ಕರಾವಳಿ ಜನತೆಗೆ ಸಂಸ್ಕೃತಿ ಉಳಿಸುವ ಕಾಳಜಿ: ಸಚಿನ್‌ 


Team Udayavani, Jan 6, 2019, 4:26 AM IST

6-january-1.jpg

ಮೂಡುಬಿದಿರೆ : ಕರಾವಳಿ ಯವರಿಗೆ ತಮ್ಮ ಸಂಸ್ಕೃತಿಯನ್ನು ರಕ್ಷಿಸಿ ಜೀವಂತವಾಗಿರಿಸಿಕೊಳ್ಳುವ, ಬೆಳೆಸುವ ಎಲ್ಲ ಗುಣಗಳಿವೆ. ಇಲ್ಲಿನ ಜನರು ಸಹೃದಯಿ ಗಳು, ಮೃದುಸ್ವಭಾವದವರು. ನನ್ನನ್ನು ಈ ಎಲ್ಲ ಗುಣಗಳು ಪ್ರಭಾವಿಸಿವೆ ಎಂದು ಮಹಾರಾಷ್ಟ್ರದ ವೃತ್ತಿಪರ ಚಿತ್ರಕಲಾವಿದ ಸಚಿನ್‌ ಆಕಲೇಕರ್‌ ಹೇಳಿದರು.

ಆಳ್ವಾಸ್‌ ವರ್ಣ ವಿರಾಸತ್‌ -ರಾಷ್ಟ್ರ ಮಟ್ಟದ ಚಿತ್ರಕಲಾವಿದರ ಶಿಬಿರದಲ್ಲಿ ಪಾಲ್ಗೊಂಡ ಇನ್ನೋರ್ವ ಕಲಾವಿದ ತೆಲಂಗಾಣದ ಕಾಂಡಿ ನರಸಿಂಹಲು ಅವರಿಗೂ ತಮ್ಮ ಊರಿನ ಸಂಸ್ಕೃತಿಯ ಕಾಳಜಿ. ನಗರದಿಂದ ಬಹುದೂರದಲ್ಲಿರುವ ತಮ್ಮ ಗ್ರಾಮದವರು ವಿಶೇಷವಾಗಿ ಇಂದಿನ ಯುವ ಪೀಳಿಗೆ ಪರಂಪರೆಯ ಉಡುಪು ತೊಡುಪುಗಳಿಂದ ಹೊರಬರುತ್ತಿರುವ ಬಗ್ಗೆ ಚಿಂತೆ ಇದೆ; ಈ ಚಿಂತೆ, ಚಿಂತನೆಗಳಿಂದ ತಾವು ತಮ್ಮ ಕಲಾಕೃತಿಗಳಲ್ಲಿ ‘ತೆಲಂಗಾಣ ಸಂಸ್ಕೃತಿ’ಯನ್ನೇ ವಸ್ತುವಾಗಿರಿಸಿಕೊಂಡು ಚಿತ್ರರಚಿಸುತ್ತಿರುವುದಾಗಿ ಹೇಳಿದರು.

ಮಕ್ಕಳ ಫ್ಯಾಂಟಸಿ ಲೋಕವನ್ನು ಕಲ್ಪಿಸಿಕೊಂಡು ಬೀದರ್‌ನ ಅಶೋಕ್‌ ಅಲ್ಲಿ ಅವರು ಚಿತ್ರರಚಿಸಿದ್ದಾರೆ. ಕೇರಳದ ಅಶ್ವಿ‌ನಿ ಎನ್‌. ಕೆ. ಅವರ ‘ಮಂಗ ಮತ್ತು ಕ್ಯಾಮರಾ ಕಣ್ಣು’, ತುಮಕೂರಿನ ಕುಮಾರ ಕೆ.ಜಿ. ಅವರ ‘ಹನುಮ’, ಮಂಜು ಹಾಸನ್‌ ಅವರ ‘ನವಿಲಗರಿ ತಲೆಗೆ ಸಿಕ್ಕಿಸಿಕೊಂಡ ಖನ್ನವದನ ಮಗುವನ್ನು ಹೊತ್ತ ತಂದೆ’, ಕೆ.ವಿ. ಕಾಳೆ ಸಂಡೂರು ಅವರ ‘ಗಂಡ ಹೆಂಡತಿ’ ಪ್ರದರ್ಶನದಲ್ಲಿವೆ. ದೇವು ರಾಯಚೂರು ಅವರ ‘ತಾಯಿ ಮಗುವಿನ ಸಂಬಂಧ ದಲ್ಲಿ ತಂದೆ-ತಾಯಿಯ ಹಿನ್ನೆಲೆ’ ಮಾರ್ಮಿ ಕವಾಗಿ ಚಿತ್ರಿಸಲ್ಪಟ್ಟು ಗಮನ ಸೆಳೆಯುತ್ತಿದೆ. ವಿಶೇಷವಾಗಿ ಭವನ್‌ ಪಿ.ಜಿ. ಅವರು ರಚಿಸಿದ ‘ವಿದ್ಯುತ್‌ ತಂತಿ ಸ್ಪರ್ಶವಾಗಿ ಪ್ರಾಣಕಳಕೊಂಡ ಕಾಗೆ’ಯ ಚಿತ್ರವು ‘ಲೈಟ್ ಆ್ಯಂಡ್‌ ಡಾರ್ಕ್‌’ ಎಂಬ ಮನೋಜ್ಞ ಶೀರ್ಷಿಕೆಯನ್ನು ಹೊತ್ತಿದೆ.

ಹೀಗೆಯೇ ಲಕ್ಷ್ಮಿ ಮೈಸೂರು, ದಿಲೀಪ್‌ ಡಿ.ಆರ್‌., ಗಣಪತಿ ಹೆಗ್ಡೆ, ಡಾ| ಅಶೋಕ ಎಸ್‌. ಶಟಕರ, ಮಮತಾ ಮಹಾರಾಷ್ಟ್ರ, ಕೃಷ್ಣ ಅಶೋಕ ತೆಲಂಗಾಣ, ಪ್ರೀತಾ ಕೆ. ನಾಯರ್‌ ಕೇರಳ, ಮಹಾರಾಷ್ಟ್ರದ ಸತ್ಯಜಿತ್‌ ಶಿಂಧೆ, ಕರ್ನಾಟಕದ ಸೈಯದ್‌ ಆಸಿಫ್‌ ಆಲಿ, ಮಧ್ಯಪ್ರದೇಶದ ಸಂಜು ಜೈನ್‌, ಮಲ್ತೇಶ್‌ ರಾಣೆಬೆನ್ನೂರು, ಡಾ| ಸಂತೋಷ್‌ ಕುಮಾರ್‌ ಕುಲಕರ್ಣಿ ತುಮಕೂರು ಹೀಗೆ ದೇಶದ ವಿವಿಧ ರಾಜ್ಯಗಳಿಂದ ಬಂದ ಕಲಾವಿದರು ಚಿತ್ರಗಳನ್ನು ರಚಿಸಿದ್ದಾರೆ. ಇವುಗಳೊಂದಿಗೆ ಆಳ್ವಾಸ್‌ನ ಸಂಗ್ರಹ ದಲ್ಲಿರುವ ಸುಮಾರು 4,000 ಕಲಾಕೃತಿ ಗಳನ್ನು ಪ್ರದರ್ಶನದಲ್ಲಿ ರಿಸಲಾಗಿದ್ದು ಜ.6ರ ಸಂಜೆಯವರೆಗೆ ತೆರೆದಿರುತ್ತದೆ.

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.