Udayavni Special

ಜಿಲ್ಲೆಗೆ 250 ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಮಂಜೂರು


Team Udayavani, May 9, 2021, 8:41 PM IST

9-7

ಕಲಬುರಗಿ: ಕೊರೊನಾ ಎರಡನೆ ಅಲೆ ಯಿಂದ ರಾಜ್ಯದಲ್ಲಿ ಸೃಷ್ಟಿಯಾಗಿರುವ ಆಕ್ಸಿಜನ್‌ ಬೆಡ್‌ ಕೊರತೆ ನಿವಾರಣೆ ನಿಟ್ಟಿನಲ್ಲಿ ಬೋಯಿಂಗ್‌ ಇಂಡಿಯಾ ಸಂಸ್ಥೆ ಎರಡು ಆಸ್ಪತ್ರೆ ಸ್ಥಾಪಿಸಲು ಮುಂದೆ ಬಂದಿದ್ದು, ಜಿಲ್ಲೆಗೆ 250 ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಸ್ಥಾಪಿಸಲು ಸಂಸ್ಥೆ ಮಂಜೂರಾತಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು. ನಗರದ ಐವಾನ್‌-ಎ-ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯಲಹಂಕದಲ್ಲಿ 200 ಆಕ್ಸಿಜನ್‌ ಬೆಡ್‌ ಸ್ಥಾಪಿಸಲು ಬೋಯಿಂಗ್‌ ಇಂಡಿಯಾ ಸಂಸ್ಥೆ ತಿರ್ಮಾನಿಸಿದ್ದು, ಜಿಲ್ಲೆಯಲ್ಲಿ 250 ಬೆಡ್‌ಗಳ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಿದೆ ಎಂದರು.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ದಲ್ಲಿ ಆಸ್ಪತ್ರೆಗಳ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಂಸದ ಡಾ| ಉಮೇಶ ಜಾಧವ ಹಾಗೂ ಎಲ್ಲ ಶಾಸಕರ ಶ್ರಮದ ಫ‌ಲವಾಗಿ ಹೊಸ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿ ಸಿಕ್ಕಿದೆ ಎಂದರು.

ಹೊಸ ಆಸ್ಪತ್ರೆಯನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎನ್ನುವುದರ ಕುರಿತು ರವಿವಾರದಿಂದಲೇ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಬೋಯಿಂಗ್‌ ಇಂಡಿಯಾದವರು ರೆಡಿಮೆಡ್‌ ಸೆಟ್‌ ಅಪ್‌ ತಂದು, ಶೀಘ್ರ ಆಸ್ಪತ್ರೆ ಕಾಮಗಾರಿ ಆರಂಭಿಸಲಿದ್ದಾರೆ. ಆರು ತಿಂಗಳೊಳಗೆ ಆಸ್ಪತ್ರೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಹೆಚ್ಚುತ್ತಿದೆ ಆಕ್ಸಿಜನ್‌ ಬೇಡಿಕೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್‌ ಬೇಡಿಕೆ ಹೆಚ್ಚುತ್ತಿದೆ. ಆರಂಭದಲ್ಲಿ 10 ಕೆಎಲ್‌ ಆಕ್ಸಿಜನ್‌ ಬಳಕೆ ಆಗುತ್ತಿತ್ತು. ಈಗ 15ರಿಂದ 25 ಕೆಎಲ್‌ ಆಕ್ಸಿಜನ್‌ಗೆ ಬೇಡಿಕೆ ಬರುತ್ತಿದೆ. ಮುಂದೆ 30 ಕೆಎಲ್‌ ಆಕ್ಸಿಜನ್‌ ಅವಶ್ಯಕತೆ ಆಗಲಿದೆ. ಜಿಲ್ಲೆಗೆ ವಿವಿಧ ಮೂಲಗಳಿಂದ ಆಕ್ಸಿಜನ್‌ ಲಭ್ಯವಿದೆ. ಆದರೆ, ಆಕ್ಸಿಜನ್‌ ತುಂಬಿಕೊಂಡು ಬರುವ ಟ್ರೈಯೋಜನ್‌ ಟ್ಯಾಂಕರ್‌ಗಳು ಸಿಗುತ್ತಿಲ್ಲ. ಇದೇ ಸಮಸ್ಯೆಗೆ ಮೂಲ ಎಂದು ಸಚಿವರು ವಿವರಿಸಿದರು. ಜಿಲ್ಲೆಗೆ ಶನಿವಾರ ಆಕ್ಸಿಜನ್‌ ತುಂಬಿದ ಒಂದು ಟ್ಯಾಂಕರ್‌ ಬಂದಿದೆ. ಶೀಘ್ರದಲ್ಲಿ ಮತ್ತೂಂದು ಟ್ಯಾಂಕರ್‌ ಬರಲಿದೆ. ಇನ್ನೆರಡು ದಿನಗಳ ಈ ಆಕ್ಸಿಜನ್‌ ಟ್ಯಾಂಕರ್‌ ಪ್ರತಿದಿನ ಆಕ್ಸಿಜನ್‌ ಪೂರೈಸಲಿದೆ. ಕೆಕೆಆರ್‌ಡಿಬಿಯಿಂದ ಹೊಸದಾಗಿ ಟ್ರೈಯೋಜನ್‌ ಟ್ಯಾಂಕರ್‌ ಖರೀದಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,600 ಕೋವಿಡ್‌ ಬೆಡ್‌ಗಳಿವೆ. ಇವುಗಳ ಪೈಕಿ 440 ಆಕ್ಸಿಜನ್‌ ಬೆಡ್‌ ಮತ್ತು 378 ಐಸಿಯು ಬೆಡ್‌ಗಳು ಲಭ್ಯ ಇವೆ. ಸೌಮ್ಯ ಲಕ್ಷಣದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ 500 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಕ್ಸಿಜನ್‌ ಸಮಸ್ಯೆಗೆ ತುರ್ತು ಪರಿಹಾರವಾಗಿ ಆಕ್ಸಿಜನ್‌ ಕಾನ್ಸ್‌ಂಟ್ರೇಟರ್‌ ಖರೀದಿಸಿದ್ದು, ಸೋಮವಾರ ಜಿಲ್ಲೆಗೆ ತಲುಪಲಿವೆ. ತಲಾ ಇಬ್ಬರು ರೋಗಿಗಳಿಗೆ ಒಂದು ಕಾನ್ಸ್‌ಂಟ್ರೇಟರ್‌ನಿಂದ ಆಕ್ಸಿಜನ್‌ ಪೂರೈಸಬಹುದಾಗಿದೆ ಎಂದು ಹೇಳಿದರು.

