ಮಗನಿಗೆ ತಂದೆಯ ಕಿಡ್ನಿ ಕಸಿ; ಎಸ್‌ಡಿಎಂ ವೈದ್ಯರ ಸಾಧನೆ

Team Udayavani, Jun 1, 2019, 11:37 AM IST

hubali-tdy-1..

ಧಾರವಾಡ: ಮಕ್ಕಳು ಚೆನ್ನಾಗಿ ಇರಲೆಂದು ತಂದೆ-ತಾಯಿ ಎಂತಹ ತ್ಯಾಗವನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೀಗ ಮತ್ತೂಂದು ಉದಾಹರಣೆ ಸಿಕ್ಕಿದೆ. ಮಗ ಅನಾರೋಗ್ಯಕ್ಕೆ ತುತ್ತಾಗಿದ್ದನ್ನು ನೋಡಲಾಗದೇ ತಂದೆಯು ಕರುಳ ಕುಡಿ ಬದುಕಬೇಕೆಂದು ತನ್ನ ಒಂದು ಕಿಡ್ನಿ ದಾನ ಮಾಡಿದ್ದು, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಮೊದಲ ಯಶಸ್ವಿ ಕಿಡ್ನಿ ಕಸಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶುಕ್ರವಾರ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಮಹೇಶ ಬೆನ್ನಿಕಲ್ ಈ ಕುರಿತು ಮಾಹಿತಿ ನೀಡಿದರು. ಬಳ್ಳಾರಿಯ ಹರೀಶ(23) (ಹೆಸರು ಬದಲಾಯಿಸಲಾಗಿದೆ) ಎಂಬುವರು ಡಯಾಲಿಸಿಸ್‌ ಆ್ಯಂಡ್‌ ಇಂಡ್‌ ಸ್ಟೆಜ್‌ ಕಿಡ್ನಿ ಡಿಸೀಸ್‌ ಎಂಬ ರೋಗದಿಂದ ಬಳಲುತ್ತಿದ್ದರು. ಇವರು ಬಳ್ಳಾರಿಯಲ್ಲಿ ಹಿಮೋಡಯಾಲಿಸಿಸ್‌ ಪಡೆಯುತ್ತಿದ್ದರು. ನಂತರ ಎಸ್‌ಡಿಎಂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿದ್ದಾರೆ ಎಂದರು.

ಹರೀಶ ಅವರು ಎಸ್‌ಡಿಎಂ ಆಸ್ಪತೆಗೆ ಬಂದು ಸೇರಿದಾಗ ಅವರ ಚಿಕ್ಕ ವಯಸ್ಸನ್ನು ಪರಿಗಣಿಸಿ ಕಿಡ್ನಿ ತಜ್ಞ ವೈದ್ಯರು ಕಿಡ್ನಿ ಕಸಿಗೆ ಒಳಗಾಗುವಂತೆ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಹರೀಶ ಕಿಡ್ನಿ ಕಸಿಗೆ ಒಪ್ಪಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಗಾದರು. ನಂತರ ಕಿಡ್ನಿದಾನಿಗಳಿಗೆ ಹುಡುಕಲು ಮುಂದಾದಾಗ ಹರೀಶ ಅವರ ತಂದೆ ಪ್ರಕಾಶ(ಹೆಸರು ಬದಲಾಯಿಸಲಾಗಿದೆ) ತಾವೇ ಖುದ್ದಾಗಿ ಕಿಡ್ನಿ ದಾನ ಮಾಡುವುದಾಗಿ ಒಪ್ಪಿಕೊಂಡರು. ನಂತರ ವೈದ್ಯರು ಕನಿಷ್ಟ ಆಕ್ರಮಣ ಶೀಲ(ಲ್ಯಾಪರೋಸ್ಕೋಪಿ) ಚಿಕಿತ್ಸೆ ಮೂಲಕ ಪ್ರಕಾಶ ಅವರ ಕಿಡ್ನಿ ತೆಗೆದು ಮೇ 14ರಂದು ಹರೀಶ ಅವರಿಗೆ ಕಸಿ ಮಾಡಿದರು ಎಂದು ವಿವರಿಸಿದರು.

