ಹಾಲು ಖರೀದಿ ರಜೆ ಘೋಷಣೆಗೆ ವಿರೋಧ


Team Udayavani, Apr 2, 2020, 2:17 PM IST

ಹಾಲು ಖರೀದಿ ರಜೆ ಘೋಷಣೆಗೆ ವಿರೋಧ

ಹಾಸನ: ಹಾಲು ಉತ್ಪಾದಕರಿಂದ ಹಾಲು ಖರೀದಿಗೆ ವಾರದಲ್ಲಿ ಮೂರು ದಿನ ರಜೆ ಘೋಷಣೆಯ ಪ್ರಸ್ತಾಪವನ್ನು ಸರ್ಕಾರ ತಿರ ಸ್ಕರಿಸಬೇಕು. ಯಾವುದೇ ಕಾರಣಕ್ಕೂ ರೈತರಿಂದ ಹಾಲು ಶೇಖರಣೆ ಮಾಡುವುದನ್ನು ರಾಜ್ಯದ ಹಾಲು ಒಕ್ಕೂಟಗಳು ನಿಲ್ಲಿಸ ಬಾರದು ಎಂದು ಕರ್ನಾಟಕ ಹಾಲು ಮಹಾ ಮಂಡಳದ ನಿರ್ದೇಶಕರೂ ಆದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ನಿಗಿದಿತ ಪ್ರಮಾಣದಲ್ಲಿ ಹಾಲು ಮಾರಾಟವಾಗುತ್ತಿಲ್ಲ. ಕೆಎಂಎಫ್ ಮಾ.28ರಂದು ನಡೆಸಿದ ಸಭೆಯಲ್ಲಿ ಆಯ್ದ ದಿನಗಳಲ್ಲಿ ವಾರದಲ್ಲಿ ಮೂರು ಸರದಿಯಲ್ಲಿ ರೈತರಿಂದ ಹಾಲು ಖರೀದಿಸುವುದನ್ನು ನಿಲ್ಲಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಸರ್ಕಾರದ ಅನುಮತಿ ಕೋರಿದೆ. ಆದರೆ ರೈತರಿಂದ ಹಾಲು ಖರೀದಿಗೆ ರಜೆ ಘೋಷಣೆ ಮಾಡುವಂತಹ ತೀರ್ಮಾನಕ್ಕೆ  (ಹಾಮುಲ್‌)ಯಾವುದೇ ಕಾರಣಕ್ಕೂ ಹಾಲು ಖರೀದಿಯ ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿತ್ಯ 69 ಲಕ್ಷ ಲೀ. ಹಾಲು ಶೇಖರಣೆ: ರಾಜ್ಯದ 14 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಈಗ ಪ್ರತಿದಿನ 69 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ 50ಲಕ್ಷ ಲೀ. ಮಾರಾಟವಾಗುತ್ತಿದ್ದು, ಈಗ ರಾಜ್ಯದಲ್ಲಿ 12 ಲಕ್ಷ ಲೀ. ಹಾಲನ್ನು ಮಾತ್ರ ಪುಡಿ ಮತ್ತಿತರ ಉತ್ಪನ್ನಗಳಿಗೆ ಪರಿವರ್ತಿಸಲು ಆವಕಾಶ ಹಾಲನ್ನು ಮಾರಾಟ ಮಾಡಲು ಅಥವಾ ಇತರೆ ಉತ್ಪನ್ನಗಳಿಗೆ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ವಾರದಲ್ಲಿ ಮೂರು ಸರದಿಯ ರಜೆ ಘೋಷಣೆ ಮಾಡಬೇಕೆಂದು ಕೆಎಂಎಫ್ ಸಭೆ ತೀರ್ಮಾನಿಸಿದೆ. ಇಂತಹ ತೀರ್ಮಾನ ಜಾರಿಯಾದರೆ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಗ್ರಾಮೀಣ ಪ್ರದೇಶದ ರೈತರಿಗೆ ತೊಂದರೆಯಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ನಂದಿನಿ ಹಾಲಿನ ಬೇಡಿಕೆ ಕುಸಿದಿರುವುದರಿಂದ ಬೇರೆ ಹಾಲು ಒಕ್ಕೂಟಗಳು ಬೆಂಗಳೂರು ಮಹಾನಗರದಲ್ಲಿ ಹಾಲು ಮಾರಾಟಮಾಡಬಾರದು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ರೈತರಿಗೆ ಸಂಕಷ್ಟ: ರಾಜ್ಯದಲ್ಲಿ 13 ಲಕ್ಷ ರೈತ ಕುಟುಂಬಗಳು ಡೇರಿಗೆ ಹಾಲು ಹಾಕಿ ಕೊಂಡು ಜೀವನ ನಡೆಸುತ್ತಿದ್ದು, ಹಾಲು ಖರೀದಿ ರಜೆ ಘೋಷಿಸಿದರೆ ರಾಸುಗಳಿಗೆ ಮೇವು ಪೂರೈಕೆ ಹಾಗೂ ಕುಟುಂಬ ನಿರ್ವ ಹಣೆಗೆ ಏನು ಮಾಡಬೇಕು ಎಂದರು. ಹಾಲು ಒಕ್ಕೂಟಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು. ಹಾಸನ ಹಾಲು ಒಕ್ಕೂಟದ ವ್ಯವ ಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಮೇ 28 ಜನ್ಮ ಜಯಂತಿ:ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ…ವಿನಾಯಕ ದಾಮೋದರ ಸಾವರ್ಕರ್‌

