ತುಂತುರು ಮಳೆಯಲ್ಲೂ ಭರ್ಜರಿ ವ್ಯಾಪಾರ

Team Udayavani, Aug 9, 2019, 3:30 PM IST

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಬಂಗಾರಪೇಟೆ ಪಟ್ಟಣದ ಮಾರುಕಟ್ಟೆಯಲ್ಲಿ ಮಹಿಳೆಯರು ಹೂ ಖರೀದಿಸಿದರು.

ಬಂಗಾರಪೇಟೆ: ಹಣ್ಣು ಮತ್ತು ಹೂವಿನ ಬೆಲೆ ಹೆಚ್ಚಿದ್ದರೂ ತಾಲೂಕಿನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ತುಂತುರು ಮಳೆಯಲ್ಲೂ ಮಹಿಳೆಯರು ಗುರುವಾರ ಹಬ್ಬದ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ ಕಂಡು ಬಂತು.

ಪಟ್ಟಣದ ಕುವೆಂಪು ವೃತ್ತ, ಬಜಾರ್‌ ಮುಖ್ಯ ರಸ್ತೆಯಲ್ಲಿ ಎಲ್ಲಿ ನೋಡಿದರೂ ವ್ಯಾಪಾರಿಗಳು, ಗ್ರಾಹಕರೇ ತುಂಬಿದ್ದರು. ರೈತರು ವರಮಹಾಲಕ್ಷ್ಮೀ ಮೂರ್ತಿಯನ್ನು ಅಲಂಕರಿಸಲು ಬೇಕಾದ ಸಣ್ಣ ಬಾಳೆ ಕಂದು ತಂದು ಮಾರಾಟ ಮಾಡಿದರೆ, ಹೂ, ಹಣ್ಣು ವ್ಯಾಪಾರಿಗಳು ರಸ್ತೆ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ದರು.

ಪಟ್ಟಣದ ಆಸ್ಪತ್ರೆಯ ಸರ್ಕಲ್ನಿಂದ ಕುವೆಂಪು ರಸ್ತೆಯವರೆಗೂ ತಾತ್ಕಾಲಿಕ ಅಂಗಡಿಗಳು ಭಾರೀ ಸಂಖ್ಯೆಯಲ್ಲಿ ತೆರೆದಿದ್ದವು. ಹಣ್ಣು-ಹಂಪಲುಗಳನ್ನು ಖರೀದಿಸಲು ಗ್ರಾಹಕರು ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದರು.

ಕೆಲ ವ್ಯಾಪಾರಸ್ಥರು ತಳ್ಳುವ ಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಹೂ., ಹಣ್ಣು, ಹಬ್ಬದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಬೇಕರಿಗಳಲ್ಲಿ ಬೆಳಗ್ಗೆಯಿಂದಲೇ ಸಿಹಿ ತಿಂಡಿಗಳ ವ್ಯಾಪಾರ ಭರ್ಜರಿಯಾಗಿ ನಡೆ ಯಿತು. ಗುರುವಾರ ಸಂಜೆ ಮೂರು ಗಂಟೆಗೆ ಆರಂಭವಾದ ಮಳೆ ಸಂಜೆ 6 ಗಂಟೆವರೆಗೂ ಬೀಳುತ್ತಿತ್ತು. ಪಟ್ಟಣದ ತಾಪಂ ಕಚೇರಿ ಎದುರು ಹಣ್ಣು ಹಂಪಲು ಅಂಗಡಿಗಳು ತೆರೆದಿದ್ದರೂ ಅಲ್ಲಿಯೂ ವ್ಯಾಪಾರ ಜೋರಾಗಿಯೇ ಇತ್ತು.

ಹಣ್ಣಿನ ಬೆಲೆ: ಸೇಬಿನ ಕೇಜಿಗೆ 250 ರೂ., ಮೂಸಂಬಿ, ಕಿತ್ತಳೆ 120 ರೂ., ಬಾಳೆಹಣ್ಣು 100 ರೂ., ಚೇಪೆ ಹಣ್ಣು 100 ರೂ., ಮುಸುಕಿನ ಜೋಳ ಕೆ.ಜಿ. 50 ರೂ., ದ್ರಾಕ್ಷಿ 200 ರೂ., ಮಲ್ಲಿಗೆ ಪ್ರತಿ ಕೆ.ಜಿ.ಗೆ 800 ರೂ., ಕನಕಾಂಬರ ಪ್ರತಿ ಕೆ.ಜಿ.ಗೆ 1200 ರೂ., ವರಮಹಾಲಕ್ಷ್ಮೀಗೆ ಬೇಕಾದ ಹಾರದ ಬೆಲೆ 250 ರೂ. ಇತ್ತು.

 

● ಎಂ.ಸಿ.ಮಂಜುನಾಥ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಳೆಗಾರರು ಅಡಿಕೆ ಮತ್ತು ತೆಂಗು ಬೆಳೆಗಳ ಮಧ್ಯೆ ಕೊಕ್ಕೋ ಬೆಳೆದು ಯಶಸ್ವಿಯಾಗಿದ್ದರು. ಆದರೆ ಕೊಕ್ಕೋ ಬೆಳೆಯುವ ಪ್ರಮಾಣವನ್ನು ಹೆಚ್ಚಿಸಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ...

  • ಒಂದಾನೊಂದು ಕಾಲದಲ್ಲಿ ಒಬ್ಬ ಕೃಷಿಕ ಒಂದು ಊರಿನಲ್ಲಿ ಕೃಷಿ ಮಾಡುತ್ತಿದ್ದ. ತನ್ನ ಜಮೀನಿಗೆ ಬೇಕಾದಷ್ಟು ಜಾನುವಾರುಗಳನ್ನು ಸಾಕಿಕೊಂಡಿದ್ದ. ಅವನಲ್ಲಿ ಕೆಲವು...

  • ಎರಡು ವಿಭಿನ್ನ ಸಂಸ್ಕೃತಿಗಳಲ್ಲಿ ಮೊಳಕೆಯೊಡೆಯುವ ಪ್ರೇಮಕಥೆಗಳು ವಿಸ್ತಾರಗೊಳ್ಳುತ್ತ ಒಂದಕ್ಕೊಂದು ಹೆಣೆದುಕೊಂಡು ಕಡೆಗೆ ಸಂಧಿಸಿದರೂ ದೂರವಾಗಿಯೇ ಅಂತ್ಯವಾಗುವ...

  • ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು...

  • ಕಾಂಪೋಸ್ಟ್‌ ಗೊಬ್ಬರವನ್ನು ಹರಡುವ ಯಂತ್ರಚಾಲಿತ ಉಪಕರಣ ಇದು. ಇದರ ಹೆಸರು "ಕಾಂಪೋಸ್ಟ್‌ ಸ್ಪ್ರೆಡ್ಡರ್‌'. ದೊಡ್ಡ ಪ್ರಮಾಣದಲ್ಲಿ ಕಾಂಪೋಸ್ಟ್‌ ಗೊಬ್ಬರವನ್ನು...