ಇನ್ನೂ ಇಳಿಯದ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆ ಸಂಭವ?

Team Udayavani, Nov 27, 2019, 6:00 AM IST

ಮಂಗಳೂರು/ ಉಡುಪಿ: ಈರುಳ್ಳಿ ಬೆಲೆ ಮಂಗಳವಾರ 110 ರೂ.ಗಳಲ್ಲಿ ಸ್ಥಿರವಾಗಿತ್ತು. ಮತ್ತಷ್ಟು ಬೆಲೆಯೇರಿಕೆ ಆಗಿಲ್ಲ ಎನ್ನುವುದೇ ಗ್ರಾಹಕರಿಗೆ ಸಮಾಧಾನದ ಸಂಗತಿ. ಸೋಮವಾರ ಈರುಳ್ಳಿ ಬೆಲೆ 110 ರೂ.ಗೆ ಏರಿತ್ತು. ಈರುಳ್ಳಿ (ಹಳೆಯ) ಕೆ.ಜಿ.ಗೆ 80 ರೂ ಇದ್ದುದು ರವಿವಾರ 90ರಿಂದ 96ಕ್ಕೇರಿತ್ತು. ಹೊಸತಕ್ಕೆ 70 ರೂ. ಇದ್ದುದು 90 ರೂ. ಮತ್ತು ಸಣ್ಣವಕ್ಕೆ 50 ರೂ.ಗಳಿಂದ 60 ರೂ.ಗೆ ಏರಿಕೆಯಾಗಿತ್ತು. ಮಂಗಳವಾರ ಈ ಬೆಲೆ ಸ್ಥಿರವಾಗಿತ್ತು.

ಪಂಜಾಬ್‌, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಮಂಗಳೂರಿಗೆ ಈರುಳ್ಳಿ ಪೂರೈಕೆಯಾಗುತ್ತಿದ್ದು, ಅಲ್ಲಿ ಭಾರೀ ಮಳೆಯಾಗಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ಸರಬರಾಜಿನಲ್ಲಿ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ. ಬೆಲೆ ಇಳಿಕೆಯಾಗುವ ಬಗ್ಗೆ ಈವರೆಗೆ ಮಾಹಿತಿ ಇಲ್ಲ ಎಂಬುದಾಗಿ ಮಂಗಳೂರು ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.

ಉಡುಪಿಯಲ್ಲಿ ಹಿಂದೆ 50 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಒಂದೇ ವಾರದಲ್ಲಿ 100 ರೂ.ಗೆ ಏರಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 100 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 110 ರೂ. ದಾಟಿದೆ. ಜಿಲ್ಲೆಗೆ ಪಂಜಾಬ್‌, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಆಮದಾಗುತ್ತದೆ.

ಹಳೆಯ ಈರುಳ್ಳಿ ಕೆ.ಜಿ.ಗೆ 100 ರೂ.ನಿಂದ 110 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಈರುಳ್ಳಿಗೆ 90 ರೂ. ಇದೆ. ಪೂರೈಕೆ ಕಡಿಮೆಯಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ 150 ರೂ. ತಲುಪುವ ಸಾಧ್ಯತೆಯಿದೆ ಎಂದು ಉಡುಪಿಯ ಸಣ್ಣ ವ್ಯಾಪಾರಿ ಅಬೂಬಕ್ಕರ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