ಹೆಸ್ಕಾಂ ಕಚೇರಿಗೆ ಲೈನ್‌ಮ್ಯಾನ್‌ಗಳೇ ಅಧಿಕಾರಿಗಳು!

Team Udayavani, Dec 9, 2019, 1:31 PM IST

ನರೇಗಲ್ಲ: ನರೇಗಲ್ಲ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಕಳೆದ ಆರು ವರ್ಷದಿಂದ ಹುದ್ದೆ ಖಾಲಿ ಇದ್ದು, ಲೈನ್‌ ಮ್ಯಾನ್‌ಗಳೇ ಅಧಿಕಾರಿಗಳ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೀಗಿರುವಾಗ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗದೇ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ಖಾಲಿ ಹುದ್ದೆ ಭರ್ತಿ ಯಾವಾಗ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಹೌದು, ಪಟ್ಟಣದ ಹೆಸ್ಕಾಂ ಇಲಾಖೆ ಶಾಖಾ ಅಧಿಕಾರಿ ಹುದ್ದೆ ಖಾಲಿ ಇದ್ದು, ಲೈನ್‌ ಮ್ಯಾನ್‌ಗಳೇ ಈ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತ ಸರ್ಕಾರ ಕಣ್ತೆರೆದು ನೋಡದಿರುವುದು ದುರ್ದೈವ ಎನ್ನುತ್ತಿದ್ದಾರೆ ಸಾರ್ವಜನಿಕರು.

ಗ್ರಾಹಕರುರೈತರಿಗೆ ತೊಂದರೆ: ಈ ಸಮಸ್ಯೆ ಸುಮಾರು ದಿನಗಳಿಂದ ಹಾಗೆಯೇ ಇದ್ದು, ವಿದ್ಯುತ್‌ ಬಳಸುವ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಏನಾದರೂ ಸಮಸ್ಯೆಗಳು ಇದ್ದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡರೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡು ಬಂದವರಿಗೆ ನಾಳೆ ಬನ್ನಿನಾಡಿದ್ದು ಬನ್ನಿಎನ್ನುವ ಉತ್ತರ ಸಾಮಾನ್ಯವಾಗಿದ್ದು, ನಾವು ಪ್ರಭಾರಿಯಾಗಿದ್ದೇವೆ ಎನ್ನುವ ಅಳಲು ಕೂಡ ಕೇಳಿ ಬರುತ್ತಿದೆ.

ಬರೀ ಅಲೆದಾಟ: ನಿಮ್ಮ ಸಮಸ್ಯೆಯನ್ನುಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಾಗಹಾಕುತ್ತಿರುವುದರಿಂದ ಹೆಸ್ಕಾಂ ಗ್ರಾಹಕರು ಬರೀ ಮನೆಯಿಂದಕಚೇರಿಗೆ, ಕಚೇರಿಯಿಂದಮನೆಗೆ ಪರದಾಡುವಂತಾಗಿದೆ. ಇಲಾಖೆ ಮುಖ್ಯಸ್ಥರು ಕಾರ್ಯಾಲಯದಲ್ಲಿ ಕುಳಿತು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಿದರೆ ಅವರ ಕೈಕೆಳಗೆ ಕೆಲಸ ಮಾಡುವರು ತಮಗೆ ಒಪ್ಪಿಸಿದ ಕೆಲಸ ಮಾಡಿ ಹೋಗುತ್ತಾರೆ. ಆದರೆ ಮುಖ್ಯಸ್ಥರೇ ಇಲ್ಲದಿದ್ದಾಗ ಯಾವ ಕಾರ್ಯ ಮಾಡಬೇಕು?, ಏನು ಕ್ರಮ ಕೈಗೊಳ್ಳಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ.

ನರೇಗಲ್ಲ ಭಾಗದ ಹೆಸ್ಕಾಂ ಶಾಖಾ ಕಚೇರಿಗೆ ಶಾಖಾಧಿಕಾರಿಗಳನ್ನು ಸರ್ಕಾರದ ಮಟ್ಟದಿಂದಲೇ ನೇಮಕ ಮಾಡಬೇಕು. ಇದಕ್ಕಾಗಿ ನಾವು ಈಗಾಗಲೇ ಮಾಹಿತಿ ರವಾನಿಸಿದ್ದೇವೆ. ನರೇಗಲ್ಲ ಸೇರಿದಂತೆ ಹೊಳೆಆಲೂರ, ಬೆಳವಣಿಕೆ, ರೋಣ ಶಾಖಾ ಕಚೇರಿಗೆ ಅಧಿ ಕಾರಿಗಳ
ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರಕ್ಕೆ
ಮನವಿ ಮಾಡಲಾಗಿದೆ. -ಚೇತನ ದೊಡ್ಡಮನಿ, ಹೆಸ್ಕಾಂ ಎಇಇ

 

-ಸಿಕಂದರ ಎಂ. ಆರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನರೇಗಲ್ಲ: ರೋಣ ತಾಲೂಕು ಸರಹದ್ದಿನ ಕೊನೆಯ ಊರು, ಸಚಿವ ಸಿ.ಸಿ. ಪಾಟೀಲ ಮತಕ್ಷೇತ್ರದಲ್ಲಿ ಬರುವ ನಾಗರಾಳ ಗ್ರಾಮದ ಜನತೆಗೆ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ನಾಗರಾಳ...

  • ಶಿರಹಟ್ಟಿ: ಶಿರಹಟ್ಟಿ ಮತ ಕ್ಷೇತ್ರದಾದ್ಯಂತವಾಗಿ ಅತಿವೃಷ್ಟಿಯಿಂದಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸುವುದ ಅವಶ್ಯವಿದ್ದು, ಈಗಾಗಲೇ ಮುಂಡರಗಿ ಮತ್ತು ಲಕ್ಷ್ಮೇಶ್ವರ...

  • ಲಕ್ಷ್ಮೇಶ್ವರ: ಕೃಷಿಯಿಂದ ಕೈಸುಟ್ಟುಕೊಳ್ಳುತ್ತಿರುವ ರೈತ ಸಮುದಾಯ ಇದರಿಂದ ವಿಮುಖರಾಗುತ್ತಿದ್ದಾರೆ.ಆದರೆ ಭೂಮಿತಾಯಿ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ...

  • ಗದಗ: ಇದೊಂದು ಪುಟ್ಟ ತಾಂಡಾಯಾಗಿದ್ದರೂ, ಸ್ಥಿತಿವಂತರೇ ಹೆಚ್ಚು. ಸರಕಾರದ ನೆರವು ಸಾಕಾಗಲಿಲ್ಲವೆಂದರೆ, ಸ್ಥಳೀಯರೇ ಆರ್ಥಿಕವಾಗಿ ನೆರವಾಗುವ ಸಹೃದಯಿಗಳು. ಆದರೆ,...

  • ಗಜೇಂದ್ರಗಡ: ಜ. 19ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವ ಕುರಿತು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ...

ಹೊಸ ಸೇರ್ಪಡೆ