ಕುವೈತ್‌ನಲ್ಲಿ ಅಪಘಾತ: ಮಂಗಳೂರು ಮೂಲದ ಯುವಕ ಸಾವು
Team Udayavani, Sep 25, 2022, 7:23 AM IST
ಮಂಗಳೂರು: ಕುವೈತ್‌ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಬಜಾಲ್ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ (33) ಮೃತಪಟ್ಟಿದ್ದಾರೆ.
ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್ ಆಗಿದ್ದ ಅವರು ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬೈಕ್‌ನಲ್ಲಿ ಮರಳುವ ವೇಳೆ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ತಾಯಿಯನ್ನು ಅಗಲಿದ್ದಾರೆ.
44 ಲಕ್ಷ ರೂ. ಮೌಲ್ಯದ ಚಿನ್ನ ಸಹಿತ ಓರ್ವ ವಶಕ್ಕೆ
ಕಾಸರಗೋಡು: ದುಬಾೖಯಿಂದ ಗೋ ಫಾಸ್ಟ್ ವಿಮಾನದಲ್ಲಿ ಕಣ್ಣೂರಿಗೆ ಆಗಮಿಸಿದ ಮೊಗ್ರಾಲ್‌ಪುತ್ತೂರಿನ ಮೊದೀನ್ ಫಾರೀಸ್‌ನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ದಳ 44 ಲಕ್ಷ ರೂ. ಮೌಲ್ಯದ 864 ಗ್ರಾಂ ಚಿನ್ನ ವಶಪಡಿಸಿಕೊಂಡಿದೆ.