ಎರಡು ಪ್ರತ್ಯೇಕ ಗಾಂಜಾ ಪ್ರಕರಣ: ನಾಲ್ವರ ಬಂಧನ

Team Udayavani, Jul 12, 2019, 10:01 AM IST

ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ 625 ಗ್ರಾಂ ಗಾಂಜಾ ವಶಪಡಿಸಲಾಗಿದೆ.

ಕಾವೂರು ಪೊಲೀಸರು ಗುರುವಾರ ಮುಂಜಾನೆ 4.30ಕ್ಕೆ ಗಸ್ತು ನಿರತರಾಗಿದ್ದಾಗ ಯೆಯ್ನಾಡಿ – ದೇರೆಬೈಲ್‌ ರಸ್ತೆಯ ಹರಿಪದವಿನಲ್ಲಿ ಗಾಂಜಾ ಹೊಂದಿದ್ದ ಪಚ್ಚನಾಡಿಯ ಗೌರವ್‌ ಕೋಟ್ಯಾನ್‌ (26) ಮತ್ತು ಕಾವೂರುಕಟ್ಟೆಯ ರಾಹುಲ್‌ ಡೊನಾಲ್ಡ್‌ ಮೊಂತೇರೊ (25) ಅವರನ್ನು ಬಂಧಿಸಿ 125 ಗ್ರಾಂ ಗಾಂಜಾ ವಶಪಡಿಸಿದ್ದಾರೆ. ಎಎಸ್‌ಐ ಬಲ್ಲಾಳ್‌ ಮತ್ತು ಹೆಡ್‌ಕಾನ್‌ಸ್ಟೆಬಲ್‌ ಮೋಹನ್‌ ಅವರು ರೌಂಡ್ಸ್‌ನಲ್ಲಿದ್ದಾಗ ಹರಿಪದವಿನಲ್ಲಿ ಕಾರೊಂದರಲ್ಲಿ ರಾಹುಲ್‌ ಮತ್ತು ಗೌರವ್‌ ಗಾಂಜಾ ಸಹಿತ ಪತ್ತೆಯಾದರು.

ಇನ್ನೊಂದು ಪ್ರಕರಣದಲ್ಲಿ ಎಕನಾಮಿಕ್‌ ಆ್ಯಂಡ್‌ ನಾರ್ಕೋಟಿಕ್ಸ್‌ ಕ್ರೈಂ ಪೊಲೀಸರು ತಲಪಾಡಿ ಹಳೆ ಚೆಕ್‌ಪೋಸ್ಟ್‌ ಬಳಿ ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ಮಾಸ್ತಿಕಟ್ಟೆ ಉಳ್ಳಾಲ ನಿವಾಸಿ ಇಬ್ರಾಹಿಂ ಸುಫೈದ್‌(22) ಮತ್ತು ಹಳೆಕೋಟೆ ಉಳ್ಳಾಲ ನಿವಾಸಿ ಅಬ್ದುಲ್‌ ಅಫೀಲ್‌(21) ಅವರನ್ನು ಬಂಧಿಸಿ 500 ಗ್ರಾಂ ಗಾಂಜಾ,ಆ್ಯಕ್ಟಿವಾ ಹೋಂಡಾ, ಮೊಬೈಲ್‌ ಪೋನನ್ನು ವಶ ಪಡಿಸಿಕೊಂಡಿದ್ದಾರೆ.

ಆಯುಕ್ತರಿಂದ ಪ್ರಶಂಸೆ: ಆರೋಪಿಗಳನ್ನು ಬಂಧಿಸಿದ ಬಲ್ಲಾಳ್‌ ಮತ್ತು ಮೋಹನ್‌ ಅವರನ್ನು ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