ಕಬಕ: ವೃತ್ತವಿಲ್ಲದೆ ಎಲ್ಲರೂ ಕಕ್ಕಾಬಿಕ್ಕಿ!

Team Udayavani, Jul 12, 2018, 10:11 AM IST

12-july-2.jpg

ಕಬಕ : ಕಬಕ ಜಂಕ್ಷನ್‌ನಲ್ಲಿ ವೃತ್ತವಿಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಪುತ್ತೂರು ಭಾಗದಿಂದ ಮಂಗಳೂರು, ವಿಟ್ಲ – ಕಾಸರಗೋಡು ಕಡೆಗೆ ತೆರಳುವ ವಾಹನಗಳು, ವಿಟ್ಲ ಕಡೆಯಿಂದ ಪುತ್ತೂರು ಅಥವಾ ಮಂಗಳೂರಿಗೆ ತೆರಳಬೇಕಾದ ವಾಹನಗಳು ಕಬಕ ಜಂಕ್ಷನ್‌ನಲ್ಲಿ ರಸ್ತೆಯನ್ನು ನಿರ್ಧರಿಸಿ ಮುಂದುವರಿಯುತ್ತವೆ. ಕೊಡಿ ಪ್ಪಾಡಿ ಕಡೆಯಿಂದ ಬರುವ ಜಿ.ಪಂ. ರಸ್ತೆಯೂ ಇಲ್ಲಿಯೇ ಮುಖ್ಯ ರಸ್ತೆಗೆ ಪ್ರವೇಶ ಪಡೆಯುತ್ತದೆ.

ಇಲ್ಲಿ ನಿತ್ಯ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿದೆ. ಕೇರಳ ರಾಜ್ಯದ ಸಾರಿಗೆ ಬಸ್ಸು ನಿತ್ಯ ಪುತ್ತೂರು- ಕಾಸರಗೋಡು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಹೊಸ ಚಾಲಕರಿದ್ದಾಗ ಕಬಕ ಜಂಕ್ಷನ್‌ನಿಂದ ಮಂಗಳೂರು ಕಡೆಗೆ ಚಲಾಯಿಸುತ್ತಾರೆ. ಪ್ರಯಾಣಿಕರು ಗಲಿಬಿಲಿಯಿಂದ ವಿಚಾರಿಸಿದರೆ, ಹಿಂದಿರುಗಿ ವಿಟ್ಲ ರಸ್ತೆ ಹಿಡಿಯುತ್ತಾರೆ. ಇಂತಹ ಘಟನೆಗಳು ಇಲ್ಲಿ ಸಾಮಾನ್ಯ. ವಾಹನಗಳೂ ರಸ್ತೆ ತಪ್ಪಿ ಚಲಿಸುತ್ತಿವೆ. ದಾರಿ ತಪ್ಪಿತೆಂದು ಗೊತ್ತಾದಾಗ ಗಕ್ಕನೆ ನಿಲ್ಲಿಸಿ, ಅವಘಡ ಮೈಮೇಲೆ ಎಳೆದುಕೊಳ್ಳುತ್ತಾರೆ.

ಈ ಹಿಂದೆ ಇಲ್ಲೊಂದು ವೃತ್ತವಿತ್ತು. ಮಾಣಿ-ಮೈಸೂರು ಹೆದ್ದಾರಿ ಅಭಿವೃದ್ಧಿಯ ನೆಪದಲ್ಲಿ ಅದನ್ನು ತೆರವುಗೊಳಿಸಬೇಕಾಗಿದೆ. ಆನಂತರ ಇಲ್ಲಿ ಯಾವುದೇ ರಸ್ತೆ ವಿಭಾಜಕ, ಸೂಚನೆಯಾಗಲೀ, ವೃತ್ತವಾಗಲೀ ಸ್ಥಾಪನೆಗೊಂಡಿಲ್ಲ. ಎಲ್ಲ ಕಡೆಗಳಿಂದಲೂ ವಾಹನಗಳು ನುಗ್ಗುವುದರಿಂದ ಈ ಸ್ಥಳದಲ್ಲಿ ಶಾಲೆ ಮಕ್ಕಳು ರಸ್ತೆ ದಾಟುವುದು ಕಷ್ಟ. ಸರ್ಕಲ್‌ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಕಬಕ ಗ್ರಾಮಸಭೆಯಲ್ಲಿ ಐದು ವರ್ಷಗಳಿಂದ ಬೇಡಿಕೆ ಸಲ್ಲಿಸುತಲೇ ಇದ್ದಾರೆ. ಪಂಚಾಯತ್‌ನಿಂದ ಇಲಾಖೆಗೆ ಜನರ ಬೇಡಿಕೆ ಪಟ್ಟಿ ರವಾನೆಯಾಗುತ್ತದೆಯೇ ಹೊರತು ಅಧಿಕಾರಿಗಳು ಅದಕ್ಕೆ ಸ್ಪಂದನೆ ನೀಡುತ್ತಿಲ್ಲ. ಇದೀಗ ರಾಷ್ಟೀಯ ಹೆದ್ದಾರಿಯಾಗಿ ಭಡ್ತಿ ಹೊಂದಿದ ಮಾಣಿ- ಮೈಸೂರು ರಸ್ತೆಯಲ್ಲಿ ದಿನ ನಿತ್ಯ ವಾಹನ ದಟ್ಟಣೆ ಇರುತ್ತದೆ. ಹಲವು ಚಾಲಕರು ಇಲ್ಲಿ ನಿಲ್ಲಿಸಿ, ಸ್ಥಳೀಯರಲ್ಲಿ ದಾರಿ ಕೇಳಿಯೇ ಮುಂದುವರಿಯುತ್ತಾರೆ.

ಅಗತ್ಯವಿರುವಲ್ಲಿ ವೃತ್ತ
 ಕಬಕದಲ್ಲಿ ಸರ್ಕಲ್‌ ಇಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ಅರಿವಿದೆ. ಮಾಣಿ – ಮೈಸೂರು ರಸ್ತೆ ಇನ್ನೂ ಕೆಆರ್‌ ಡಿಸಿಎಲ್‌ನಿಂದ ನಮ್ಮ ಇಲಾಖೆಗೆ ಹಸ್ತಾಂತರ ಗೊಂಡಿಲ್ಲ. ಕೆಲವು ಚಿಕ್ಕ ಕೆಲಸಗಳನ್ನು ಅವರೇ ನಿರ್ವಹಿಸಿದ ಮೇಲೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈ ರಸ್ತೆ ಹಸ್ತಾಂತರವಾಗಲಿದೆ. ಸಂಪಾಜೆ ವರೆಗಿನ ರಸ್ತೆಯನ್ನು 10 ಮೀಟರ್‌ ಗೆ ವಿಸ್ತರಣೆ ಮಾಡುವ ಕಾಮಗಾರಿ ಮಾಡಲಾಗುವುದು.
– ನಾಗರಾಜ್‌ ಬಿ.ಆರ್‌.,
ರಾ.ಹೆ.ಮಂಗಳೂರು ಉಪ ವಿಭಾಗದ ಎಂಜಿನಿಯರ್‌

ಉಮ್ಮರ್‌ ಜಿ. ಕಬಕ

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.