ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ: ಕಾವೇರಿಸೇನೆ ಅಸಮಾಧಾನ

Team Udayavani, Jan 24, 2020, 12:00 AM IST

ಮಡಿಕೇರಿ: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನವಗ್ರಾಮ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಹನನ ಮಾಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾವೇರಿಸೇನೆ ಸಂಘಟನೆ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಕುಶಾಲನಗರದ ಬಸವನಹಳ್ಳಿಯ ಸರ್ವೇ ನಂಬರ್‌ 1/1ರ ಸರ್ಕಾರಿ ಜಾಗದಲ್ಲಿ ನವಗ್ರಾಮ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿಯುವುದರಿಂದ ಅಲ್ಲಿರುವ ಅಣೆಕಟ್ಟೆ ಮತ್ತು ನದಿಯ ನೀರಿನ ಮೂಲಕ್ಕೆ ಧಕ್ಕಯಾಗಲಿದ್ದು, ಅರಣ್ಯ ಸಂರಕ್ಷಣೆಗೂ ಚ್ಯುತಿಯಾಗಲಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಪ್ರಭಾಕರನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬೊಳ್ಳೂರು ಗ್ರಾಮದಲ್ಲಿ 99.40 ಎಕರೆ ಜಾಗವಿದ್ದು, ಅಲ್ಲಿ ಅಕ್ರಮವಾಗಿ ನೂರಾರು ಮನೆಗಳು ತಲೆ ಎತ್ತಿವೆ. ಈ ಜಾಗವು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗವಾಗಿದ್ದರೂ ಅರಣ್ಯ ಇಲಾಖೆಯ ಸಿಬಂದಿ ಈ ಅಕ್ರಮವನ್ನು ಕಂಡೂ ಕಾಣದಂತೆ ನಿದ್ರಾವಸ್ಥೆಗೆ ಜಾರಿರುವುದು ಕಂಡು ಬಂದಿದೆ ಎಂದು ರವಿಚಂಗಪ್ಪ ಆರೋಪಿಸಿದರು. ಮರ ಕಡಿಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಈ ಬಗ್ಗೆ ಸ್ಪಂದಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾವೇರಿಸೇನೆ ಸಂಚಾಲಕ ರವಿ ಚಂಗಪ್ಪ, ಎಚ್ಚರಿಕೆ ನೀಡಿದರು.

ಕಡಿಯಬಾರದು
ಈ ಸಂದರ್ಭ ಮಾತನಾಡಿದ ಕಾವೇರಿಸೇನೆ ಸಂಚಾಲಕ ರವಿ ಚಂಗಪ್ಪ, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನವಗ್ರಾಮ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದು ತೊಲೆಗಳಾಗಿ ಮತ್ತು ಸೌದೆಗಳಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೇ ಬಸವನಹಳ್ಳಯಿಂದ ಅನತಿ ದೂರದಲ್ಲೇ ಹಾರಂಗಿ ಜಲಾಶಯ, ಆನೆಕಾಡು ಮೀಸಲು ಅರಣ್ಯ ಮತ್ತು ಕಾವೇರಿ ನದಿ ಇದ್ದು, ಕಳೆದ ಮೂರು ವರ್ಷಗಳ ಹಿಂದೆ ಆನೆಕಾಡು ಅರಣ್ಯಕ್ಕೆ ಬೆಂಕಿ ಬಿದ್ದು, ಸಂಪೂರ್ಣ ನಾಶವಾಗಿದ್ದು, ಮಳೆಯಿಂದಷ್ಟೇ ಕಾಡು ಚಿಗುರುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಪರಿಸರಕ್ಕೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು ಎಂದು ಒತ್ತಾಯಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