ಶಸ್ತ್ರ ಚಿಕಿತ್ಸೆ ನಂತರ ತಂದೆ ಹಾಗೂ ಮಗ ಚೇತರಿಸಿಕೊಂಡಿದ್ದು, ಈ ವೇಳೆ ಯಾವುದೇ ತೊಂದರೆ ಆಗದಂತೆ ಮೇಲ್ವಿಚಾರಣೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆ ಆದ 3ನೇ ದಿನಕ್ಕೆ ಹರೀಶ ಅವರ ಮೂತ್ರಪಿಂಡದ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿದ್ದವು. ನಂತರ 5ನೇ ದಿನಕ್ಕೆ ಹರೀಶ ಅವರ ತಂದೆ ಪ್ರಕಾಶ ಹಾಗೂ 10ನೇ ದಿನದಂದು ಹರೀಶ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.

ಡಾ|ಅಕ್ಕಮಹಾದೇವಿ ಎಸ್‌.ಎಸ್‌ ಮಾತನಾಡಿ, ಈ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಪಿಂಡ ಶಾಸ್ತ್ರಜ್ಞರು, ಮೂತ್ರ ಶಾಸ್ತ್ರಜ್ಞರು, ಅನಸ್ತೇಶಿಯಾ ತಂಡದವರಾದ ಡಾ|ಮಹೇಶ ಬಿನ್ನಿಕಲ್, ಡಾ|ಅತುಲ್ ದೇಸಾಯಿ, ಡಾ| ಮಂಜುನಾಥ ಆರ್‌., ಡಾ| ಸಂಜಯ ಪಾಟೀಲ, ಡಾ| ನಾಗರಾಜ ನಾಯ್ಕ ಸೇರಿದಂತೆ ಸರ್ಜಿಕಲ್ ಮೂತ್ರಶಾಸ್ತ್ರಜ್ಞರ ತಂಡ ಭಾಗವಹಿಸಿ ಯಶಸ್ವಿ ಆಗಿದೆ ಎಂದರು.

ಸದ್ಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆರಂಭಿಸಿರುವುದರಿಂದ ತಜ್ಞ ವೈದ್ಯ ತಂಡವು ಉತ್ತರ ಕರ್ನಾಟಕದ ಬಡ ರೋಗಿಗಳ ಸೇವೆ ಮಾಡಲು ಸಹಾಯ ಮಾಡುತ್ತದೆ. ಮುಂದೆ ಬ್ರೇನ್‌ ಡೆಡ್‌ ರೋಗಿಗಳ ಕಸಿ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.

ಎಸ್‌ಡಿಎಂನ ವೈಸ್‌ ಚಾನ್ಸ್‌ಲರ್‌ ಡಾ| ನಿರಂಜನಕುಮಾರ, ಡಾ| ಶ್ರೀನಿವಾಸ, ಡಾ| ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿಮ್ಸ್‌ ಸೇರಿ 8 ಕೇಂದ್ರಗಳಲ್ಲಿ 24×7 ಒಪಿಡಿ

ಕಿಮ್ಸ್‌ ಸೇರಿ 8 ಕೇಂದ್ರಗಳಲ್ಲಿ 24×7 ಒಪಿಡಿ

ಸಾರ್ವಜನಿಕರ ಅಹವಾಲು ಆಲಿಸಿದ ಶೆಟ್ಟರ

ಸಾರ್ವಜನಿಕರ ಅಹವಾಲು ಆಲಿಸಿದ ಶೆಟ್ಟರ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

1-fffdf

ಡಾ| ಸೋಮಶೇಖರ ಇಮ್ರಾಪೂರ ಅವರಿಗೆ 2022ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ

ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.