ಕೊಡಗಿನ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ

Team Udayavani, Aug 18, 2019, 5:48 AM IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟು ಅನುಭವಿಸುವಂತಾಗಿದೆ. ಮತ್ತೂಂದೆಡೆ ವಿವಿಧ ಮೂಲ ಸೌಲಭ್ಯಗಳ ಹಾನಿ, ಮನೆ ಕುಸಿತ ಮುಂತಾದವುಗಳಿಂದಲೂ ಅಪಾರ ಪ್ರಮಾಣ ಹಾನಿ ಸಂಭವಿಸಿದ್ದು, ಪ್ರಾಥಮಿಕ ವರದಿಯಂತೆ ಸುಮಾರು 579 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.ಇದು ತುರ್ತಾಗಿ ನಡೆಸಿದ ಸಮೀಕ್ಷೆಯಾಗಿದ್ದು, ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಬೆಳೆಹಾನಿ ವಿವರ

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ನಷ್ಟವಾಗಿದ್ದು ಕೃಷಿಕರಿಗೆ ಮಳೆ ಬರೆ ಎಳೆದಿದೆ. 3,623 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿ 4.52 ಕೋಟಿಯಷ್ಟು ನಷ್ಟವಾಗಿದೆ. 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ನಾಶವಾಗಿದ್ದು ಅಂದಾಜು 51.85 ಕೋಟಿ ನಷ್ಟವಾಗಿದೆ. 6,350 ಹೆಕ್ಟೇರ್‌ ಪ್ರದೇಶದಲ್ಲಿ ಕಾಳು ಮೆಣಸು ಬೆಳೆ ನೆಲಕಚ್ಚಿದ್ದು 66.65 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಿದೆ.

ಅದೇ ರೀತಿ 40 ಹೆಕ್ಟೇರ್‌ನಲ್ಲಿ ಜೋಳ, 1,579 ಹೆಕ್ಟೇರ್‌ನಲ್ಲಿ ಅಡಿಕೆ, 904 ಹೆಕ್ಟೇರ್‌ ಶುಂಠಿ, 2,241 ಹೆಕ್ಟೇರ್‌ನಲ್ಲಿ ಬಾಳೆ, 1,806 ಹೆಕ್ಟೇರ್‌ ಏಲಕ್ಕಿ, 380 ಹೆಕ್ಟೇರ್‌ನಲ್ಲಿ ವಿವಿಧ ತರಕಾರಿ ಬೆಳೆ, 18 ಹೆಕ್ಟೇರ್‌ನಲ್ಲಿ ಮಾಡಿದ್ದ ಮೀನುಗಾರಿಕೆ ಕೃಷಿಗೆ ಹಾನಿಯಾಗಿದ್ದು, ಅತಿವೃಷ್ಟಿಯಿಂದ ಒಟ್ಟು 1,18,975 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆÙ ಹಾನಿಗೀಡಾಗಿದ್ದು, ಒಟ್ಟು 266.52 ಕೋಟಿಯಷ್ಟು ಫ‌ಸಲು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದ ರಸ್ತೆ, ಸರ್ಕಾರಿ ಕಟ್ಟಡ, ಕೆರೆ ಹಾಗೂ ಮೋರಿಗಳಿಗೂ ಹಾನಿಯಾಗಿದ್ದು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 81 ಕಾಮಗಾರಿ ಹಾನಿಯಾಗಿ 10023.45 ಲಕ್ಷ, ಗ್ರಾಮೀಣಾಭಿವೃದ್ಧಿ ಎಂಜಿನಿಯರಿಂಗ್‌ ವಿಭಾಗದ 786 ಕಾಮಗಾರಿಗೆ 9578ಲಕ್ಷ, 75 ಅಂಗನವಾಡಿ ಕಟ್ಟಡ ಹಾನಿಗೆ 150ಲಕ್ಷ, 168 ಶಾಲಾ ಕಟ್ಟಡ ಹಾನಿಗೆ 252ಲಕ್ಷ, 14 ಆಸ್ಪತ್ರೆ ಕಟ್ಟಡಗಳಿಗೆ ಹಾನಿಯಾಗಿ 21ಲಕ್ಷ, ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ 131 ಕಾಮಗಾರಿಗೆ 300ಲಕ್ಷ ಸಣ್ಣ ನೀರಾವರಿ ಇಲಾಖೆ 27 ಕಾಮಗಾರಿಗೆ 675ಲಕ್ಷ, ಸೆಸ್ಕ್ನ 1,467 ಕಾಮಗಾರಿಗೆ ಹಾನಿಯಾಗಿ 61.31 ಲಕ್ಷ, ನಗರಾಭಿವೃದ್ಧಿ ಇಲಾಖೆಯ 223 ಕಾಮಗಾರಿಗೆ 3305.50ಲಕ್ಷ, ಪಿಎಂಜಿಎಸ್‌ವೈನ 15 ಕಾಮಗಾರಿಗೆ 557.30ಲಕ್ಷ, ರಾಷ್ಟ್ರೀಯ ಹೆದ್ದಾರಿಯಲ್ಲಿ 32 ಸ್ಥಳಗಳಲ್ಲಿ ಭೂಕುಸಿತ ಮತ್ತಿತರ ಕಾಮಗಾರಿ ಹಾನಿಯಾಗಿ 5884 ಲಕ್ಷ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1 ಕಾಮಗಾರಿಗೆ ಹಾನಿಯಾಗಿ 4.20ಲಕ್ಷ ರೂ.ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಒಟ್ಟಾರೆಯಾಗಿ ವಿವಿಧ ಇಲಾಖೆಗಳ 3,020 ಕಾಮಗಾರಿಗಳಿಗೆ ಹಾನಿಯಾಗಿದ್ದು, 305.91 ಕೋಟಿಯಷ್ಟು ನಷ್ಟವಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಹಾನಗರ: ನಗರಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ನಗರದ ಶಿವ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ...

  • ಎಲ್ಇಡಿ ದೀಪಗಳು ಕೇವಲ ಕಾರುಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ಈ ಬಲುºಗಳು ವರ್ಣರಂಜಿತ ಮನೆಗೆ ಹೆಚ್ಚಿನ ಅಂದವನ್ನು ನೀಡುವುದರಲ್ಲಿ...

  • ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ....

  • ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ....

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...