ಎರಡು ದಶಕದಿಂದ ಉಚಿತ ಯೋಗ ತರಬೇತಿ

ವಿವೇಕಾನಂದ ಯೋಗ ಕೇಂದ್ರದಿಂದ ನಿತ್ಯ 150 ಜನರಿಂದ ಯೋಗಾಭ್ಯಾಸ

Team Udayavani, Jun 21, 2019, 1:04 PM IST

hasan-tdy-1..

ಚನ್ನರಾಯಪಟ್ಟಣ ವಿವೇಕಾನಂದ ಯೋಗ ಕೇಂದ್ರದಲ್ಲಿ ಉಚಿತವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತರಬೇತಿ ನೀಡಲಾಗುತ್ತಿದೆ.

ಚನ್ನರಾಯಪಟ್ಟಣ: ಯೋಗಕ್ಕೆ ವಿಶ್ವಮಟ್ಟದ ಸ್ಥಾನ ದೊರೆತ ಮೇಲೆ ಯೋಗ ತರಬೇತಿ ನೀಡಿ ಹಣ ಸಂಪಾದನೆಗೆ ಮುಂದಾಗುತ್ತಿವ ಸಂಸ್ಥೆಯ ಸಂಖ್ಯೆ ಹೆಚ್ಚುತ್ತಿರುವಾಗ ಪಟ್ಟಣದ ವಿವೇಕಾನಂದ ಯೋಗ ತರಬೇತಿ ಕೇಂದ್ರ ಸಾರ್ವಜನಿಕರಿಗೆ ನಿತ್ಯ ಉಚಿತವಾಗಿ ಯೋಗ ತರಬೇತಿಯನ್ನು ಎರಡು ದಶಕದಿಂದ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿದೆ.

ಪಟ್ಟಣದಲ್ಲಿನ ವಿವೇಕಾನಂದ ಯೋಗ ತರಬೇತಿ ಕೇಂದ್ರ ಆರು ವರ್ಷದ ಮಗುವಿನಿಂದ ಅರವತ್ತು ವರ್ಷ ವಯೋವೃದ್ಧರ ವರೆಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದೆ. ಜಾತಿ ಹಾಗೂ ವಯಸ್ಸಿನ ಭೇದವಿಲ್ಲದೇ ಆಸಕ್ತಿದಾಯಕರು ತರಬೇತಿ ಪಡೆಯ ಬಹುದಾಗಿದ್ದು ರೋಗದಿಂದ ಮುಕ್ತರಾಗಬಹುದು.

ಯೋಗ ಪ್ರಾಣಯಾಮ: ನಿತ್ಯ ಬೆಳಗ್ಗೆ 5.30 ರಿಂದ 7.00 ಗಂಟೆಯ ವರೆಗೆ ಗಾಂಧಿವೃತ್ತದಲ್ಲಿನ ಶಾಲಿನಿ ವಿದ್ಯಾಸಂಸ್ಥೆ ಆವರಣದಲ್ಲಿನ ವಿವೇಕಾನಂದ ಯೋಗ ತರಬೇತಿ ಕೇಂದ್ರದಲ್ಲಿ ತರಬೇತಿದಾರರಿಗೆ ಪ್ರಾಣ ಯಾಮ ಹಾಗೂ ಯೋಗಾಭ್ಯಾಸ ಹೇಳಿ ಕೊಡು ತ್ತಾರೆ, ನಿತ್ಯವೂ ಸುಮಾರು 150 ಕ್ಕೂ ಹೆಚ್ಚು ಮಂದಿ ಯೋಗ ತರಬೇತಿ ಪಡೆಯುತ್ತಾರೆ, ತರಬೇತಿ ಪಡೆದ ಕೆಲವರು ತಮ್ಮ ಮನೆಯಲ್ಲಿ ನಿತ್ಯ ಅಭ್ಯಾಸ ಮಾಡಿ ಕೊಳ್ಳುತ್ತಿದ್ದಾರೆ, ಇದುವರೆಗೆ ಸುಮಾರು ಎರಡರಿಂದ ಐದು ಸಾವಿರ ಮಂದಿಗೆ ಉಚಿತವಾಗಿ ತರಬೇತಿ ಪಡೆಯಲಾಗಿದೆ.

