Udayavni Special

ಜಾನುವಾರುಗಳ ಚಿಕಿತ್ಸೆಗೆ ರೈತರ ಪರದಾಟ


Team Udayavani, Mar 29, 2021, 2:53 PM IST

ಜಾನುವಾರುಗಳ ಚಿಕಿತ್ಸೆಗೆ ರೈತರ ಪರದಾಟ

ಮಾಸ್ತಿ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಾಸ್ತಿ ಪಶು ವೈದ್ಯ ಆಸ್ಪತ್ರೆಯಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದ್ದು, ಇದರಿಂದ ಜಾನುವಾರುಗಳಿಗೆ ಸಮರ್ಪಕವಾದ ಚಿಕಿತ್ಸೆ ಸಿಗದ ಕಾರಣ ಗೋಪಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೆರೆಯ ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಾಸ್ತಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಪಶುಗಳಿಗೆ ಸಮರ್ಪಕವಾದ ಪಶು ವೈದ್ಯಕೀಯ ಸೇವೆಸಿಗುತ್ತಿಲ್ಲ. ಪಶು ಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆಯ ಮಾಸ್ತಿ ಪಶು ಆಸ್ಪತ್ರೆಯಲ್ಲಿವೈದ್ಯರು ಸೇರಿದಂತೆ 5 ಹುದ್ದೆಗಳ ಪೈಕಿ ಕೇವಲ ಡಿಗ್ರೂಫ್‌ ನೌಕರನೊಬ್ಬ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರು, ಜಾನುವಾರು ಅಧಿಕಾರಿ, ಪಶು ಸಹಾಯಕರು, ಡಿ.ಗ್ರೂಫ್‌ ನೌಕರ-1, 4 ಹುದ್ದೆ ಖಾಲಿ ಇದೆ. ಮಾಸ್ತಿ ಪಶು ಆಸ್ಪತ್ರೆಯಲ್ಲಿ ಈ ಹಿಂದೆಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕಶ್ರೀರಂಗ ರಾಜು 2019ನೇ ಜುಲೆ„ 16ರಂದು ಬೇರೆಕಡೆಗೆ ವರ್ಗಾವಣೆಯಾದರು. ಅಂದಿನಿಂದಇಂದಿನವರೆಗೂ ಡಿ.ಎನ್‌.ದೊಡ್ಡಿ ಪ್ರಾಥಮಿಕ ಪಶುಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ನಂದೀಶ್‌ಅವರು ಪ್ರಭಾರೆ ಯಾಗಿದ್ದು, ಎರಡೂ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಬ್ಬರೇ ಎಲ್ಲಾ ಕೆಲಸ ಮಾಡುವ ಅನಿವಾರ್ಯ:ವರ್ಷದಲ್ಲಿ 6 ತಿಂಗಳಿಗೊಮ್ಮೆ 2 ಬಾರಿ ಲಸಿಕೆ ಅಭಿಯಾನನಡೆಸುವುದು, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಕುರಿ, ಮೇಕೆ,ಜಾನುವಾರುಗಳು ಮೃತಪಟ್ಟರೆ ಮಹಜರ್‌ ನಡೆಸಿ,ವರದಿ ನೀಡುವುದು. ವಿಮೆ ದೃಢೀಕರಣ ವೈದ್ಯರೇಮಾಡಬೇಕಾಗಿದೆ. ಪಶು ಆಸ್ಪತ್ರೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಕಾಲುಬಾಯಿ ಜ್ವರ ಸೇರಿದಂತೆ ಇನ್ನಿತರೆ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸ ವಾಗಿ ಪರಿಣಮಿಸಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳ ಚಿಕಿತ್ಸೆಗಾಗಿ ಗೋಪಾಲಕರು ಅಲೆದಾಡುವಂತಹ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ರೈತರಿಂದ ದೂರುಗಳು ಕೇಳಿ ಬರುತ್ತಿದೆ.

