ಯೇಸುಕ್ರಿಸ್ತರಜನನದಹಬ್ಬ ಕ್ರಿಸ್ಮಸ್‌:ಶ್ರದ್ಧಾ ಭಕ್ತಿಯಆಚರಣೆಗೆಸಿದ್ಧತೆ


Team Udayavani, Dec 24, 2018, 9:57 AM IST

24-december-1.gif

ಮಹಾನಗರ : ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಯೇಸು ಕ್ರಿಸ್ತರ ಜನನ ಮತ್ತು ಪುನರುತ್ಥಾನದ ಹಬ್ಬಗಳು ಪ್ರಮುಖ. ಈ ಎರಡೂ ಹಬ್ಬಗಳನ್ನು ಜಗತ್ತಿನಾದ್ಯಂತದ ಕ್ರೈಸ್ತರು ಹೆಚ್ಚು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ.

ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್‌. ಇದನ್ನು ಡಿ. 25ರಂದು ಆಚರಿಸುತ್ತಾರೆ. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌. ಇದನ್ನು ಸಾಮಾನ್ಯವಾಗಿ ಮಾರ್ಚ್‌ ಕೊನೆಯ ವಾರ ಅಥವಾ ಎಪ್ರಿಲ್‌ ಮೊದಲ ವಾರದಲ್ಲಿ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ನಿಗದಿತ ದಿನಾಂಕ ಇರುವುದಿಲ್ಲ. ಪ್ರತಿ ವರ್ಷ ಹದಿನೈದು ದಿನ ಆಚೀಚೆ ಆಗುತ್ತದೆ. ಆದರೆ ರವಿವಾರ ದಿನವೇ ಆಚರಿಸಲಾಗುತ್ತದೆ.

ಕ್ರಿಸ್ಮಸ್‌ ಹಬ್ಬವನ್ನು ಹೆಚ್ಚು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಹೊಸ ಉಡುಗೆ ತೊಡುಗೆಗಳ ಖರೀದಿಯ ಭರಾಟೆ, ಕ್ರಿಸ್ಮಸ್‌ ಕೇಕ್‌ ಮತ್ತು ಇತರ ವಿವಿಧ ವಿಶೇಷ ತಿಂಡಿಗಳ (ಕುಸ್ವಾರ್‌) ತಯಾರಿ, ಗೋದಲಿ ನಿರ್ಮಾಣ, ಕ್ರಿಸ್‌ ಮಸ್‌ ಟ್ರೀ, ಸಾಂತಾಕ್ಲಾಸ್‌ ಇತ್ಯಾದಿಗಳು ಈ ಹಬ್ಬದ ಬಾಹ್ಯ ಸಡಗರ, ಸಂಭ್ರಮದ ಸಂಕೇತ. 

ಇದಕ್ಕಿಂತ ಮೇಲಾಗಿ ಕ್ರೈಸ್ತ ಧರ್ಮ ಸಭೆ ಯೇಸುಕ್ರಿಸ್ತರ ಜನನದ ಹಬ್ಬ ಆಚರಣೆಗೆ 4 ವಾರಗಳ ಆಧ್ಯಾತ್ಮಿಕ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಕ್ರಿಸ್ಮಸ್‌ ಹಬ್ಬಕ್ಕೆ ಮೊದಲು ಆಚರಿಸುವ ನಾಲ್ಕು ವಾರಗಳ ಆಧ್ಯಾತ್ಮಿಕ ಸಿದ್ಧತೆಯ ಕಾಲವನ್ನು ‘ಆಡ್ವೆಂಟ್‌’ ಎಂದು ಕರೆಯುತ್ತಾರೆ. ಲ್ಯಾಟಿನ್‌ ಭಾಷೆಯ ‘ಆದ್ವೆಂತುಸ್‌’ ಎಂಬ ಪದದಿಂದ ಇದು ಬಂದಿದೆ. ಅಂದರೆ ಆಗಮನ ಎಂದರ್ಥ. ಈ ಸಮಯದಲ್ಲಿ ಕ್ರೈಸ್ತರು ಯೇಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತಾ ಅದಕ್ಕಾಗಿ ಪ್ರಾರ್ಥನೆ, ಧ್ಯಾನ ಮಾಡಿ ಏಕಚಿತ್ತದಿಂದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ.

‘ಯೇಸು ಕ್ರಿಸ್ತ ದೇವರ ಪುತ್ರ ಹಾಗೂ ಮಾನವ ಕುಲದ ಪಾಪ ವಿಮೋಚನೆಗಾಗಿ ಅವರನ್ನು ದೇವರೇ ಕಳುಹಿಸಿದರು. ಯೇಸು ಕ್ರಿಸ್ತರ ಆಗಮನದ ಬಗ್ಗೆ ದೇವರು ಪ್ರವಾದಿಗಳ ಮೂಲಕ ಸುಮಾರು 600 ವರ್ಷಗಳ ಮೊದಲೇ ಪ್ರಕಟಪಡಿಸಿದ್ದರು’ ಎನ್ನುವುದು ಕ್ರೈಸ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ವಿಮೋಚಕರೊಬ್ಬರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರು. ಅದರಂತೆ ಮರಿಯ ಎಂಬ ಯುವತಿಯ ಗರ್ಭದಲ್ಲಿ ಪವಿತ್ರಾತ್ಮನ ಕೃಪೆಯಿಂದ ಅವ ತರಿಸಿ ಯೇಸು ಜನಿಸಿದರು ಎಂಬುದು ನಂಬಿಕೆ.

