ಗೌರಿ ಗಣೇಶ ಮೂರ್ತಿಗಳು ಭಗ್ನ: ಅವಧಿಗೆ ಮೊದಲೇ ವಿಸರ್ಜನೆ

Team Udayavani, Sep 12, 2019, 5:41 AM IST

ಗೋಣಿಕೊಪ್ಪಲು: ಪೊನ್ನಂ ಪೇಟೆಯ ಕಾಟ್ರಕೊಲ್ಲಿಯಲ್ಲಿ ಗಜಮುಖ ಗೆಳೆಯರ ಬಳಗ ಆಶ್ರಯದಲ್ಲಿ ಗಣೇಶ ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದ ಕಟ್ಟಡ ಒಂದು ಭಾಗದ ಗೋಡೆ ಕುಸಿತವಾದ ಹಿನ್ನಲೆಯಲ್ಲಿ ಗೌರಿ ಗಣೇಶ ಮೂರ್ತಿಗಳು ಭಗ್ನವಾಗಿದ್ದು, ಇದನ್ನು ನಿಗಧಿತ ಅವಧಿಗೆ ಮುಂಚಿತವಾಗಿ ವಿಸರ್ಜಿಸಲಾಯಿತು.

ಸೋಮವಾರ ರಾತ್ರಿ 9 ಗಂಟೆಗೆ ಮೂರ್ತಿಗಳ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಪ್ರತಿಷ್ಠಾಪನೆ ಮಾಡಿದ್ದ ಮೂರ್ತಿಗಳಿಗೆ ಹಾನಿಯಾಗಿದೆ.

ಮಣ್ಣಿನ ಮೂರ್ತಿಗಳು ಹುಡಿಯಾಗಿದ್ದು, ಅಲಂಕೃತ ಮಂಟಪ ಸಹ ಹಾನಿಯಾಗಿದೆ. ಸೋಮವಾರ ಸಂಜೆ 7:30 ಕ್ಕೆ ಪೂಜೆ ಮುಗಿದು ಅಲ್ಲಿಂದ ಸಮಿತಿಯವರು ತೆರಳಿದ್ದರು. ಗೋಡೆ ಕುಸಿದ ಸಂದರ್ಭ ಆ ಸ್ಥಳದಲ್ಲಿ ಯಾರು ಇಲ್ಲದ ಪರಿಣಾಮ ಜನರಿಗೆ ತೊಂದರೆಯಾಗಿಲ್ಲ. ಮೂರ್ತಿ ವಿಸರ್ಜನೆಯನ್ನು ತಾ. 11ರಂದು ನಡೆಸಲು ನಿಗಧಿಯಾಗಿತ್ತು. ಆದರೆ ಗೋಡೆ ಕುಸಿತದಿಂದ ಮೂರ್ತಿಗಳು ಹುಡಿಯಾಗಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಯಮದಂತೆ ಪೂಜೆ ಸಲ್ಲಿಸಿ ಮೂರ್ತಿಗಳ ಅಳಿದುಳಿದ ಭಾಗವನ್ನು ಬಾಳಾಜಿ ಗ್ರಾಮದ ಕೀರೆ ಹೊಳೆ ನದಿಯಲ್ಲಿ ಸಮಿತಿಯವರು ವಿಸರ್ಜಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