ಮೇ 28 ಜನ್ಮ ಜಯಂತಿ:ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ…ವಿನಾಯಕ ದಾಮೋದರ ಸಾವರ್ಕರ್‌

ಸಿರಾಜ್ ಉತ್ತಮ ಬೌಲರ್..: ಆರ್ ಸಿಬಿ ವೇಗಿಯ ಬೆಂಬಲಕ್ಕೆ ನಿಂತ ಮೈಕ್ ಹೆಸನ್

ಸಿರಾಜ್ ಉತ್ತಮ ಬೌಲರ್..: ಆರ್ ಸಿಬಿ ವೇಗಿಯ ಬೆಂಬಲಕ್ಕೆ ನಿಂತ ಮೈಕ್ ಹೆಸನ್

ಭಾರತದಲ್ಲಿ 24ಗಂಟೆಯಲ್ಲಿ 2,685 ಕೋವಿಡ್ ಪ್ರಕರಣ ದೃಢ, 33 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,685 ಕೋವಿಡ್ ಪ್ರಕರಣ ದೃಢ, 33 ಮಂದಿ ಸಾವು

4accident

ಗುಂಡ್ಲುಪೇಟೆ: ಅಪರಿಚಿತ ವಾಹನ ಢಿಕ್ಕಿಯಾಗಿ ಇಬ್ಬರು ಸಾವು

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

3school

ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಸಕಲೇಶಪುರ-ಬಿಕ್ಕೋಡು ರಸ್ತೆ ಬಂದ್‌: ಕಿರಿಕಿರಿ

ಹೊಳೆನರಸೀಪುರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

ಹೊಳೆನರಸೀಪುರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

ಡೇರಿ ಚುನಾವಣೆ: ಚುನಾವಣಾಧಿಕಾರಿಯೇ ಗೈರು

ಡೇರಿ ಚುನಾವಣೆ: ಚುನಾವಣಾಧಿಕಾರಿಯೇ ಗೈರು

Untitled-1

ಕಾಡಾನೆ ಸಮಸ್ಯೆ: ವಾರದೊಳಗೆ ಸಭೆ ನಿರೀಕ್ಷೆ

ಕೋಡಿಮಠ ಸರ್ವ ಜನಾಂಗದ ಶಾಂತಿಯ ತೋಟ

ಕೋಡಿಮಠ ಸರ್ವ ಜನಾಂಗದ ಶಾಂತಿಯ ತೋಟ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಮೇ 28 ಜನ್ಮ ಜಯಂತಿ:ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ…ವಿನಾಯಕ ದಾಮೋದರ ಸಾವರ್ಕರ್‌

ಮೇ 28 ಜನ್ಮ ಜಯಂತಿ:ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ…ವಿನಾಯಕ ದಾಮೋದರ ಸಾವರ್ಕರ್‌

7neharu

ನೆಹರು ವಿಶ್ವಕಂಡ ಅಪರೂಪದ ದಾರ್ಶನಿಕ

6sales

ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ

ಸಿರಾಜ್ ಉತ್ತಮ ಬೌಲರ್..: ಆರ್ ಸಿಬಿ ವೇಗಿಯ ಬೆಂಬಲಕ್ಕೆ ನಿಂತ ಮೈಕ್ ಹೆಸನ್

ಸಿರಾಜ್ ಉತ್ತಮ ಬೌಲರ್..: ಆರ್ ಸಿಬಿ ವೇಗಿಯ ಬೆಂಬಲಕ್ಕೆ ನಿಂತ ಮೈಕ್ ಹೆಸನ್

5protest

ತಾಪಂ ಎದುರು ನಿವೃತ್ತ ಗ್ರಾಪಂ ಸಿಬ್ಬಂದಿ ಸತ್ಯಾಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.