ಡ್ರೋನ್‌ ತಡೆ ತಂತ್ರಜ್ಞಾನ ಅನ್ವೇಷಣೆಗೆ ಕರಾವಳಿಗನ ಸಾರಥ್ಯ

Team Udayavani, Jul 29, 2021, 9:00 AM IST

Untitled-1

ಮಂಗಳೂರು: ಡ್ರೋನ್‌ ಪ್ರತಿ ರೋಧ ತಂತ್ರಜ್ಞಾನವನ್ನು  ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಭದ್ರತ ಸಂಸ್ಥೆ (ಎನ್‌ಎಸ್‌ಜಿ)ಗೆ ನೆರವಾ ಗುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಸೆಕ್ಯುರಿಟಿ ಆ್ಯಂಡ್‌ ಸೈಂಟಿಫಿಕ್‌ ಟೆಕ್ನಿಕಲ್‌ ರಿಸರ್ಚ್‌ ಅಸೋಸಿಯೇಶನ್‌ (ಶಸ್ತ್ರ) ಸಂಸ್ಥೆಯನ್ನು ಇತ್ತೀಚೆಗೆ ರೂಪಿಸ ಲಾಗಿದೆ. ಪುತ್ತೂರು ಮೂಲದ ಕೊನಾರ್ಕ್‌ ರೈ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವುದು ಕರಾವಳಿಗೆ ಹೆಮ್ಮೆ.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಯಾಗಿದ್ದಾಗ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್‌ಆರ್‌ಯು) ಆರಂಭಿಸಿದ್ದರು. ಭದ್ರತ ಸಿಬಂದಿಗೆ ವಿಶೇಷ ತರಬೇತಿ ನೀಡುವುದು ಇದರ ಉದ್ದೇಶ. ಅವರು ಪ್ರಧಾನಿಯಾದ ಬಳಿಕ ಆರ್‌ಆರ್‌ಯು ಮಸೂದೆ ಜಾರಿಗೊಳಿಸಿ ವಿ.ವಿ.ಯನ್ನು ಕೇಂದ್ರ ಸರಕಾರದಡಿ ತಂದರು. ಈ ವಿ.ವಿ.ಯ ಅಂಗಸಂಸ್ಥೆಯಾಗಿ “ಶಸ್ತ್ರ’  ಸ್ಥಾಪಿಸಲಾಗಿದೆ.

ಕೊನಾರ್ಕ್‌ ರೈ ಅವರು ಕ್ಯಾಂಪ್ಕೋದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೆದಂಬಾಡಿ ಪ್ರಮೋದ್‌ ಕುಮಾರ್‌ ರೈ -ಶೋಭಾ ದಂಪತಿಯ ಪುತ್ರ.

“ಶಸ್ತ್ರ’ದ ಉದ್ದೇಶವೇನು? :

ಎಲ್ಲ ಸ್ತರದ ಭದ್ರತ ಪಡೆಗಳ ಅಗತ್ಯ ಸಾಧನಗಳು, ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಅನ್ವೇಷಣೆ ಮಾಡುವವರಿಗೆ ನೆರವಾಗುವುದು “ಶಸ್ತ್ರ’ದ ಮುಖ್ಯ ಉದ್ದೇಶ.

ಭದ್ರತ ಪಡೆಗಳ ಅಗತ್ಯಗಳನ್ನು ಅರಿತುಕೊಂಡು “ನ್ಯಾಶನಲ್‌ ಇನೋವೇಶನ್‌ ಚಾಲೆಂಜ್‌’ ಆರಂಭಿಸಲಾಗುತ್ತದೆ. ಆತ್ಮನಿರ್ಭರ ಭಾರತದಡಿ ಭಾರತೀಯ ಕಂಪೆನಿ, ಸ್ಟಾರ್ಟ್‌ ಅಪ್‌ಗ್ಳು ಸಿದ್ಧಪಡಿಸುವ ಸುಧಾರಿತ ತಂತ್ರಜ್ಞಾನ ಗಳನ್ನು ಭದ್ರತ ಪಡೆ ಮತ್ತು “ಶಸ್ತ್ರ’ ತಂಡ ಪರಿಶೀಲಿಸುತ್ತದೆ. ಒಪ್ಪಿಗೆಯಾದರೆ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು “ಶಸ್ತ್ರ’ ನೀಡುತ್ತದೆ.

ಕೊನಾರ್ಕ್‌ ರೈ :

ಕೊನಾರ್ಕ್‌ ರೈ ಅವರು ಬೆಂಗಳೂರು ಮತ್ತು ಅಳಿಕೆಯಲ್ಲಿ ಶಿಕ್ಷಣ ಪಡೆದು ಗುಜರಾತ್‌ನ ನ್ಯಾಶನಲ್‌ ಲಾ ಸ್ಕೂಲ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಜಿನೇವಾದಲ್ಲಿ ದೇಶ-ವಿದೇಶಗಳ ಸಂಬಂಧ ಸುಧಾರಣೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗುಜರಾತ್‌ಗೆ ಮರಳಿ ರಾಷ್ಟ್ರೀಯ ರಕ್ಷಾ ವಿ.ವಿ.ಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಆಗಿದ್ದರು. ಕಳೆದ ಸೆಪ್ಟಂಬರ್‌ನಿಂದ “ಶಸ್ತ್ರ’ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಭದ್ರತ ಪಡೆಗಳಿಗೆ ಅಗತ್ಯವಿರುವ ಹೊಸ ತಾಂತ್ರಿಕ ಸಾಧನಗಳನ್ನು “ಶಸ್ತ್ರ’ದ ಸಹಕಾರದೊಂದಿಗೆ ಸಿದ್ಧಪಡಿಸ ಲಾಗುತ್ತದೆ. ಯೋಧರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ಖುದ್ದಾಗಿ ತೆರಳಿ, ಅಧ್ಯಯನ ಮಾಡಿ ಹೊಸ ಅನ್ವೇಷಕರಿಗೆ ಅವಕಾಶ ನೀಡಲಾಗುತ್ತದೆ. ಸದ್ಯ ಆ್ಯಂಟಿ ಡ್ರೋನ್‌ ಟೆಕ್ನಾಲಜಿ ಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.– ಕೊನಾರ್ಕ್‌ ರೈ, ಎಂ.ಡಿ., “ಶಸ್ತ್ರ’

ದಿನೇಶ್‌ ಇರಾ

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.