ಮೋದಿ ಜತೆ ಸಂವಾದ ನಡೆಸಿದ ಪುತ್ತೂರಿನ ಕೃಷಿಕ


Team Udayavani, Feb 25, 2019, 1:00 AM IST

modi-jate-samvada.jpg

ಪುತ್ತೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಿಸಾನ್‌ ಸಮ್ಮಾನ್‌ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ದೇಶಾದ್ಯಂತ ವೆಬ್‌ಕಾಸ್ಟ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ನಡೆಸುವ ಅವಕಾಶ ಪಡೆದರು.

ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಸಂವಾದವನ್ನೂ ಏರ್ಪಡಿಸಿದ್ದು, ರಾಜ್ಯದ ಇಬ್ಬರು ರೈತರಿಗೆ ಮಾತ್ರ ಸಂವಾದದಲ್ಲಿ ಮಾತನಾಡುವ ಅವಕಾಶ ಲಭಿಸಿದೆ. ಒಬ್ಬರು ಜನಾರ್ದನ ಭಟ್ಟರಾದರೆ ಇನ್ನೊಬ್ಬರು ತುಮಕೂರಿನ ರೈತ. ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಜಿಲ್ಲಾ ಮಟ್ಟದ ಸಂವಾದ ಹಾಗೂ ವೆಬ್‌ಕಾಸ್ಟ್‌ ಏರ್ಪಡಿಸಲಾಗಿತ್ತು.

“ನಾನೊಬ್ಬ ಗೇರುಬೀಜ, ಬಾಳೆ, ಪೆಪ್ಪರ್‌, ಅಡಿಕೆ ಬೆಳೆಸುವ ಸಣ್ಣ ರೈತ. ನನ್ನ ಜಮೀನಿನ ಸುತ್ತಮುತ್ತಲಿರುವವರು ಕೂಡ ಸಣ್ಣ ರೈತರೇ ಆಗಿದ್ದಾರೆ. ಪ್ರಧಾನ ಮಂತ್ರಿಗಳೇ ನೀವು ಜಾರಿಗೆ ತಂದಿರುವ ಹಲವು ಯೋಜನೆಗಳು ರೈತರಿಗೆ ಉಪಕಾರಿ ಆಗಿವೆ. ಅದರಲ್ಲೂ ಪ್ರಮುಖವಾಗಿ ನೀಮ್‌ ಕೋಟಿಂಗ್‌ ಇರುವ ಯೂರಿಯಾ ರಸಗೊಬ್ಬರ ಹಾಗೂ ಫಸಲ್‌ ವಿಮಾ ಯೋಜನೆ ತುಂಬಾ ಉಪಯುಕ್ತ. ಈಗ ಜಾರಿಗೆ ತಂದಿರುವ ಕಿಸಾನ್‌ ಸಮ್ಮಾನ್‌ ಯೋಜನೆಯೂ ಸಣ್ಣ ರೈತರಿಗೆ ಉಪಕಾರಿಯಾಗಿದೆ. ಇನ್ನಷ್ಟು ಉಪಕಾರಿ ಯೋಜನೆಗಳನ್ನು ರೈತರಿಗೆ ನೀಡುವಂತಾಗಲಿ’ ಎಂದು ಸಂವಾದದಲ್ಲಿ ಜನಾರ್ದನ ಭಟ್ಟರು ಹಾರೈಸಿದರು. ಕೃಷಿ ಅಭಿವೃದ್ಧಿಗಾಗಿ ತಂದ ಉತ್ತಮ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಕೃಷಿ ಖಾತೆಯ ರಾಜ್ಯಸಚಿವ ಪುರಷೋತ್ತಮ ರೂಪಾಲ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

ಮನ್‌ಕಿ ಬಾತ್‌ನಲ್ಲಿ ಉಲ್ಲೇಖ
ಇದೇವೇಳೆ ರವಿವಾರ ತನ್ನ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಓಂಕಾರ್‌ ಶೆಟ್ಟಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಯೋಧರಿಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣವಾಗಿದ್ದು, ಫೆ. 25ರಂದು ದಿಲ್ಲಿಯಲ್ಲಿ ಸೇನೆ, ದೇಶಕ್ಕೆ ಸಮರ್ಪಣೆಯಾಗಲಿದೆ ಎಂದು ಮನ್‌ ಕಿ ಬಾತ್‌ನಲ್ಲಿ ಹೇಳಿದ ಪ್ರಧಾನಿ ಮೋದಿ, “ನರೇಂದ್ರ ಮೋದಿ ಆ್ಯಪ್‌ನಲ್ಲಿ ನ್ಯಾಶನಲ್‌ ವಾರ್‌ ಮೆಮೋರಿಯಲ್‌ ನಿರ್ಮಾಣದ ಬಗ್ಗೆ ಕರ್ನಾಟಕ, ಉಡುಪಿಯ ಶ್ರೀ ಓಂಕಾರ್‌ ಶೆಟ್ಟಿ ಜೀಯವರು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

veerendra heggade

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರ; ಡಾ| ಹೆಗ್ಗಡೆ ಪಟ್ಟಾಭಿಷೇಕ ವರ್ಧಂತಿ

MUST WATCH

udayavani youtube

ನೂಜಿಬಾಳ್ತಿಲ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆ; ತಪ್ಪಿದ ಭಾರೀ ದುರಂತ

udayavani youtube

ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಬಂದರೂ ಶಿಕ್ಷಕರು ಬರಲೇ ಇಲ್ಲ : ಪೋಷಕರಿಂದ ಪ್ರತಿಭಟನೆ

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

ಹೊಸ ಸೇರ್ಪಡೆ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

22model

ಯುರೋಪ್‌ ಮಾದರಿ ಕಸದ ವಿಲೇವಾರಿ!

ಚಂದ್ರವಳ್ಳಿ ಕೆರೆ-ಸಿಹಿನೀರು ಹೊಂಡಕ್ಕೆ ಬಾಗಿನ ಅರ್ಪಣೆ

ಚಂದ್ರವಳ್ಳಿ ಕೆರೆ-ಸಿಹಿನೀರು ಹೊಂಡಕ್ಕೆ ಬಾಗಿನ ಅರ್ಪಣೆ

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

21kitturu

ಕಿತ್ತೂರು ನೆಲದಲ್ಲಿ ಉತ್ಸವಕ್ಕೆ ವರ್ಣರಂಜಿತ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.