ಅಂತರ್‌ ಜಿಲ್ಲಾ ಕಳವು ಆರೋಪಿ ಸಹಿತ ಮೂವರ ಬಂಧನ: ನಗ, ನಗದು ವಶ

ಕೊಡಗು ಪೊಲೀಸರಿಂದ ಕಾರ್ಯಾಚರಣೆ

Team Udayavani, Mar 17, 2020, 1:36 AM IST

mangalore-3-arrested

ಮಡಿಕೇರಿ: ಮೂರು ವರ್ಷಗಳಲ್ಲಿ 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಸಹಿತ ಮೂವರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ, ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಸಮೀಪದ ಕಣಗಲ್‌ ನಾಕಲಗೂಡು ನಿವಾಸಿ ಸಣ್ಣಪ್ಪ ಕೆ.ಎನ್‌.ಯಾನೆ ಡೀಲಾಕ್ಷ ಯಾನೆ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆದಾಳು ಗ್ರಾಮದ ಕುಶಾಲ್‌ (47) ಮತ್ತು ಸೋಮವಾರಪೇಟೆ ರೇಂಜರ್‌ ಬ್ಲಾಕ್‌ ನಿವಾಸಿ, ಕಾರ್ಪೊರೇಶ‌ನ್‌ ಬ್ಯಾಂಕ್‌ ಅಟೆಂಡರ್‌ ಗಣೇಶ್‌ ಪ್ರಸಾದ್‌ ಎಂ.ಎಸ್‌. (28) ಬಂಧಿತರು.

ಬಂಧಿತರಿಂದ 1.80 ಲ.ರೂ. ಮೌಲ್ಯದ 61.29 ಗ್ರಾಂ ಚಿನ್ನಾಭರಣ, 27 ಸಾ. ರೂ., 135.78 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ಮೊಬೈಲ್‌ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್‌ಪಿ ಡಾ| ಸುಮನ್‌ ಡಿ.ಪನ್ನೇಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರ ನಡುವೆಯೇ ಇದ್ದ ಆರೋಪಿ
ಪ್ರಕರಣದ ಪ್ರಮುಖ ಆರೋಪಿ ಸಣ್ಣಪ್ಪನು ಸಾರ್ವಜನಿಕರ ನಡುವೆಯೇ ಓಡಾಡಿಕೊಂಡು ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಎಂದು ಎಸ್‌ಪಿ ತಿಳಿಸಿದರು.  ಕೊಡಗು, ಹಾಸನ, ಸಕಲೇಶಪುರ ಸಹಿತ ವಿವಿಧೆಡೆಗಳಲ್ಲಿ ಕಳವು ನಡೆಸಿದ್ದ ಸಣ್ಣಪ್ಪ ಮತ್ತು ಆತನ ಸಹವರ್ತಿ ಗಳ ಬಂಧನಕ್ಕೆ ರಚಿಸಲಾಗಿದ್ದ ಸೋಮ ವಾರಪೇಟೆ ಉಪ ವಿಭಾಗದ ವಿಶೇಷ ತಂಡವು ಸಣ್ಣಪ್ಪನನ್ನು ಸೋಮ ವಾರಪೇಟೆಯಲ್ಲಿ ಬಂಧಿಸಿದರು.

34 ಪ್ರಕರಣಗಳು
ಸಣ್ಣಪ್ಪನ ಮೇಲೆ ಬೆಂಗಳೂರು, ಯಸಳೂರು, ಸಕಲೇಶಪುರ ಹಾಗೂ ಶನಿವಾರಸಂತೆ ಠಾಣೆಗಳಲ್ಲಿ 34 ಕಳವು ಪ್ರಕರಣ ದಾಖಲಾಗಿದ್ದು, ಶನಿವಾರಸಂತೆ ಠಾಣೆಯ 9 ಕಳವು ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯಾಗಿತ್ತು. ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಸುಮಾರು 13 ಬಂಧನ ವಾರೆಂಟ್‌ ಜಾರಿಯಾಗಿದೆ.

ಕದ್ದ ಮಾಲು ಖರೀದಿ ಆರೋಪ
ಆತನು ಕದ್ದ ಚಿನ್ನಾಭರಣಗಳನ್ನು 3ನೇ ಆರೋಪಿ, ಸೋಮವಾರಪೇಟೆ ಕಾರ್ಪೊರೇಶನ್‌ ಬ್ಯಾಂಕ್‌ ಅಟೆಂಡರ್‌ ಗಣೇಶ್‌ ಪ್ರಸಾದ್‌ಗೆ ಮಾರಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ವಸ್ತುಗಳನ್ನು ಸಣ್ಣಪ್ಪನಿಂದ ಖರೀದಿಸಿದ್ದ ಆರೋಪದಲ್ಲಿ ಗಣೇಶ್‌ ಹಾಗೂ ಕುಶಾಲ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಎಚ್‌.ಎಂ. ಶೈಲೇಂದ್ರ ಅವರ ಮಾರ್ಗ ದರ್ಶನದಲ್ಲಿ ಸೋಮವಾರಪೇಟೆ ಸಿಐ ನಂಜುಂಡೇಗೌಡ ಹಾಗೂ ಕುಶಾಲನಗರ ಸಿಐ ಎಂ.ಮಹೇಶ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿ ವಾರಸಂತೆ ಎಸ್‌ಐ ಕೃಷ್ಣ ನಾಯಕ್‌, ಸಿಬಂದಿ ವರ್ಗದ ಎಂ.ಎಸ್‌. ಬೋಪಣ್ಣ, ಎಸ್‌.ಸಿ. ಲೋಕೇಶ್‌, ಬಿ.ಡಿ. ಮುರಳಿ, ವಿನಯ್‌ ಕುಮಾರ್‌ ಮತ್ತು ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬಂದಿ ವರ್ಗದ ಎಂ.ಎ. ಗೋಪಾಲ್‌, ಬಿ.ಎಸ್‌. ದಯಾನಂದ, ಟಿ.ಎಸ್‌.ಸಜಿ, ಸಿಪಿಐ ಕಚೇರಿಯ ಅನಂತ ಕುಮಾರ್‌, ಮಂಜುನಾಥ್‌ ಮತ್ತು ಕುಮಾರಸ್ವಾಮಿ ಹಾಗೂ ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್‌ ಹಾಗೂ ಮಡಿಕೇರಿ ಸಿ.ಡಿ.ಆರ್‌. ಸೆಲ್‌ನ ರಾಜೇಶ್‌ ಮತ್ತು ಗಿರೀಶ್‌ ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ

Ramalinga reddy 2

Karnataka ;ಸಾರಿಗೆ ನೌಕರರ ವೇತನ ಶೇ. 12-15 ಹೆಚ್ಚಳ?

1-qwqeqwe

Medicine; 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

1-wewqeqe

Ram Mandir ಆಯ್ತು ಈಗ ಬಿಜೆಪಿ ಸೀತಾ ದೇಗುಲ ಭರವಸೆ!

naksal (2)

Naxal ಶರಣಾದರೆ ಸರಕಾರದಿಂದ  ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್‌

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ

Ramalinga reddy 2

Karnataka ;ಸಾರಿಗೆ ನೌಕರರ ವೇತನ ಶೇ. 12-15 ಹೆಚ್ಚಳ?

1-qwqeqwe

Medicine; 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

Medicine prices:  41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

Medicine prices: 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

1-wewqeqe

Ram Mandir ಆಯ್ತು ಈಗ ಬಿಜೆಪಿ ಸೀತಾ ದೇಗುಲ ಭರವಸೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.