ಸೋಂಕಿತರ ಸಾವಿಗೆ ಡೀಸಿಯೇ ಹೊಣೆ


Team Udayavani, May 12, 2021, 4:51 PM IST

covid effect

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಕಲ್ಪಿಸಲು ಜಿಲ್ಲಾಡಳಿತ ಸಂಪೂರ್ಣ ವಿಫ‌ಲರಾಗಿದ್ದು,2ನೇ ಅಲೆ ಪ್ರಾರಂಭವಾದ ನಂತರ ಕೊರೊನಾಗೆಜಿಲ್ಲೆಯ 200 ಕ್ಕೂ ಹೆಚ್ಚು ಜನರ ಸಾವಿಗೀಡಾಗಿದ್ದು,ಇದಕ್ಕೆ ಜಿಲ್ಲಾಧಿಕಾರಿಯವರೆಹೊಣೆ ಎಂದು ಜೆಡಿಎಸ್‌ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿಯವರುತಮ್ಮ ಬಳಿ ಹಣವಿದ್ದರೂಸೋಂಕಿತರ ಚಿಕಿತ್ಸೆಗೆ ಅಗತ್ಯ ಔಷಧ ಖರೀದಿಗೆ ಹಾಗೂಮೂಲ ಸೌಕರ್ಯಗಳಿಗೆ ಬಿಡುಗಡೆ ಮಾಡಿಲ್ಲ. ನಾನುಹತ್ತಾರು ಬಾರಿ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರೂ ಹಣ ಬಿಡುಗಡೆ ಮಾಡದೆ ಆರೋಗ್ಯ ಸಚಿವರುಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರಜಿಲ್ಲೆಗೆ ಆಗಮಿಸುತ್ತಿರುವುದನ್ನು ಖಾತರಿಪಡಿಸಿಕೊಂಡುಸೋಮವಾರ ಬೆಳಗ್ಗೆ ಹಣ ಬಿಡುಗಡೆ ಮಾಡಿದ್ದಾರೆ.

ಹಣ ಬಿಡುಗಡೆಯಲ್ಲಿಯೂ ತಾಲೂಕುಗಳ ನಡುವೆತಾರತಮ್ಯ ಮಾಡಿದ್ದಾರೆ ಎಂದು ದೂರಿದರು.ಜಿಲ್ಲಾಧಿಕಾರಿಯವರ ಅಸಹಕಾರದ ಬಗ್ಗೆ ನಾನುಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಅವರ ಗಮನ ಸೆಳೆದಾಗ ಅವರು ಪ್ರತಿ ವಿಧಾನಸಭಾಕ್ಷೇತ್ರಕ್ಕೂ ತಲಾ ಒಂದು ಕೋಟಿ ರೂ.ಗಳನ್ನು ಕೊರೊನಾಸೋಂಕಿತರ ಚಿಕಿತ್ಸೆಗೆ ಒದಗಿಸಲಾಗಿದೆ. ಹಾಸನಜಿಲ್ಲಾಧಿಕಾರಿಯವರು ಏಕೆ ಪ್ರಸ್ತಾವನೆ ಸಲ್ಲಿಸಲಿಲ್ಲವೋಗೊತ್ತಿಲ್ಲ ಎಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಉತ್ತಮಚಿಕಿತ್ಸಾ ಸೌಲಭ್ಯ ಕಲ್ಪಿಸುವ ಕಾಳಜಿ ಜಿಲ್ಲಾಧಿಕಾರಿಯವರಿಗೆ ಇದ್ದಿದ್ದರೆ ಸುಮಾರು 20 ಕೋಟಿಅನುದಾನವನ್ನು ಕೇಳಲು ಏನು ಅಡ್ಡಿಯಾಗಿತ್ತು ?ಬೆಂಗಳೂರು ಮಹಾನಗರದ ನಂತರ ಹಾಸನ ಜಿಲ್ಲೆಯಲ್ಲಿಯೇ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂಸೋಂಕು ನಿಯಂತ್ರಣ ಹಾಗೂ ಚಿಕಿತ್ಸಾ ವ್ಯವಸ್ಥೆಕಲ್ಪಿಸಲು ಜಿಲ್ಲಾಧಿಕಾರಿಯವರು ಏಕೆ ಮುಂದಾಗುತ್ತಿಲ್ಲಎಂದು ತರಾಟೆಗೆ ತೆಗೆದುಕೊಂಡರು.ಕೊ

ರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಹಗಲುದರೋಡೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳು ತ್ತಿಲ್ಲ.ಜಿಲ್ಲೆಯ ಖಾಸಗಿ ಆಸ್ಪತ್ರೆಗಳೊಂದಿಗೆ ಜಿಲ್ಲಾಧಿ ಕಾರಿಯವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಈಗಲಾದರೂ ಜಿಲ್ಲಾಡಳಿತ ಸಮರೋಪಾದಿಯಲ್ಲಿಕೆಲಸ ಮಾಡಬೇಕು. ಇಲ್ಲದಿದ್ದರೆ ಜನರು ದಂಗೆ ಎದ್ದರೆಅದರ ಪರಿಣಾಮವನ್ನು ಜಿಲ್ಲಾಧಿಕಾರಿಯವರೇ ಎದುರಿಸ ಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತಚುರುಕಾಗಿ ಕೆಲಸ ಮಾಡಿ ಸೋಂಕಿತರ ಜೀವ ಉಳಿಸಲುಮುಂದಾಗದಿದ್ದರೆ ಸಿಎಂ ನಿವಾಸದ ಬಳಿ ಧರಣಿಕೂರುತ್ತೇನೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್‌ಒ., ಹಿಮ್ಸ್‌ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ತಾಲೂಕು ವೈದ್ಯಾಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಖಾಸಗಿಆಸ್ಪತ್ರೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಬಾರಿಶುಲ್ಕ ವಸೂಲಿ ಮಾಡುತ್ತಿದ್ದರೂ ಜಿಲ್ಲಾಡಳಿತ ಕ್ರಮಕೈಗೊಂಡಿಲ್ಲ . ಜಿಲ್ಲಾಡಳಿತಕ್ಕೆ ಸಾಧ್ಯವಾಗದಿದ್ದರೆ ಜನರೇಖಾಸಗಿ ಆಸ್ಪತ್ರೆಗಳಿಗೆ ಬುದ್ಧಿ ಕಲಿಸಿ ಎಂದು ಕರೆನೀಡಬೇಕಾದೀತು ಎಂದರು.

ಟಾಪ್ ನ್ಯೂಸ್

tdy-5

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

10

ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?

3mangalore

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಪ್ರಹ್ಲಾದ ಜೋಶಿ

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

2canberra

ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನ

9

ಹೆಪಟೈಟಿಸ್‌- ಮಕ್ಕಳ ಸಾಂಕ್ರಾಮಿಕ ಕಾಯಿಲೆ; ಗಮನಿಸಬೇಕಾದ ಲಕ್ಷಣಗಳೇನು?

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಸನ: ವಿವಾಹ ವಿಚ್ಛೇದನ ಪ್ರಕರಣ; ಕೋರ್ಟ್‌ ಆವರಣದಲ್ಲೇ  ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ಹಾಸನ: ವಿವಾಹ ವಿಚ್ಛೇದನ ಪ್ರಕರಣ; ಕೋರ್ಟ್‌ ಆವರಣದಲ್ಲೇ  ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ಐವತ್ತು ಎಕರೆಗೂ ಹೆಚ್ಚು ಬೆಳೆ ಮಣ್ಣು ಪಾಲು

ಐವತ್ತು ಎಕರೆಗೂ ಹೆಚ್ಚು ಬೆಳೆ ಮಣ್ಣು ಪಾಲು

1-asddsadasd

ದೋಣಿಗಲ್ ಸಮೀಪ ಭೂಕುಸಿತ: ಪರಿಹಾರಕ್ಕೆ ಆಗ್ರಹಿಸಿ ರಾ. ಹೆದ್ದಾರಿ ತಡೆದು ಆಕ್ರೋಶ

TDY-15

13 ರಿಂದ ಹರ್‌ ಘರ್‌ ಮೇ ತಿರಂಗಾ ಅಭಿಯಾನ

ಪ್ರವಾಸಿಗರನ್ನು ಸೆಳೆದ ದ್ವಾರಸಮುದ್ರ ಕೆರೆ

ಪ್ರವಾಸಿಗರನ್ನು ಸೆಳೆದ ದ್ವಾರಸಮುದ್ರ ಕೆರೆ

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

tdy-5

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

10

ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?

3mangalore

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಪ್ರಹ್ಲಾದ ಜೋಶಿ

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

2canberra

ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.