ಬಸ್‌ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Team Udayavani, Sep 10, 2019, 11:58 AM IST

ಗಜೇಂದ್ರಗಡ: ಸಮಯಕ್ಕೆ ಸರಿಯಾಗಿ ಬಸ್‌ ಬಿಡದಿರುವುದನ್ನು ಖಂಡಿಸಿ ಚಿಲಝರಿ ಗ್ರಾಮದ ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಗಜೇಂದ್ರಗಡ: ಸಮೀಪದ ಚಿಲಝರಿ ಗ್ರಾಮದಿಂದ ಗಜೇಂದ್ರಗಡಕ್ಕೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ಬಿಡದೇ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಕರ ಸಾರಿಗೆ ಘಟಕ ಬಸ್‌ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಸಮೀಪದ ಚಿಲಝರಿ ಗ್ರಾಮದಿಂದ ಗಜೇಂದ್ರಗಡಕ್ಕೆ ಶಿಕ್ಷಣ ಪಡೆಯಲು ನಿತ್ಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಸಾರಿಗೆ ಘಟಕದಿಂದ ಪಾಸ್‌ ಪಡೆದಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ 10 ಗಂಟೆಗೆ ಬಸ್‌ ಬಿಡುತ್ತಿದ್ದಾರೆ. ಇದರಿಂದ ಶಾಲೆಗೆ ಹೋಗುವುದು ಕಷ್ಟಕರವಾಗಿದೆ. ಶಾಲಾ ವೇಳೆ 9 ಗಂಟೆಗೆ ಆದರೆ ಸಾರಿಗೆ ಘಟಕ ಅಧಿಕಾರಿಗಳು 10 ಗಂಟೆ ಮೇಲ್ಪಟ್ಟು ಬಸ್‌ ಗ್ರಾಮಕ್ಕೆ ಬರುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಗ್ರಾಮದ 25ಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಗ್ರಾಮದಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಬಸ್‌ನಿಂದಾಗಿ ಹಣ ನೀಡಿ ಖಾಸಗಿ ವಾಹನಗಳಿಂದ ಗಜೇಂದ್ರಗಡಕ್ಕೆ ತೆರಳುವ ಅನಿವಾರ್ಯತೆ ಎದುರಾಗಿದೆ. ನೂರಾರು ರೂಪಾಯಿ ನೀಡಿ ಪಾಸ್‌ ಪಡೆದರೂ ನಿತ್ಯ ಖಾಸಗಿ ವಾಹನಗಳಿಗೆ ಹಣ ಕೊಟ್ಟು ಸಂಚರಿಸಬೇಕಾದ ಸ್ಥಿತಿ ಉದ್ಭವಿಸಿದೆ. ಆದರೆ ಸಾರಿಗೆ ಘಟಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ ಅನಾನುಕೂಲತೆಯಿಂದಾಗಿ ನಿತ್ಯ ಶಾಲೆಗೆ ತಡವಾಗಿ ಹೋಗುವಂತಾಗಿದೆ. ಶೈಕ್ಷಣಿಕ ಬದುಕಿಗೂ ಹಿನ್ನಡೆಯಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಬಸ್‌ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತರು.

ನಂತರ ಮಧ್ಯಾಹ್ನ 12ಕ್ಕೆ ವಾಕರ ಸಾರಿಗೆ ಘಟಕ ಪ್ರಭಾರಿ ವ್ಯವಸ್ಥಾಪಕ ರಾಜಶೇಖರ ಮಸ್ಕಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, ಗಣೇಶ ಚತುರ್ಥಿ ಹಬ್ಬದಿಂದಾಗಿ ಬಸ್‌ ತಡವಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ವೇಳೆಗೆ ಬಸ್‌ ಬಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನರೇಗಲ್ಲ: ರೋಣ ತಾಲೂಕು ಸರಹದ್ದಿನ ಕೊನೆಯ ಊರು, ಸಚಿವ ಸಿ.ಸಿ. ಪಾಟೀಲ ಮತಕ್ಷೇತ್ರದಲ್ಲಿ ಬರುವ ನಾಗರಾಳ ಗ್ರಾಮದ ಜನತೆಗೆ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ನಾಗರಾಳ...

  • ಶಿರಹಟ್ಟಿ: ಶಿರಹಟ್ಟಿ ಮತ ಕ್ಷೇತ್ರದಾದ್ಯಂತವಾಗಿ ಅತಿವೃಷ್ಟಿಯಿಂದಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸುವುದ ಅವಶ್ಯವಿದ್ದು, ಈಗಾಗಲೇ ಮುಂಡರಗಿ ಮತ್ತು ಲಕ್ಷ್ಮೇಶ್ವರ...

  • ಲಕ್ಷ್ಮೇಶ್ವರ: ಕೃಷಿಯಿಂದ ಕೈಸುಟ್ಟುಕೊಳ್ಳುತ್ತಿರುವ ರೈತ ಸಮುದಾಯ ಇದರಿಂದ ವಿಮುಖರಾಗುತ್ತಿದ್ದಾರೆ.ಆದರೆ ಭೂಮಿತಾಯಿ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ...

  • ಗದಗ: ಇದೊಂದು ಪುಟ್ಟ ತಾಂಡಾಯಾಗಿದ್ದರೂ, ಸ್ಥಿತಿವಂತರೇ ಹೆಚ್ಚು. ಸರಕಾರದ ನೆರವು ಸಾಕಾಗಲಿಲ್ಲವೆಂದರೆ, ಸ್ಥಳೀಯರೇ ಆರ್ಥಿಕವಾಗಿ ನೆರವಾಗುವ ಸಹೃದಯಿಗಳು. ಆದರೆ,...

  • ಗಜೇಂದ್ರಗಡ: ಜ. 19ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವ ಕುರಿತು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ...

ಹೊಸ ಸೇರ್ಪಡೆ