ಜನನದ ಹಿನ್ನೆಲೆ
ಯೇಸುಕ್ರಿಸ್ತರ ತಂದೆ ಜೋಸೆಫ್‌ ಜನಗಣತಿಯ ಸಂದರ್ಭ ತನ್ನ ಹೆಸರನ್ನು ನೋಂದಾಣಿಗಾಗಿ ಬೆತ್ಲೆಹೇಮಿಗೆ ಗರ್ಭಿಣಿ ಮಡದಿ ಮರಿಯಾ ಜತೆ ಹೋಗುತ್ತಾರೆ. ಅಲ್ಲಿ ಮರಿಯಾಳಿಗೆ ಹೆರಿಗೆಯ ಬೇನೆ ಕಾಣಿಸಿಕೊಳ್ಳುತ್ತದೆ. ಹೆರಿಗೆಗೆ ಜಾಗವಿಲ್ಲ, ಜನಗಣತಿಗಾಗಿ ಬಂದ ಜನರಿಂದ ಬೆತ್ಲೆಹೇಮ್‌ ತುಂಬಿತ್ತು. ಬಂದವರೆಲ್ಲ ತಮ್ಮ ಬಂಧು ಬಾಂಧವರ, ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಅತಿಥಿಗಳಿದ್ದ ಛತ್ರಗಳು ಭರ್ತಿಯಾಗಿದ್ದವು. ಜೋಸೆಫ್‌ ಅವರಿಗೆ ಹೇಳಿ ಕೇಳಿ ಆ ಊರಲ್ಲಿ ಯಾರೂ ನೆಂಟರಿರಲಿಲ್ಲ. ಗೆಳೆಯರಂತೂ ಇರಲೇ ಇಲ್ಲ. ಬೇರೆ ದಾರಿಯಿಲ್ಲದೆ ಜೋಸೆಫ್‌ ಗರ್ಭಿಣಿ ಮರಿಯಳ ಜತೆ ಜಾನುವಾರುಗಳ ಹಟ್ಟಿಯಲ್ಲಿ ಆಶ್ರಯ. ಮರಿಯಾ ಅವರು ಹಟ್ಟಿಯಲ್ಲಿಯೇ (ಗೋದಲಿ) ಯೇಸು ಕ್ರಿಸ್ತರಿಗೆ ಜನ್ಮ ನೀಡಿದರು. ಹುಲ್ಲಿನ ಹಾಸಿಗೆ ಯೇಸು ಕಂದನ ಮೃದುವಾದ ದೇಹಕ್ಕೆ ಬೆಚ್ಚನೆಯ ರಕ್ಷಣೆಯನ್ನು ನೀಡಿತು. ಹರುಕು ಮುರುಕು ಚಿಂದಿಬಟ್ಟೆಯೇ ಬಾಲಯೇಸುವಿನ ಮೈ ಮುಚ್ಚುವ ದಿವ್ಯ ವಸ್ತ್ರವಾಯಿತು. ಮುದ್ದು ಮಗುವಿನ ಮುಖದ ದಿವ್ಯಕಳೆಯೇ ಹಟ್ಟಿಯ ಗೋದಲಿಯಲ್ಲಿ ಬೆಳಕಾಯಿತು ಎಂಬುದಾಗಿ ಬೈಬಲ್‌ ತಿಳಿಸುತ್ತದೆ. ಜಾನುವಾರುಗಳ ಹಟ್ಟಿಯಲ್ಲಿ ಯೇಸುಕ್ರಿಸ್ತರು ಜನಿಸಿದರ ಸಂಕೇತವಾಗಿ ಕ್ರಿಸ್ಮಸ್‌ ಸಂದರ್ಭ ಕ್ರೈಸ್ತರು ಮನೆ, ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸುತ್ತಾರೆ. ಗೋದಲಿಗಳಿಗೆ ಹಳ್ಳಿಯ ವಾತಾವರಣದಲ್ಲಿ ಆಕರ್ಷಕವಾಗಿ ರಚನೆ ಮಾಡುತ್ತಾರೆ. ಕ್ರಿಸ್ಮಸ್‌ಗಾಗಿ ನಗರದ ಮಳಿಗೆ, ಚರ್ಚ್‌ಗಳು ವಿದ್ಯುತ್‌ದೀಪಗಳಿಂದ ಆಕರ್ಷಕವಾಗಿ ಕಂಗೊಳಿಸುತ್ತವೆ.