ವರ್ಷದಿಂದ ವರ್ಷಕ್ಕೆ ದ್ವಿಗುಣ: 20 ವರ್ಷದಿಂದ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದ ವೇಳೆ ಶಾಲೆಯ ಕೆಲ ವಿದ್ಯಾರ್ಥಿ ಮಾತ್ರ ಯೋಗ ತರ ಬೇತಿಗೆ ಇಷ್ಟಪಟ್ಟು ಆಗಮಿಸುತ್ತಿದ್ದರು. ಇವರೊಟ್ಟೆಗೆ ಬೆರಳೆಣಿಕೆ ಯಷ್ಟು ಮಂದಿ ಪಾಲಕರು ಆಗಮಿಸಿ ಯೋಗಾಭ್ಯಾಸ ಮಾಡುತ್ತಿದ್ದರು. ಹೀಗೆ ಪ್ರತಿ ವರ್ಷವೂ ನೂರಾರು ಮಂದಿ ತರಬೇತಿ ಪಡೆಯುತ್ತಿ ದ್ದಾರೆ. ಕಳೆದ 4 ವರ್ಷ ದಿಂದ ಹಿಂದೆ ಯೋಗಕ್ಕೆ ವಿಶ್ವ ಮಟ್ಟದಲ್ಲಿ ಸ್ಥಾನ ದೊರೆತ ಮೇಲೆ ಸಾಕಷ್ಟು ಮಂದಿ ತರಬೇತಿ ಕೇಂದ್ರಕ್ಕೆ ಆಗಮಿಸಿ ಯೋಗ ಕಲಿಕೆಗೆ ಮುಂದಾಗಿದ್ದಾರೆ.

ಎಲ್ಲರಿಗೂ ಉಚಿತ: ಪಟ್ಟಣದ ಪ್ರತಿಷ್ಠಿತ ಕ್ಲಬ್‌ನಲ್ಲಿ ಸದಸ್ಯತ್ವ ಪಡೆದಿರುವವರು ಯೋಗಭ್ಯಾಸಕ್ಕಾಗಿ ಮಾಸಿಕ ಸಾವಿರಾರು ರೂ. ಹಣಕೊಟ್ಟು ಹೊರಗಿ ನಿಂದ ಯೋಗ ತರಬೇತಿದಾರರ ಕರೆಸಿ ಯೋಗ ತರ ಬೇತಿ ಪಡೆಯುತ್ತಿ ದ್ದಾರೆ, ಯಾವುದೆ ಪ್ರಚಾರಲ್ಲದೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ವೇಕಾನಂದ ಯೋಗ ಕೇಂದ್ರಕ್ಕೆ ಮಧ್ಯಮವರ್ಗ ಹಾಗೂ ಬಡವರು ಆಗಮಿಸಿ ಯೋಗ ತರಬೇತಿ ಪಡೆಯಬಹುದಾಗಿದೆ. ರೋಗಕ್ಕೆ ತುತ್ತಾಗಿ ಮಾತ್ರೆ ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿ ಣಾಮ ಬೀರುತ್ತದೆ. ಆದ್ದ ರಿಂದ ಯೋಗದ ಮೊರೆ ಹೋಗುತ್ತಿದ್ದು ಸಕ್ಕರೆ ಕಾಯಿಲೆ, ಗಂಟಲು, ಮಂಡಿ ನೋವು ಹಾಗೂ ಇತರೆ ಕಾಯಿಲೆ ಇರುವವರಿಗೆ ಅಗತ್ಯ ವಿರುವ ಆಸನ ಹೇಳಿಕೊಡಲಾಗುತ್ತದೆ, ಸೂರ್ಯ ನಮ ಸ್ಕಾರ, ತಂಡಾಸನ, ಅರ್ಧ ಚಕ್ರಾ ಸನ, ರಾಗಿಬೀಸು ವಾಸನ, ಮುಂಡೂಕಾಸನ, ವೃತ್ತ ಪಾದಾಸನ ಹೀಗೆ ವಿವಿಧ ಬಗೆ 100ಕ್ಕೂ ಹೆಚ್ಚು ಆಸನವನ್ನು ನಿತ್ಯ ಹೇಳಿಕೊಡಲಾಗುತ್ತದೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.