ಮಳಲಿ ದರ್ಗಾದಲ್ಲಿ ದೇಗುಲ ಕುರುಹು : ಅಷ್ಟಮಂಗಲ ಪ್ರಶ್ನೆಗೆ ವಿಎಚ್‌ಪಿ ನಿರ್ಧಾರ
Team Udayavani, May 16, 2022, 11:49 PM IST
ಮಂಗಳೂರು : ನಗರ ಹೊರವಲಯದ ಮಳಲಿಯ ದರ್ಗಾವೊಂದರ ಒಳಭಾಗದಲ್ಲಿ ದೇವಸ್ಥಾನದ ಕುರುಹುಗಳು ಕಂಡು ಬಂದಿವೆ ಎನ್ನಲಾದ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ತೀರ್ಮಾನಿಸಿದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ಸಲುವಾಗಿ ಮುಂಭಾಗವನ್ನು ಕೆಡವಲಾಗಿತ್ತು. ಆಗ ಒಳಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದೆ ಎಂದು ಹಿಂದುಪರ ಸಂಘಟನೆಗಳು ಹೇಳಿದ್ದವು. ಹಾಗಾಗಿ ಜಾಗದ ಧಾರ್ಮಿಕ ಮಹತ್ವ ತಿಳಿಯಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.
ಕೇರಳದಿಂದ ಪೊದುವಾಳ್‌ರನ್ನು ಕರೆಸಿ ಪ್ರಶ್ನಾ ಚಿಂತನೆಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಇದರ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಸದ್ಯ ಈ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು, ಜಿಲ್ಲಾಡ ಳಿತ ವತಿಯಿಂದ ಹಳೆಯ ಭೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಊರಿನವರೆಲ್ಲರೂ ತಾಂಬೂಲ ಪ್ರಶ್ನೆ ಅಥವಾ ಅಷ್ಟಮಂಗಲ ಪ್ರಶ್ನೆ ಇರಿಸುವುದಕ್ಕೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವಿತ್ತೇ, ಎಷ್ಟು ಸಮಯ ಹಿಂದಿನದ್ದು, ಯಾವ ದೇವರಿದ್ದರು ಇತ್ಯಾದಿ ಕುತೂಹಲಗಳಿರುವುದರಿಂದ ಇದನ್ನು ನಡೆಸುವ ಬಗ್ಗೆ ಯೋಚಿ ಸು ತ್ತಿರುವುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಿಸದೆ ಸಾವು
ಎಂ.ಸಿ ಸುಧಾಕರ್, ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕೆ.ಹೆಚ್ ಮುನಿಯಪ್ಪ ತೀವ್ರ ಅಸಮಾಧಾನ
ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಗೂಡ್ಸ್ ವಾಹನ- ಕಾರು ಮುಖಾಮುಖಿ: ಇಬ್ಬರು ಸ್ಥಳದಲ್ಲೇ ಸಾವು
ಆನೆ ದಂತ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ, ಪ್ರಮುಖ ಆರೋಪಿ ಎಸ್ಕೇಪ್