ಆಚರಣೆ 
ಯೇಸು ಕ್ರಿಸ್ತರು ಡಿ. 25ರಂದು ಜನಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕ್ರಿಸ್ಮಸ್‌ ಹಬ್ಬದ ಮುಂಚಿನ ದಿನ ಡಿ. 24ರಂದು ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಬಲಿ ಪೂಜೆ ನಡೆಯುತ್ತದೆ. ಬಳಿಕ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿರುತ್ತವೆ. ಡಿ. 25ರಂದು ಚರ್ಚ್‌ಗಳಲ್ಲಿ ಬಲಿ ಪೂಜೆ, ಬಳಿಕ ಮಧ್ಯಾಹ್ನ ಹಬ್ಬದ ಸವಿಯೂಟ ಇರುತ್ತದೆ. 

ಸಾಂತಾಕ್ಲಾಸ್‌
ಗೋದಲಿಯ ಜತೆಗೆ ಕ್ರಿಸ್ಮಸ್‌ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕ್ರಿಸ್ಮಸ್‌ ಗ್ರೀಟಿಂಗ್‌ ಕಾರ್ಡುಗಳು, ಸಂತಸವನ್ನು ಪರರಲ್ಲಿ ಹಂಚಿಕೊಳ್ಳಲು ಕ್ರಿಸ್ಮಸ್‌ ವಿಶೇಷ ತಿಂಡಿ ತಿನಿಸುಗಳಾದ ಕುಸ್ವಾರ್‌ ಹಂಚುವಿಕೆ, ಎಲ್ಲೆಲ್ಲೂ ಮಿನುಗುವ ನಕ್ಷತ್ರಗಳ ಸಾಲು, ಕ್ರಿಸ್ಮಸ್‌ ಟ್ರೀ ಹಾಗೂ ಪ್ರತಿಯೊಂದು ಕ್ರಿಸ್ಮಸ್‌ ಕಾರ್ಯಕ್ರಮದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಾ, ಎಲ್ಲರನ್ನು ಪ್ರತ್ಯೇಕವಾಗಿ ಪುಟಾಣಿಗಳನ್ನು ರಂಜಿಸುವ, ‘ಸಾಂತಾಕ್ಲಾಸ್‌’- ಇವೆಲ್ಲವೂ ಕಣ್ಣಿಗೆ ಹಬ್ಬವನ್ನು ನೀಡುತ್ತವೆ. ‘ಸಾಂತಾಕ್ಲಾಸ್‌’ ಎಂಬ ವ್ಯಕ್ತಿ 4ನೇ ಶತಮಾನದಲ್ಲಿ ಜೀವಿಸಿದ ಟರ್ಕಿಯ ವಿೂರ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ನಿಕೊಲಾಸ್‌ ಅವರು ಎಂಬ ಉಲ್ಲೇಖ ಚರಿತ್ರೆಯಲ್ಲಿದೆ. ಅವರಿಗೆ ಬಡಬಗ್ಗರ ಮೇಲೆ ಅತಿಯಾದ ಕಾಳಜಿ. ಹೆಣ್ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಿಲ್ಲದೆ ಬಡತನದಿಂದ ಕೊರಗುವ, ಅನೇಕ ಹೆತ್ತವರಿಗೆ ತಮ್ಮ ಕೈಲಾದ ಸಹಾಯ ಹಸ್ತವನ್ನು ನೀಡುವುದಕ್ಕಾಗಿ ನಿಕೊಲಾಸ್‌ ಅವರು ರಾತ್ರಿಯ ಸಮಯದಲ್ಲಿ ಅವರ ಮನೆಯ ಕಿಟಿಕಿಗಳ ಎಡೆಯಲ್ಲಿ ರಹಸ್ಯವಾಗಿ ಬಂಗಾರ ಹಾಗೂ ಇತರ ಒಡವೆಗಳನ್ನು ಇಟ್ಟು ಹೋಗುತ್ತಿದ್ದರು. ಬಡವರಲ್ಲಿ ಕಾಳಜಿಯಿದ್ದ ನಿಕೊಲಾಸ್‌ ಅವರನ್ನು ಅವರ ಮರಣದ ಅನಂತರ ಕ್ರೈಸ್ತ ಧರ್ಮಸಭೆ ಸಂತರೆಂದು ಘೋಷಿಸಿದೆ. ಆದರೆ ಈಗ ಕ್ರಿಸ್ಮಸ್‌ ಸಂಭ್ರಮದ ಕಾರ್ಯ ಕ್ರಮಗಳಲ್ಲಿ ಎಲ್ಲೆಲ್ಲೂ ‘ಸಾಂತಾಕ್ಲಾಸ್‌’ ನನ್ನು ಮನೋರಂಜನೆಯ ವ್ಯಕ್ತಿಯಾಗಿ ಬಿಂಬಿಸಲಾಗಿದೆ. 

 ಹಿಲರಿ ಕ್ರಾಸ್ತಾ 

ಟಾಪ್ ನ್ಯೂಸ್

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.