‘ಅಭಿಪ್ರಾಯ ರೂಪಿಸುವ ಸಾಮಾಜಿಕ ಜಾಲತಾಣ’

Team Udayavani, Nov 19, 2018, 10:47 AM IST

ವಿದ್ಯಾಗಿರಿ (ಮೂಡಬಿದಿರೆ): ಮಾಧ್ಯಮಗಿಂತಲೂ ವೇಗವಾಗಿ ಜನರನ್ನು ತಲುಪುತ್ತಿರುವ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ನಂತಹ ಸಾಮಾಜಿಕ ಜಾಲತಾಣಗಳು ಮಾಹಿತಿ ಹಂಚುವುದು ಮಾತ್ರವಲ್ಲ, ನಿರ್ದಿಷ್ಟ ಅಭಿಪ್ರಾಯಗಳನ್ನು ರೂಪಿಸುವ ಕೆಲಸವನ್ನೂ ಮಾಡುತ್ತಿವೆ ಎಂದು ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

ನುಡಿಸಿರಿ ಕೊನೆ ದಿನವಾದ ರವಿವಾರ, ರತ್ನಾಕರವರ್ಣಿ ವೇದಿಕೆಯಲ್ಲಿ ಅವರು ‘ಸಾಮಾಜಿಕ ಜಾಲತಾಣ’ ವಿಶೇಷೋಪನ್ಯಾಸ ನೀಡಿದರು. ಜಗತ್ತಿನ 760 ಕೋಟಿ ಜನರಲ್ಲಿ 300 ಕೋಟಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಬಹುತೇಕರು ಅಭಿಪ್ರಾಯಗಳನ್ನು ಬರವಣಿಗೆ ರೂಪಕ್ಕಿಳಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಶೇ. 85ರಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಈಗ ಸಾಮಾಜಿಕ ಜಾಲತಾಣಗಳು ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತಿವೆ. ಸಾಮಾಜಿಕ ಜಾಲತಾಣದ ಕ್ಷಿಪ್ರ ಬೆಳವಣಿಗೆಯನ್ನು ಮಾಧ್ಯಮ ರಂಗ ವಿರೋಧಿಸುತ್ತಲೇ ಬಂದಿತ್ತು. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೊಳ್ಳುವ ವಿಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಬಿತ್ತರಿಸುವ ಕೆಲಸವಾಗುತ್ತಿದೆ. ಪತ್ರಿಕೆಗಳು ಬರಹಗಾರನ ಬರವಣಿಗೆಯ ಗುಣಮಟ್ಟವನ್ನು ಪರಿಶೀಲಿಸುವ ಬದಲು ಆತನ ಸಿದ್ಧಾಂತ, ಪಂಥಗಳನ್ನು ನೋಡಿ ಲೇಖನಗಳನ್ನು ತಿರಸ್ಕರಿಸುತ್ತವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಸಮಾಜದ ಒಟ್ಟು ಅಭಿಪ್ರಾಯಗಳು ಪ್ರತಿಫಲನಗೊಳ್ಳುತ್ತವೆ.

ಇಲ್ಲಿದೆ ಮುಕ್ತ ಅವಕಾಶ
ಬರವಣಿಗೆ ಎಂಬುದು ಸಾಹಿತಿಗಳ ಸೊತ್ತಲ್ಲ ಎಂಬುದನ್ನು ಸಾಮಾಜಿಕ ಜಾಲತಾಣ ತೋರಿಸುವ ಕೆಲಸ ಮಾಡುತ್ತಿದೆ. ಸಾಮಾನ್ಯ ವೃತ್ತಿಯಲ್ಲಿರುವವನೂ ಅನಿಸಿಕೆಗಳನ್ನು ಮುಕ್ತವಾಗಿ ಇಲ್ಲಿ ತಿಳಿಸಬಹುದು. ಪತ್ರಿಕೆಗಳಿಗಿಂತ ಹೆಚ್ಚು ಓದುಗರು ಸಾಮಾಜಿಕ ಜಾಲಾತಾಣಗಳಲ್ಲಿ ಇದ್ದಾರೆ. ಚರ್ಚೆ, ಅಭಿಪ್ರಾಯ ಮಂಡನೆಗೆ ಇದು ಸೂಕ್ತ ವೇದಿಕೆ ಎಂಬುದು ಸತ್ಯ .
 – ರೋಹಿತ್‌ ಚಕ್ರತೀರ್ಥ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಮ್ಮ ಬದುಕು ವೈರುಧ್ಯಗಳ ಹಂದರದಂತಿದ್ದು, ಪ್ರತಿಯೊಬ್ಬರ ಜೀವನ ಶೈಲಿ ಕೂಡ ಭಿನ್ನವಾಗಿರುತ್ತವೆ. ಜೀವನ ಶೈಲಿ ಮನುಷ್ಯನ ಆಚಾರ, ವಿಚಾರ, ನಡವಳಿಕೆ ಆತನ ಸಂಸ್ಕಾರವನ್ನು...

  • ಬದುಕು ನಾವಂದುಕೊಂಡಷ್ಟು ಸರಳವೂ ಅಲ್ಲ. ಸುಲಭವೂ ಅಲ್ಲ. ಹಲವು ಕ್ಲಿಷ್ಟವಾದ ಹಾದಿಯಲ್ಲಿ, ಎದುರಾಗುವ ಕಷ್ಟ ಕೋಟಲೆಗಳೆಂಬ ಮುಳ್ಳುಗಳನ್ನು ದಾಟಿಕೊಂಡು ಸಾಗುವ,...

  • ನಮ್ಮ ಜೀವನದಲ್ಲಿ ಶತ್ರುಗಳೇ ಇರದೆ ಬದುಕಬಹುದಾ..? ಹೌದಲ್ವಾ, ಶತ್ರುಗಳೇ ಇಲ್ಲದಿದ್ದರೆ ಎಷ್ಟು ಚಂದದ ಬಾಳು ನಮ್ದು ಪ್ರಶಾಂತ ಮನಃಸ್ಥಿತಿ, ಯಾರ ಏಳಿಗೆಯೂ ನಮಗೆ ತೊಂದರೆ...

  • ಬದುಕು ನಿಂತಿರುವುದು ನಂಬಿಕೆಯ ಮೇಲೆ. ಅಪ್ಪ, ಅಣ್ಣ, ಮಾವ, ಗಂಡ,ಮಾಲಕ, ಕೆಲಸಗಾರರು ಹೀಗೆ ಬದುಕು ಇನ್ನೊಬ್ಬರನ್ನು ನಂಬಿಯೇ ಸಾಗುತ್ತದೆ. ಒಂದೊಮ್ಮೆ ನಂಬಿದವರು ಕೈಕೊಟ್ಟರೆ...

  • ಈ ಮಳೆಗೆ ಅದೆಷ್ಟೊಂದು ಮುಖಗಳು! ಮಳೆಯೆಂದರೆ ಹುಟ್ಟು, ಮಳೆಯೆಂದರೆ ಸಂಭ್ರಮ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯೆಂದರೆ ಧಾರೆ ಧಾರೆ ಸುರಿಯುವ ಪ್ರೀತಿ. ಒರಟು ಹೃದಯವನ್ನು...

ಹೊಸ ಸೇರ್ಪಡೆ