Udayavni Special

ಕೋವಿಡ್‌; ಶೂನ್ಯದತ್ತ  ಗದಗ ಜಿಲ್ಲೆ ದಾಪುಗಾಲು

ಜೂನ್‌ ಮೊದಲ ವಾರದಿಂದ ಗುಣಮುಖರೇ ಹೆಚ್ಚು­ಪಾಸಿಟಿವ್‌ ದರ ಕಡಿಮೆಯಾದ್ರೂ ಮಕ್ಕಳ ಸೋಂಕಿನ ಪ್ರಮಾಣ ಆತಂಕ 

Team Udayavani, Jun 14, 2021, 8:09 PM IST

56984

ವಿಶೇಷ ವರದಿ

ಗದಗ: ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಕಾಲ ಅಬ್ಬರಿಸಿದ್ದ ಕೋವಿಡ್‌-19 ಸೋಂಕು ದಿನ ಕಳೆದಂತೆ ಶಾಂತವಾಗುತ್ತಿದೆ. ಸೋಂಕಿಗೆ ಒಳಗಾಗಿದ್ದವರು ಗುಣಮಖರಾಗುತ್ತಿರುವ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಪಾಸಿಟಿವ್‌ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಮೂಲಕ ಗದಗ ಜಿಲ್ಲೆಯ ಮಹಾಮಾರಿ ಕೋವಿಡ್‌ನಿಂದ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದೆ.

ಕಳೆದ ಏಪ್ರಿಲ್‌ ತಿಂಗಳಿಂದ ಏರುಮುಖವಾಗಿದ್ದ ಕೋವಿಡ್‌ -19 ಸೋಂಕಿನ ಪ್ರಮಾಣ ಮೇ ತಿಂಗಳ ಎರಡು ಮತ್ತು ಮೂರನೇ ವಾರದಲ್ಲಿ ಸರಾಸರಿ ದಿನಕ್ಕೆ 460ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ಕಂಡು ಬಂದಿದ್ದರೆ, ಅದರಲ್ಲಿ ಭಾಗಶಃ ಜನರು ಗುಣಮುಖರಾಗುತ್ತಿದ್ದರು. ಆದರೆ, ಜೂನ್‌ ತಿಂಗಳ ಮೊದಲ ವಾರದಿಂದ ಗುಣಮುಖರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದೆ. ಇದಕ್ಕೂ ಮುನ್ನ ಮೂರಂಕಿಯಷ್ಟಿದ್ದ ಸೋಂಕಿತರ ಸಂಖ್ಯೆ ಜೂ.9ರಿಂದ ಈಚೆಗೆ ಸೋಂಕಿನ ಸಂಖ್ಯೆ ಎರಡಂಕಿಗೆ ಇಳಿದಿದೆ. ಜೂ.11ರಂದು ಪ್ರಕಟವಾದ ಕೋವಿಡ್‌ ಬುಲೆಟಿನ್‌ನಲ್ಲಿ ಪಾಸಿಟಿವ್‌ ದರ ಶೇ.2.8ರಷ್ಟು ದಾಖಲಾಗಿದೆ. ಅದರಲ್ಲೂ ನರಗುಂದ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣ ಕಂಡು ಬಂದಿಲ್ಲ.

ಇನ್ನುಳಿದಂತೆ ಗದಗಿನಲ್ಲಿ 6.22, ಮುಂಡರಗಿ 2.78 ಹಾಗೂ ರೋಣ ಮತ್ತು ಶಿರಹಟ್ಟಿಯಲ್ಲಿ ಕ್ರಮವಾಗಿ 1.39, 1.59ರಷ್ಟು ಪಾಸಿಟಿವ್‌ ದರ ಕಂಡು ಬಂದಿದೆ. ಆದರೆ, ಮಕ್ಕಳ ಸೋಂಕಿನ ಪ್ರಮಾಣ ಒಂದಷ್ಟು ಆತಂಕ ಮುಂದುವರಿದಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಮ್ಸ್‌ನಲ್ಲಿ ಇದೀಗ ಬೆಡ್‌ಗಳು ಖಾಲಿಯಾಗುತ್ತಿವೆ. ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದಾಗ ಒಂದೇ ಒಂದು ಬೆಡ್‌ ಸಿಗದ ಪರಿಸ್ಥಿತಿ ಉಂಟಾಗಿತ್ತು. ದಿನೇ ದಿನೆ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಹೊರತಾಗಿ ಆಕ್ಸಿಜನ್‌ ಹಾಗೂ ಸಾಮಾನ್ಯ ಬೆಡ್‌ಗಳು ಲಭ್ಯತೆ ಹೆಚ್ಚುತ್ತಿದೆ.

ಜಿಲ್ಲೆಯಲ್ಲಿ ಜೂ.13ರವರೆಗೆ 4,13,468 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದು, 25,397 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 24,381 ಜನರು ಗುಣಮುಖರಾಗಿದ್ದು, ಸದ್ಯ 728 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಅದರಲ್ಲೂ ಹೋಂ ಐಸೋಲೇಷನ್‌ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಹೆಚ್ಚಿನ ಜನರಿದ್ದಾರೆ.

ಫಲಿಸಿದ ಪ್ರಯತ್ನ: ಕೋವಿಡ್‌ 2ನೇ ಅಲೆ ಆರಂಭಿಕ ಹಂತದಲ್ಲಿ ಹಲವು ವೈದ್ಯಕೀಯ ಮೂಲ ಸೌಭ್ಯಗಳ ಕೊರತೆಗಳ ಮಧ್ಯೆಯೂ ಜಿಲ್ಲಾಡಳಿತ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದೆ. ಸರ್ಕಾರದ ಸೂಚನೆಗಳ ಹೊರತಾಗಿಯೂ ಕೈಗೊಂಡ ಕೆಲವು ಕಠಿಣ ನಿರ್ಧಾರಗಳಿಂದ ಸೋಂಕಿನ ಸರಪಳಿ ತುಂಡರಿಸಲು ಸಾಧ್ಯವಾಗಿದೆ.

ಟಾಪ್ ನ್ಯೂಸ್

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

hfgjfyhgdf

ಶುಕ್ರವಾರ ಸಂಪುಟ ವಿಸ್ತರಣೆ ಸಾಧ್ಯತೆ : ದೆಹಲಿಗೆ ತೆರಳಲು ಕಾಲಾವಕಾಶ ಕೇಳಿದ ಬೊಮ್ಮಾಯಿ

Govt closely monitoring situation in Kishtwar, Kargil following cloudbursts: PM Modi

ಜಮ್ಮು ಕಾಶ್ಮೀರ ಮೇಘ ಸ್ಪೋಟ : ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ : ಪ್ರಧಾನಿ

uijykjykjkj

ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ : ಬಿ.ಸಿ.ಪಾಟೀಲ್

mamata-banerjee-in-delhi-pitches-for-opposition-unity-says-country-will-lead-we-will-follow

ಪ್ರತಿಪಕ್ಷಗಳ ಒಕ್ಕೂಟ ರಚನೆಯಾಗುತ್ತದೆ, ದೇಶವೇ ಒಕ್ಕೂಟದ ನೇತೃತ್ವ ವಹಿಸುತ್ತದೆ : ದೀದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

rtuyjrwr

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ. ಲಂಚ : ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್

hinniru

ಬಸವಸಾಗರ ಹಿನ್ನೀರಿನ ಪ್ರಮಾಣದಲ್ಲಿ ಏರಿಕೆ : ಬೆಳೆಗಳು ಜಲಾವೃತ

MUST WATCH

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

ಹೊಸ ಸೇರ್ಪಡೆ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.