ರೆಮ್‌ಡೆಸಿವಿಯರ್‌ಗೂ ಪರಿಹಾರ: ಜಿಲ್ಲೆಗೆ ಶನಿವಾರ 200 ವಯಲ್‌ ರೆಮ್‌ಡೆಸಿವಿಯರ್‌ ಇಂಜೆಕ್ಷನ್‌ ಬಂದಿವೆ. ಇಂಜೆಕ್ಷನ್‌ ಕೊರತೆ ಆಗುತ್ತಿರುವುದರಿಂದ  ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಇಂಜೆಕ್ಷನ್‌ ಒದಗಿಸುವಂತೆ ಡಿಸಿಎಂ ಅಶ್ವತ್ಥನಾರಾಯಣ ಅವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯ ಕೋಟಾ ಹೆಚ್ಚಿಸುವಂತೆಯೂ ಬೇಡಿಕೆ ಮುಂದಿಡಲಾಗಿದೆ ಎಂದರು.

ರಾಜ್ಯದಲ್ಲೇ ಎರಡು ಕಡೆ ರೆಮ್‌ ಡೆಸಿವಿಯರ್‌ ಇಂಜೆಕ್ಷನ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ರೆಮ್‌ಡೆಸಿವಿಯರ್‌ ಉತ್ಪಾದನೆ ಮೇ 17ರಿಂದ ಶುರುವಾಗಲಿದೆ. ಉತ್ಪಾದನೆಯಾದ 72 ಗಂಟೆಯಲ್ಲಿ ಇಂಜೆಕ್ಷನ್‌ ಬಳಕೆಗೆ ಬರಲಿದೆ. ಹೀಗಾಗಿ ರೆಮ್‌ಡೆಸಿವಿಯರ್‌ ಕೊರತೆ ಸಂಪೂರ್ಣ ಪರಿಹಾರವಾಗಲಿದೆ ಎಂದರು.

ಸಂಸದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಶಶೀಲ ನಮೋಶಿ, ಬಿ.ಜಿ. ಪಾಟೀಲ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ ° ಇದ್ದರು.

ಟಾಪ್ ನ್ಯೂಸ್

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

2022ಕ್ಕೆ ಎಲ್ಲಾ 36 ರಫೇಲ್‌ ಭಾರತಕ್ಕೆ : ಭಾರತೀಯ ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ದರಾಗಿ: ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ

ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ದರಾಗಿ: ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ

ಸದ್ಗಹಜಹಗ್ದಸಅಸದ್ಗಹ

ಲಿಂಗರಾಜಪ್ಪ  ಅಪ್ಪ ಮನೆಗೆ ತೆರಳಿ ಖಂಡ್ರೆ ಸಾಂತ್ವಾನ

zsdfghn zxcvbvcxz

ಎರಡನೇ ಡೋಸ್‌ ಲಸಿಕೆಗೆ ಹಿಂದೇಟು

ರತಯುಉಯತರತಯು

ಮುಲ್ಲಾಮಾರಿ ನದಿಗೆ 300 ಕ್ಯೂಸೆಕ್‌ ನೀರು ಬಿಡುಗಡೆ

sertyuytr4567ytr

ಮಹಿಳಾ ರೋಗಿ ಸಾವಿನ ಕಾರಣ ಬಹಿರಂಗಪಡಿಸಿ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Points of Light Award

ಯೋಗ ಪ್ರೋಡೈಜಿ ಈಶ್ವರ್‌ ಶರ್ಮಾಗೆ ಪಾಯಿಂಟ್ಸ್‌ ಆಫ್ ಲೈಟ್‌ ಪ್ರಶಸ್ತಿ

desiswara

ಯಾರು ಬೇಕಾದರೂ ಕತೆಗಾರ,  ವಿನ್ಯಾಸಗಾರರಾಗಬಹುದು: ನಾಗರಾಜ್‌ ವಸ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.