34 ಹಳ್ಳಿಗೆ ಒಳಪಡುವ ಪಶು ಆಸ್ಪತ್ರೆ: ಮಾಸ್ತಿ ಗ್ರಾಮದ ಪಶು ಆಸ್ಪತ್ರೆ ವ್ಯಾಪ್ತಿಗೆ 34 ಹಳ್ಳಿಗಳುಒಳಪಟ್ಟಿದ್ದು, 2020ರ ಜಾನುವಾರುಗಳ ಜನಗಣತಿಪ್ರಕಾರ ದನಗಳು-4508, ಎಮ್ಮೆ-92,ಕುರಿ-10,406, ಮೇಕೆ-2406, ಹಂದಿ- 193,ನಾಯಿ 802, ಕೋಳಿ-3429 ಮಾಸ್ತಿ ಪಶು ಆಸ್ಪತ್ರೆಯದಾಖಲೆಯಲ್ಲಿ ವರದಿಯಾಗಿದೆ.

ಮಾಸ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಿಂದ ಹಾಲು ಉತ್ಪಾದಕರಸಹಕಾರ ಸಂಘಕ್ಕೆ ಪ್ರತಿ ದಿನ ಸುಮಾರು 2800ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿಯೂ ರೈತರ ಜೀವನಕ್ಕೆ ಆಸರೆಯಾಗಿರುವ ಹೈನೋದ್ಯಮದಲ್ಲಿ ಬಹುತೇಕ ಮಂದಿ ತೊಡಗಿಸಿಕೊಂಡು, ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ,ರೈತರ ಪಾಲಿಗೆ ಆಸರೆಯಾಗಿರುವ ಜಾನುವಾರುಗಳಆರೋಗ್ಯದಲ್ಲಿ ತೊಂದರೆಯಾದರೆ, ಸಮರ್ಪಕಹಾಗೂ ಸಮಯಕ್ಕೆ ಸರಿ ಚಿಕಿತ್ಸೆ ನೀಡಲು ಪಶುಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊತೆಯಿಂದಹೈನೋದ್ಯಮ ರೈತರು ಪರದಾಡುವಂತಾಗಿದೆ ಎಂದು ರೈತರು ದೂರಿದ್ದಾರೆ.

ಶಾಸಕರೇ ಗಮನ ಹರಿಸಿ: ಕೋಚಿಮುಲ್‌ ಅಧ್ಯಕ್ಷರು ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಸಭೆ-ಸಮಾರಂಭಗಳಲ್ಲಿ ಮಾತಾನಾಡುತ್ತಾ,ಬಹುತೇಕ ರೈತರು ಹೆ„ನುಗಾರಿಕೆಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.ತಾಲೂಕಿನಲ್ಲಿ ಹೆಚ್ಚು ಹಾಲು ಪೂರೈಕೆ ಯಾಗುತ್ತಿದೆ.ಅದರಲ್ಲೂ ಮಾಸ್ತಿ ಹಾಲು ಉತ್ಪಾದಕರ ಸಂಘದಿಂದ ಹೆಚ್ಚು ಹಾಲು ಪೂರೈಕೆಯಾಗುತ್ತಿದೆ ಎಂದು ಪ್ರತೀಬಾರಿ ಹೇಳುತ್ತಾರೆ. ಆದರೆ, ಹೈನುಗಾರಿಕೆಯಲ್ಲಿತೊಡಗಿಸಿಕೊಂಡಿರುವ ರೈತರು ತಮ್ಮ ಹಸುಗಳಿಗೆ ಅನಾರೋಗ್ಯವಾದರೆ, ಸಮರ್ಪಕ ಚಿಕಿತ್ಸೆಗೆಪರದಾಡುವಂತಾಗಿದೆ. ಆದ್ದರಿಂದ ಶಾಸಕರು ಗಮನಹರಿಸಿ, ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರುಹಾಗೂ ಸಿಬ್ಬಂದಿ ನೇಮಿಸಲು ಸರ್ಕಾರದ ಗಮನಕ್ಕೆತಂದು ಅನುಕೂಲ ಕಲ್ಪಿಸಬೇಕಾಗಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಮಾಸ್ತಿ ಪಶು ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಕೊರತೆ ಇದೆ. ಇದರಿಂದಜಾನುವಾರುಗಳಿಗೆ ಸಮರ್ಪಕ,ಸಮಯಕ್ಕೆ ಸರಿ ಚಿಕಿತ್ಸೆ ಸಿಗದೆತೊಂದರೆಯಾಗಿದೆ. ಸಿಬ್ಬಂದಿ ಒಬ್ಬರೇಒಬ್ಬರು ಕೆಲಸ ಮಾಡುತ್ತಿದ್ದಾರೆ.ವೈದ್ಯರಿಲ್ಲದೆ ತೊಂದರೆಯಾಗುತ್ತಿದೆ.ಶಾಸಕರು ಇತ್ತ ಗಮನ ಹರಿಸಿ,ಸರ್ಕಾರ ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಿ. ಜಿ.ಎಂ.ನಾರಾಯಣಗೌಡ, ರೈತ

