ಕರಾವಳಿಯ ಅಲ್ಲಲ್ಲಿ ಮಳೆ

Team Udayavani, Jun 20, 2019, 6:02 AM IST

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಮಳೆಯಾದ ವರದಿಯಾಗಿದೆ.

ಮಂಗಳೂರು ನಗರ, ಪುತ್ತೂರು, ಸುಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ. ಹೆಬ್ರಿ, ಆಗುಂಬೆ, ಕಾರ್ಕಳ, ಉಡುಪಿ, ಮಣಿಪಾಲ, ಬೆಳ್ಮಣ್ಣು, ಶಿರ್ವ, ಸಿದ್ದಾಪುರ, ತೆಕ್ಕಟ್ಟೆ, ಕೋಟೇಶ್ವರ ಸುತ್ತಮುತ್ತ ಸಾಮಾನ್ಯ ಮಳೆಯಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

ಬಜೆ: ನಿರಂತರ ಪಂಪಿಂಗ್‌
ಉಡುಪಿ: ಬಜೆ ಅಣೆಕಟ್ಟಿನಲ್ಲಿ ನಿರಂತರ ನೀರು ಹರಿದುಬರುತ್ತಿದ್ದು ಪಂಪಿಂಗ್‌ ನಡೆಯುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