ಮಾಜಿ ಶಾಸಕರ ಮಗನಿಗೆ ನಕಲಿ ಅಶ್ಲೀಲ ವಿಡಿಯೋ ಬಳಸಿ ಬ್ಲಾಕ್‌ ಮೇಲ್!


Team Udayavani, Mar 22, 2021, 6:25 PM IST

vcbcvbvcbvxbv

ಧಾರವಾಡ : ನಕಲಿ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ತಮ್ಮನ್ನು ಹಣಕ್ಕಾಗಿ ಪೀಡಿಸಲಾಗುತ್ತಿದ್ದು, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪುತ್ರ ನವೀನ ಕೋನರಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆ.18ಕ್ಕೆ ನನ್ನ ಮೊಬೈಲ್‌ಗೆ ವಿಡಿಯೋಕಾಲ್ ಒಂದು ಬಂದಿತ್ತು. 12 ಸೆಕೆಂಡ್‌ ನ ಈ ಕಾಲ್‌ ನಲ್ಲಿ ಆ ಕಡೆಯಿಂದ ಮಾತನಾಡುವವರು ಯಾರು ಎಂಬುದೇ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ನನಗೆ ಮರಳಿ ಮೊಬೈಲ್ ಸ್ಕ್ರೀನ್‌ ಶಾಟ್‌ನ ಚಿತ್ರವೊಂದನ್ನು ಹರಿಬಿಟ್ಟರು.

ಇದರಲ್ಲಿ ನನ್ನ ಮುಖ ಮತ್ತು ಜೊತೆಗೆ ನಗ್ನ ಚಿತ್ರವಿರುವ ಹುಡುಗಿಯ ಫೋಟೊವಿತ್ತು. ಕೂಡಲೇ ನಾನು ಗಾಬರಿಯಾಗಿ ನನ್ನ ತಂದೆಗೆ ತಿಳಿಸಿದೆ. ಅವರು ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರು ಎಂದರು.

ಈ ಮಧ್ಯೆ ಇದನ್ನು ಬಹಿರಂಗೊಳಿಸಬಾರದು ಎಂದರೆ ಕೂಡಲೇ ತಮ್ಮ ಅಕೌಂಟ್‌ಗೆ ಹಣ ಹಾಕುವಂತೆ ಪೀಡಿಸಿದರು. ನಾನು ಕೂಡ ದೂರು ನೀಡುವ ಮುಂಚೆ ಇದು ಬಹಿರಂಗಗೊಳ್ಳಬಾರದು ಎನ್ನುವ ಉದ್ದೇಶದಿಂದ ಅವರಿಗೆ 13 ಸಾವಿರ ರೂ ಹಣವನ್ನು ಪೇಟಿಎಮ್‍ ಮೂಲಕ ರವಾನಿಸಿದೆ.

ನಂತರ ಪೊಲೀಸರಿಗೆ ದೂರು ನೀಡಿದೆ. ಅವರೆಲ್ಲ ಹಣ ವರ್ಗಾವಣೆಯಾದ ಅಕೌಂಟ್ ಮೂಲಕ ಅವರನ್ನು ಪತ್ತೆ ಹಚ್ಚಲಾಗಿದೆ. ಅವರು ರಾಜಾಸ್ತಾನ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ ಎಂದರು. ಧಾರವಾಡದ ಸೈಬರ್‌ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನವೀನ ಕೋನರಡ್ಡಿ, ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಹಣಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಈ ರೀತಿ ಪೀಡಿಸುವ ದಂಧೆಕೋರರ ಕರಾಳ ಮುಖ ಎಲ್ಲರಿಗೂ ಗೊತ್ತಾಗಲಿ ಎಂದು ನಾನೇ ಖುದ್ದು ದೂರು ನೀಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ದೂರು ದಾಖಲಿಸಿದೆ ಎಂದರು.

ಟಾಪ್ ನ್ಯೂಸ್

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

1-gfgdgdfg

ಶಿವಮೊಗ್ಗ: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

1-dfdfdsf

ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ

ಜಮ್ಮು-ಕಾಶ್ಮೀರ: ಮೂವರು ಲಷ್ಕರ್ ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರ, ಸ್ಫೋಟಕ ವಶ

ಜಮ್ಮು-ಕಾಶ್ಮೀರ: ಮೂವರು ಲಷ್ಕರ್ ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರ, ಸ್ಫೋಟಕ ವಶ

ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!

ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಸರ್ಕಾರಿ ಶಾಲೆ ದಾಖಲಾತಿಗೆ ಹರಸಾಹಸ!

3

ಮನೆ ಮನೆಗಳಲ್ಲಿ ಕುಂಬಾರಿಕೆಗೆ ಹೆಜ್ಜೆ

2

‘ರಾಜ್ಯ ನಾಯಕರು ಬಿಜೆಪಿ ಅಭ್ಯರ್ಥಿ ಅಂತಲೇ ಕರೆತಂದಿದ್ದಾರೆ’

1

ಪ್ಲಾಸ್ಟಿಕ್‌ ತ್ಯಾಜ್ಯ ಮರುಬಳಕೆಗೆ ಪಾಲಿಕೆ ಹೆಜ್ಜೆ

3

1ರಿಂದ ರೈಲುಗಳ ಸಂಚಾರ ವೇಗ ಹೆಚ್ಚಳ -ವೇಳೆ ಪರಿಷ್ಕರಣೆ

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

20

ಎಸ್‌.ಆರ್‌. ಪಾಟೀಲ್‌ಗೆ ಸಿಗುತ್ತಾ ಅವಕಾಶ?

Untitled-1

ವೈಮನಸ್ಸು ಮರೆತು ಪಕ್ಷಕ್ಕಾಗಿ ಶ್ರಮಿಸಿ

fund

ಬೆಳೆ ಪರಿಹಾರ ಶೀಘ್ರ ವಿತರಿಸಲು ಕ್ರಮ

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ರೈತರು ಎದೆಗುಂದಬಾರದು: ಎಂಟಿಬಿ

ರೈತರು ಎದೆಗುಂದಬಾರದು: ಎಂಟಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.