ಮಾಸ್ತಿ ಪಶು ಆಸ್ಪತ್ರೆಯಲ್ಲಿ ಡಿ ಗ್ರೂಪ್‌ 1 ಹೊರತುಪಡಿಸಿದರೆ 4 ಹುದ್ದೆ ಖಾಲಿಇರುವುದು ನಿಜ. ಮಾಲೂರು ತಾಲೂಕಿನಲ್ಲಿ 82ಮಂಜೂರಾತಿಯಲ್ಲಿ 42 ಹುದ್ದೆ ಖಾಲಿಇರುವುದರಿಂದ ಸಿಬ್ಬಂದಿ ಕೊರತೆ ಇದೆ. ಇದರಿಂದರೈತರಿಗೆ ತೊಂದರೆಯಾಗಿದೆ. ವೈದ್ಯರು ಹಾಗೂಸಿಬ್ಬಂದಿ ಕೊರತೆ ನಿವಾರಣೆಯಾದರೆ ಹೈನುಗಾರಿಕೆ ರೈತರಿಗೆ ಅನುಕೂಲವಿದೆ. ಈ ಬಗ್ಗೆ ಪ್ರತಿ ವರ್ಷನೀಡುವ ವರದಿ ಪತ್ರದಲ್ಲಿ ದಾಖಲೆ ಮಾಡಿ, ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ನಾರಾಯಣ ಸ್ವಾಮಿ, ಸಹಾಯಕ ನಿರ್ದೇಶಕ, ಪಶು ಇಲಾಖೆ ಮಾಲೂರು

 

ಮಾಸ್ತಿ ಎಂ.ಮೂರ್ತಿ

ಟಾಪ್ ನ್ಯೂಸ್

ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌

ಕೋವಿಡ್ ನಿರ್ವಹಣೆ ಹಿನ್ನೆಲೆ ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವರ ಸೂಚನೆ‌

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

dxgdg

ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ‌ ಕೈ’ ಎಂಬ ಸಂದೇಶ ನೀಡಿದೆ: ಸಿದ್ದರಾಮಯ್ಯ ಟೀಕೆ

dgsdgse

ಹತೋಟಿಗೆ ಸಿಗದ ಕೋವಿಡ್ : ರಾಜ್ಯದಲ್ಲಿಂದು ಬರೋಬ್ಬರಿ 21,794 ಹೊಸ ಕೇಸ್ ಪತ್ತೆ

ಗಹ್ಗದಸದ

BREAKING : ರಾಜ್ಯದಲ್ಲಿ ಮೇ 4 ರವರೆಗೆ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

Garbage is not disposed

ತಾಯಲೂರಲ್ಲಿ ಕಸ ವಿಲೇವಾರಿ ಮಾಡಿಲ್ಲ

no Treatment for Covid Influencers,

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಇಲ್ಲ

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

MUST WATCH

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

ಹೊಸ ಸೇರ್ಪಡೆ

ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌

ಕೋವಿಡ್ ನಿರ್ವಹಣೆ ಹಿನ್ನೆಲೆ ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವರ ಸೂಚನೆ‌

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಧಕ್ಕೆ ಇಲ್ಲ: ಐಸಿಸಿ

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

dxgdg

ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ‌ ಕೈ’ ಎಂಬ ಸಂದೇಶ ನೀಡಿದೆ: ಸಿದ್ದರಾಮಯ್ಯ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.