ಪೆಟ್ರೋಲ್ ಬಂಕ್‌ನಲ್ಲಿ ಡಬಲ್ ಮರ್ಡರ್‌

Team Udayavani, May 16, 2019, 1:29 PM IST

ಚನ್ನಮ್ಮ ಕಿತ್ತೂರು: ಕಿತ್ತೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವಾ ಪೆಟ್ರೋಲ್ ಬಂಕ್‌ನ ಇಬ್ಬರು ಕೆಲಸಗಾರರನ್ನು ಅಪರಿಚಿತ ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ.

ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಮುಸ್ತಾಕಹ್ಮದ ಬೀಡಿ (32) ಹಾಗೂ ಲಿಂಗದಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೆಟ್ಟಿ(20) ಕೊಲೆಯಾದವರು. ಕಿತ್ತೂರಿನಿಂದ ಐದು ಕಿಮೀ ದೂರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಇಂಡಿಯನ್‌ ಆಯಿಲ್ ಕಂಪನಿಯ ಶಿವಾ ಪೆಟ್ರೋಲ್ ಬಂಕ್‌ನಲ್ಲಿ ಈ ಕೆಲಸಗಾರರು ರಾತ್ರಿ ಕೆಲಸ ಮುಗಿಸಿ ಮಲಗಿದ್ದರು. ಬುಧವಾರ ನಸುಕಿನಲ್ಲಿ ಘಟನೆ ನಡೆದಿದೆ.

ಎಂದಿನಂತೆ ಇವರಿಬ್ಬರು ಬಂಕ್‌ನ ರಾತ್ರಿ ಪಾಳಿಯ ಕೆಲಸಕ್ಕೆ ಮಂಗಳವಾರ ರಾತ್ರಿ ತೆರಳಿದ್ದರು. ಕೆಲಸ ಮುಗಿದ ಬಳಿಕೆ ಮಂಜುನಾಥ ಬಂಕ್‌ ಹೊರ ಭಾಗದಲ್ಲಿ ಹಾಗೂ ಮುಸ್ತಾಕ ಬೀಡಿ ಬಂಕಿನ ಒಳಭಾಗದಲ್ಲಿ ನಿದ್ರಿಸುತ್ತಿದ್ದರು.ನಸುಕಿನಲ್ಲಿ ಸ್ಥಳಕ್ಕಾಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಹೊರಭಾಗದಲ್ಲಿ ಮಲಗಿದ್ದ ಮಂಜುನಾಥನ ಕತ್ತು ಕೊಯ್ದು ನಂತರ ಒಳಭಾಗದಲ್ಲಿ ಮಲಗಿದ್ದ ಮುಸ್ತಾಕ ಎಂಬಾತನ ಮೇಲೆ ಎರಗಿ ಅವನ ಕತ್ತನ್ನು ಸೀಳಿ ಬಂಕ್‌ನಲ್ಲಿರುವ ಹಣ ದೊಚಿದ್ದಾನೆ ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಆದರೆ ಎಷ್ಟು ಹಣ ದೋಚಲಾಗಿದೆ ಎಂಬ ವಿವರ ತಿಳಿದುಬಂದಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಉತ್ತರ ವಲಯ ಐಜಿಪಿ ಸುಹಾಸ ರಾಘವೇಂದ್ರ ಮಾತನಾಡಿ, ಆರೋಪಿಯ ಸಾಕಷ್ಟು ಕುರುಹುಗಳು ಸಿಸಿ ಕ್ಯಾಮರಾದಿಂದ ದೊರೆತಿದ್ದು ಇವುಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲು ಬೆಳಗಾವಿ ಎಸ್ಪಿ ನೇತೃತ್ವದಲ್ಲಿ ಬೆಳಗಾವಿಯ ಹಾಗೂ ಧಾರವಾಡದ 100 ಜನ ಪೊಲೀಸ್‌ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.

ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು. ಉತ್ತರ ವಲಯ ಐಜಿಪಿ ಸುಹಾಸ ರಾಘವೇಂದ್ರ, ಬೆಳಗಾವಿ ಎಸ್ಪಿ ಸುಧೀರಕುಮಾರ ರೆಡ್ಡಿ, ಬೈಲಹೊಂಗಲ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಕಿತ್ತೂರು ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸೈ ಸಂಜೀವ ಕಲ್ಲೂರ ಉಪಸ್ಥಿತರಿದ್ದರು. ನಂತರ ಧಾರವಾಡ ಜಿಲ್ಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