಟೋ ಕಾರು ಎದುರಿಂದ ಬರುತ್ತಿದ್ದ ಮಾರುತಿ-800 ಕಾರಿಗೆ ಢಿಕ್ಕಿಯಾಗಿ ತೋಡಿಗೆ ಬಿದ್ದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಮೂವರೂ ಪಾರಾಗಿದ್ದಾರೆ. ಮಾರುತಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.