ಕೋಲದಲ್ಲಿ ಗುಂಡಿನ ದಾಳಿ: ನಾಲ್ವರಿಗೆ ಗಾಯ
Team Udayavani, Apr 12, 2022, 10:05 AM IST
ಸೋಮವಾರಪೇಟೆ: ದೈವದಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಒಂದೇ ಕುಟುಂಬದ ಸದಸ್ಯರಾದ ಜಿ.ಡಿ. ವೀರೇಶ, ಮಹೇಶ, ನಂದೀಶ ಹಾಗೂ ಚಂದ್ರಶೇಖರ್ ಗಾಯಗೊಂಡವರು.
ದೈವದಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ, ವ್ಯಕ್ತಿಯೋರ್ವ ಗುಂಡು ಹಾರಿಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಜನರೇಟರ್ ಬಾಡಿಗೆಗೆ ಪಡೆದು ಪಂದ್ಯ ವೀಕ್ಷಿಸಿದ್ದೆ: ಆರ್ ಸಿಬಿ ಬೌಲರ್ ಆಕಾಶ್ ದೀಪ್
ನಗರಳ್ಳಿ ಗ್ರಾಮದಲ್ಲಿ ಐವರು ಕುಟುಂಬಸ್ಥರು ಸೇರಿ 12 ವರ್ಷಗಳ ಅನಂತರ ಕೋಲ ನಡೆಸಿದ್ದಾರೆ. ಎರಡು ದಿನ ಪೂಜೆ ನಡೆದಿದ್ದು, ಸೋಮವಾರ ಸಂಜೆ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾಗಿದೆ ಎಂದು ಹೇಳಲಾಗಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ
ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ
ಸಿದ್ದರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತ
ಶ್ರೀಗಂಧದ ಮರ ಕಡಿದ ಆರೋಪಿ ಸೆರೆ; ಮತ್ತೊಬ್ಬ ಪರಾರಿ
ಕೊಡಗು ಜಿಲ್ಲೆಯಲ್ಲಿ ಮಳೆ ಇಳಿಮುಖ : ಮುಂದುವರಿದ ಗುಡ್ಡ ಕುಸಿತ