ಮಂದ್‌ದೌರ್‌ ಗೋಲಿಬಾರ್‌ ಘಟನೆ ವಿರುದ್ಧ ಪ್ರತಿಭಟನೆ

Team Udayavani, Jun 11, 2017, 1:02 PM IST

dvg3.jpg

ದಾವಣಗೆರೆ: ಮಧ್ಯ ಪ್ರದೇಶದ ಮಂದ್‌ದೌರ್‌ ನಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ ಘಟನೆ ಖಂಡಿಸಿ, ಶನಿವಾರ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತ್ಯೇಕವಾಗಿ ರೈಲು ನಿಲ್ದಾಣದ ಆವರಣದಲ್ಲಿ ಪ್ರತಿಭಟಿಸಿದ್ದಾರೆ. ಬೆಳಗ್ಗೆ 8.30ರ ರೈಲು ತಡೆಗೆ ಯತ್ನಿಸಿದ ಕಾರ್ಯಕರ್ತರನ್ನು ರೈಲ್ವೆ ನಿಲ್ದಾಣದ ಆವರಣದಲ್ಲೇ ಪೊಲೀಸರು ತಡೆದರು. ಆಗ ಕಾರ್ಯಕರ್ತರು ಅಲ್ಲಿಯೇ ಕೆಲಹೊತ್ತು ಧರಣಿ ನಡೆಸಿದರು. 

ಈ ವೇಳೆ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಘಟಕದ ಜಿಲ್ಲಾ ಉಪಾಧ್ಯಕ್ಷ ಹರೀಶ್‌ ಕೆಂಗಲಹಳ್ಳಿ, ಮಳೆಯಾಗದೇ ದೇಶಾದ್ಯಂತ ರೈತರು ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಿಷ್ಟು ಸಿಕ್ಕ ಬೆಳೆಗೆ ಸೂಕ್ತ ಬೆಲೆ ಸಿಗದೇ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮಧ್ಯ ಪ್ರದೇಶ ಮಂದ್‌ದೌರ್‌ನಲ್ಲಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್‌ ನಡೆಸಿದ ಶಿವರಾಜ್‌ ಸಿಂಗ್‌ ಚವ್ಹಾಣ್‌ ನೇತೃತ್ವದ ಸರ್ಕಾರ, ರೈತರಪರ ದನಿ ಎತ್ತಿದ ನಮ್ಮ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನೂ ಸಹ ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನಾನಿರತ 6 ಜನ ರೈತರು ಪ್ರಾಣ ತೆತ್ತಿದ್ದಾರೆ. ಇದೀಗ ಅವರ ಕುಟುಂಬ ಬೀದಿ ಪಾಲಾಗಿವೆ. ವೇದಿಕೆಗಳಲ್ಲಿ ಭಾಷಣ ಬಿಗಿಯುವ ಪ್ರಧಾನಿಯವರು ರೈತರ ಬಗ್ಗೆ ಎಲ್ಲೂ ಚಕಾರ ಎತ್ತುವುದಿಲ್ಲ. ವಿದೇಶದಲ್ಲಿ ಬಾಲಿವುಡ್‌ ನಟಿ ಭೇಟಿಗೆ ಸಮಯ ಹೊಂದಿರುವ ಪ್ರಧಾನಿ, ರೈತರ ಸಮಸ್ಯೆ ಕುರಿತು ಚರ್ಚಿಸಲು ಸಮಯ ಸಿಗದಿರುವುದು ವಿಷಾದನೀಯ ಎಂದು ಟೀಕಿಸಿದರು. 

ಬಿಜೆಪಿಗೆ ಇದೀಗ ಅಧಿಕಾರದ ಮದವೇರಿದೆ. ಇದೇ ಕಾರಣಕ್ಕೆ ಅನ್ನದಾತರ ಬಲಿ ಪಡೆಯುತ್ತಿದೆ. ಈ ಹಿಂದೆ ಹಸಿರು ಶಾಲು ಹೊದ್ದುಕೊಂಡು ನಮ್ಮ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗೊಬ್ಬರ ಕೇಳಿದ್ದ ರೈತರ ಮೇಲೆ ಗೋಲಿಬಾರ್‌ ನಡೆಸಿದ್ದರು. ಬಿಜೆಪಿಯ ಬಹುತೇಕ ನಾಯಕರು ರಾಜಕೀಯ ಭಾಷಣ ಮಾಡುವಾಗ ಮಾತ್ರ ರೈತರನ್ನು ನೆನೆಯುತ್ತಾರೆ.

ಉಳಿದ ಕಾಲದಲ್ಲಿ ರೈತ, ಚಳವಳಿ, ರೈತರಪರ ದನಿ ಎತ್ತುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸಿದರು. ಇನ್ನೋರ್ವ ಉಪಾಧ್ಯಕ್ಷ ಪ್ರವೀಣ್‌ ಹುಲ್ಮನಿ, ಕಾರ್ಯದರ್ಶಿ ಪ್ರಮೋದ್‌, ಮುಖಂಡರಾದ ಜಾಫರ್‌, ಹರೀಶ್‌, ಆಫೂಜ್‌, ಚಂದ್ರು, ವಿನಯ್‌ ಹೋರಾಟದ ನೇತೃತ್ವ ವಹಿಸಿದ್ದರು.  

ಟಾಪ್ ನ್ಯೂಸ್

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

panaji

Panaji: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

mp renukacharya

ಬಿಎಸ್ ವೈ ವಿರುದ್ದದ ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರಿದ್ದಾರೆ: ರೇಣುಕಾಚಾರ್ಯ

17

Priyanka Jarakiholi: ಸಮಸ್ಯೆ ಇರುವ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಪ್ರಸ್ತಾವ ಸಲ್ಲ

MUST WATCH

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

ಹೊಸ ಸೇರ್ಪಡೆ

Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು

Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Dendoor Katte: 2 cows, 1 calf found illegally transported in separate cases

Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.